ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಡಲಶಯನ ಹರೇ ಉಡುಪತಿ ಕುಲದೊರೆ ಪ ಅಡಿಗೆರಗಿದೆ ನಿನ್ನ ನೀಡೆಲೊ ಕರಗಳ ಅ.ಪ ನಡೆಯುವ ಪದಗಳು ಎಡವದಿರುವುದೇನೊ ಕಡುಮಂದನಲಿ ದಯ ಸಡಿಲಿಸದಿರೊ ದೇವ 1 ಕಂದನು ಪುಟ್ಟಲು ಅಂಧನಾಗಿರೆ ಅದನು ಚೆಂದವಿಲ್ಲೆನುತ ಬೀಸುವಳೆ ಜನನಿ 2 ಹೇಯ ಸಂಸಾರದಿ ಗಾಯವ ಪೊಂದಿ ನಾ ನೋಯುತಿರುವೆನು ಉಪಾಯವ ಕಾಣದೆ 3 ಲೋಪಗಳಿಗೆ ಬಲು ಕೋಪಿಸದೆ ಅಯ್ಯೋ ಪಾಪವೆಂದೆನ್ನುತ ಕಾಪಾಡೆಲೋ ದೇವ 4 ಎನ್ನೊಳು ದಯದಿ ಪ್ರಸನ್ನನಾಗುವೆಯೆಂದು ಎನ್ನಮನದಿ ಸದಾ ಧ್ಯಾನಿಸುವೆನೋ ದೇವ 5
--------------
ವಿದ್ಯಾಪ್ರಸನ್ನತೀರ್ಥರು
ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ನಿನ್ನ ನೋಡುವೆ ಪ. ಹಾಡಿ ದಣಿಯುವೆ ಅ.ಪ ಅನುದಿನದಿ ನಿನ್ನ ನಾಮ ನೆನೆಯುವಂತೆ ಜಿಹ್ವೆಯಲ್ಲಿ ನಿತ್ಯ 1 ಹರುಷದಿಂದ ನಿನ್ನ ನಾಮ ಸ್ಮರಿಸುವೆನೋ ದೇವ ದೇವ ಎನ್ನ ಮರಣ ಸಮಯದಲ್ಲಿ ನಿನ್ನ ಸ್ಮರಣೆ ಇತ್ತು ಕಾಯೋ 2 ಮೊದಲಿನಿಂದ ಭಜಿಸಿದೆನಾ ಹೃದಯದಲ್ಲಿ ನೋಯುತಿರುವೆ ಮುದದಿ ಬಂದು ಎನ್ನ ಜಿಹ್ವೆಗೊದಗೊ ಆಗ ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ