ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪುಣ್ಯದ ಹಾದಿಯ ಪೇಳ್ವೆ ಪೇಳಿದಂದದಲಿರೆ ಪುಣ್ಯಲೋಕವು ನಿನಗಣ್ಣಪುಣ್ಯವ ಕೆಡುಗೊಡದಲೆ ನೀನು ನಡೆದರೆ ಪುಣ್ಯ ಪುರುಷನಹೆಯಣ್ಣ ಪ ಬಿಸಿಲೊಳಗಿದ್ದವರ ನೀನು ನೆರಳಿಗೆ ಕರೆದರೆ ಬಹಳ ಸುಖವು ನಿನಗಣ್ಣಹಸಿದು ಬಂದವರಿಗೆ ತುತ್ತನಿಕ್ಕಲು ನಿನಗೆ ಅರಕೆಯಿಲ್ಲದ ಅನ್ನವಣ್ಣ 1 ನೀರಡಸಿದವರಿಗೆ ನೀರನ್ನು ಎರೆದರೆ ನಿನಗೆಂದು ಕಷ್ಟವಿಲ್ಲಣ್ಣದಾರಿ ತಪ್ಪಿದವರಿಗೆ ದಾರಿಯ ತೋರಿಸೆ ಧಾವತಿ ನಿನಗಿಲ್ಲವಣ್ಣ 2 ಮನೆಯಿಲ್ಲದವರಿಗೆ ಮನೆಯ ಕೊಟ್ಟೊಡೆ ನಿನಗೆ ಮುಂದಿಹುದು ಮನೆಯಣ್ಣಇನಿತು ವಸ್ತ್ರವಿಲ್ಲದವಗೆ ವಸ್ತ್ರವನು ಕೊಡೆ ಏನು ವಿಪತ್ತು ನಿನಗಾಗದಣ್ಣ 3 ಬಡವರನು ಮುಂದಂತೆ ತಂದರು ನೀನೀಗ ಬಲವಂತನಾಗುವೆಯಣ್ಣನುಡಿಯಲು ಒಳ್ಳೆಯ ವಾಕ್ಯವ ನೀನೀಗ ನೋಯದಂತಿರುವೆ ಮುಂದಣ್ಣ4 ವನಗುಡಿ ಕೆರೆಬಾವಿ ಧರ್ಮ ಮಳಿಗೆ ಹಾಕೆ ಒಲಿವನು ಶಿವನು ನಿನಗಣ್ಣಘನ ಚಿದಾನಂದ ಸತ್ಪುರುಷರ ಸೇರಲು ಘಟ್ಟಿ ಮುಕ್ತಿಯು ನಿನಗಣ್ಣ5
--------------
ಚಿದಾನಂದ ಅವಧೂತರು