ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ) ರುದ್ರದೇವರು ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ ಪ ಹಸುಳೆ ಪಾರ್ವತಿಯ ತಪಸಿಗೆ ಮೆಚ್ಚಿದಜಟಾಮಂಡಲಧಾರಿ ಕಾಣಮ್ಮ ಅ.ಪ. ಕೈಲಾಸಗಿರಿಯ ದೊರೆಯಿವನಮ್ಮ-ಅದು ಅಲ್ಲದೆ ಕೇಳೆಬೈಲು ಸ್ಮಶಾನದಿ ಮನೆಯಿವಗಮ್ಮ-ಸಂಕರ್ಷಣನೆಂದುಕೇಳೆ ಮಹಿಯೊಳು ಜನ ಪೊಗಳುವರಮ್ಮ-ಇದು ನಿಜವಮ್ಮನಾಲಿಗೆ ಸಾಸಿರ ಫಣಿಭೂಷಣ ನಮ್ಮರಮೆಯರಸಗೆ ಇವ ಮೊಮ್ಮಗನಮ್ಮ 1 ಪತಿ ಇವನಮ್ಮ-ಮಾವನ ಯಾಗದಲಿಬ್ಹಾಳ ಕೃತ್ಯಗಳನು ನಡೆಸಿದನಮ್ಮ-ಸಾಗರದಲಿ ಹುಟ್ಟಿದಕಾಳಕೂಟವ ಭಕ್ಷಿಸಿದನಮ್ಮ-ರಾಮನ ದಯವಮ್ಮಮೇಲೆ ಉಳಿಯಲು ಶೇಷಗರಳವುನೀಲಕಂಠನೆಂದೆನಿಸಿದನಮ್ಮ2 ಹರನೊಂದಿಗೆ ವೈಕುಂಠಕೆ ಬರಲು-ತಾತಗೆ ವಂದಿಸುತತರುಣೀರೂಪವ ನೋಡ್ವೆನೆನಲು-ಹರಿ ತಾ ನಸುನಗುತಕರೆದು ಸೈರಿಸಲಾರೆ ನೀ ಎನಲು-ಹಠದಿ ಕುಳ್ಳಿರಲುಕರುಣೆಗಳರಸನು ಹರನ ಮೊಗವ ನೋಡಿಅರುಣೋದಯಕೆ ಬಾರೆಂದು ಕಳುಹಿದ 3 ಅರುಣೋದಯಕೆ ಗಂಗಾಧರ ಬರಲು-ಹದಿನಾರು ವರುಷದ ತರುಣೀರೂಪದಿ ಹರಿ ವನದೊಳಗಿರಲು-ಚರಣನಖಾಗ್ರದಿಧರಣೀ ಬರೆಯುತ್ತ ನಿಂತಿರಲು-ಸೆರಗ ಪಿಡಿಯೆ ಬರಲುಕರದಿ ಶಂಖ ಗದೆ ಚಕ್ರವ ತೋರಲುಹರನು ನಾಚಿ ತಲೆತಗ್ಗಿಸಿ ನಿಂತ4 ಮಂಗಳಾಂಗನೆ ಮಾರಜನಕ-ನಾ ಮಾಡಿದ ತಪ್ಪಹಿಂಗದೆ ಕ್ಷಮಿಸೊ ಯದುಕುಲ ತಿಲಕ-ವಕ್ಷದಲೊಪ್ಪುವ ನಿನ್ನಂಗನೆ ಅರಿಯಳು ನಖಮಹಿಮಾಂಕ-ಹೀಗೆನುತಲಿ ತವಕರಂಗವಿಠಲನ ಪದಂಗಳ ಪಿಡಿದು ಸಾಷ್ಟಾಂಗವೆರಗಿ ಕೈಲಾಸಕೆ ನಡೆದ 5
--------------
ಶ್ರೀಪಾದರಾಜರು
ನೋಡೆಲೊ ಎನ್ನ ಕರುಣದಿ ಹರಿ ಮಾಡೊ ಉದ್ಧಾರ ಬೇಗದಿ ಪ ರೂಢಿಯೊಳು ಮುಖ ಮಾಡಿ ಪರರನು ಮಾಧವ ಅ.ಪ ಸೃಷ್ಟಿಯೊಳೆನ್ನ ನೂಕಿ ಯಾತಕೆ ಬಿಟ್ಟಿ ಬೇಸರ ಮಾಡುವಿ ಕೆಟ್ಟಹೊಟ್ಟೆಯ ಕೊಟ್ಟು ವಿಧವಿಧ ಭ್ರಷ್ಟನೆನಿಸುವುದೇನಿದಭವ 1 ಜ್ಞಾನಶೂನ್ಯನ ಮಾಡೀಭವಕೆ ನೀನೆನೂಕಿದೆ ಮತ್ತಾರೆಲೊ ಏನುಕಾರಣ ಪಾಪಿಯೆಂದೆನ್ನ ಹೀನದೃಷ್ಟಿಲಿ ನೋಡ್ವೆ ದೇವ 2 ಏನು ಸ್ವಾಧೀನ ಕೊಟ್ಟದ್ದೆನ್ನಗೆ ನೀನೆ ನ್ಯಾಯವು ಪೇಳಯ್ಯ ನೀನೆ ಸಕಲ ಸ್ವತಂತ್ರ ಎನಗೆ ಜ್ಞಾನ ಪಾಲಿಸಿ ಪೊರೆ ಶ್ರೀರಾಮ 3
--------------
ರಾಮದಾಸರು
ಬೆಳೆಗಿಂಝಾವದಿ ಬಾರೊ ಹರಿಯೆ ನಿನ್ನ ಕಳೆಕಳೆ ರೂಪ ನೋಡುವೆ ಮುಕುಂದ ಪ. ಭಕ್ತರ ಭಯ ನಿವಾರಣನೆ ಭಕ್ತಿಲಿ ಕರೆವೆ ಗೋವಿಂದ ನಿನ್ನನೆ ಭಕ್ತವತ್ಸಲ ನೀನಲ್ಲವೇ ಸ ದ್ಭಕ್ತರ ಸಲಹೆ ಕಂಕಣ ಧರಿಸಿಹನೆ 1 ಶ್ರೀ ತುಳಸಿಯ ವನಮಾಲ ಶ್ರೀ ಕೃಷ್ಣ ನಿನ್ನ ದರ್ಶನದ ಲಾಭ ಶ್ರೀಶನೆ ಬಯಸುವೆ ದೇವ ಶ್ರೀರಮೆಯರಸ ದಯಪಾಲಿಸೊ ಕೃಷ್ಣ 2 ಒಮ್ಮೆಯಾದರೂ ತೋರೊ ರೂಪ ಎನ್ನ ಕರ್ಮ ಖಂಡನವಹ ತೆರೆದೊಳು ಶ್ರೀಪ ಬೊಮ್ಮನೈಯ್ಯ ನಿನ್ನ ನೋಡ್ವೆ ಸುಮ್ಮಾನವ್ಯಾಕೊ ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ
ಹೃದಯ ವೃಂದಾವನದೊಳಿರುವ ಕೃಷ್ಣನ ಸಾಧಿಸಿ ನೋಡ್ವೆನೆಂದು ಪೋದರು ಗೋಪಾಂಗನಾ ಪ ನಾದದ ಕೊಳಲನ್ನು ಊದುವ ವೇಳ್ಯದಿ ಸದ್ಭಕ್ತಿವೆತ್ತಿಗೋಪಾಂಗನಾ ವಿನೋದದಿ ಆಧಾರ ಮಾರ್ಗದಿಂದಾ ಪೋದರು ಬೇಗದಿ ಶೋಧಿಸಿ ನೋಡಲಾಗಿ ತ್ಯಾಗಿಸಿ ಕಾಮನಾ 1 ಉಬ್ಬೇರಿ ಮೆಲ್ಭಾಗದಿಂದಾ ವಿನೋದದಿ ಅಬ್ಬರದಿಂದಲೀ ಆ ಷಟದ್ವಾರ ಭೇದದಿ ಗರ್ಭಿತನಾದ ರಾಜಹಂಸೊಹಂಸ್ವರದಿ ಮುಬ್ಬರದಿಂದಲಿ ಪಾಡುತ್ತಾ ರಂಗನ 2 ನಳಿನ ಚಂಪಕಾದಿ ನಾಗ ಪುನ್ನಾಗವು ಕುಂದ ಬಕುಲವು ಮಾಲತಿ ಜಾಜಿ ಹೂವು ಶ್ರಿಲೋಲನಾಮವೂ ಮೇಳಿತವಾಗಿ ಪೋಗಿ ಏರಿದರು ಸುಮನಾ 3 ಮೂರ್ತಿ ಸಂಗೀತ ಕೇಳುತಾ ಆ ಮಹಾ ಮಕುಟದಾ ಬೆಳಕು ನೋಡುತಾ ಶ್ರೀ ಗುರುಮಹಾದೇವನೊಳ್ ರಮಿಸಿ ಸೂಸದಾ ಪ್ರೇಮದಿ ಶಾಂತಿ ಸುಖದೊಳ್ ಬೆರತು ಸಘನಾ 4
--------------
ಶಾಂತಿಬಾಯಿ
ವ್ಯರ್ಥ ಕೆಟ್ಟೆಯೋ ಸಂಸಾರವನು ನಂಬಿಕಾಣೆನೋ ಜನರನು ಯಡ್ಡೆಸಾರ್ಥಕವಾಗುವಮಾರ್ಗಕಾಣಲಿಲ್ಲನರಜನ್ಮಕೆ ಬಂದು ಗೊಡ್ಡೆಪಹಿರಿಯರನಂಜಿಯೋ ಹೆಂಡತಿ ಕಿವಿಯೊಳುಲೊಟಕೆಯ ಹಾಕುವ ಮಂದಿದುರುಳಯಮದೂತರು ತಾವೀಗ ಬಂದರೆಹಾಕುವವರು ನಿನಗೆ ಭಂಗಿ1ದಾನಕೆ ಇಲ್ಲವು ಧರ್ಮಕೆ ಇಲ್ಲವುಹೆಂಡತಿಯಾದರೆ ಬಡವಿಏನು ಎಂಬೆಯೋ ಯಮದೂತರವರಿಗೆಹೇಳಲೋ ನೀನೀಗ ಬಡವಿ2ಹೆಂಡತಿ ಮರುಕಕೆ ಬಗ್ಗಿ ಬಗ್ಗಿಯೇ ನೋಡ್ವೆಮೋರೆಯ ಬಣ್ಣಕೆ ಮೆಚ್ಚಿಭಂಟರು ಯಮದೂರತು ಬರಲು ಏನಹೇಳುವೆಯಲೆ ಹುಚ್ಚಿ3ಹೆಂಡತಿ ಮಕ್ಕಳು ಬುದ್ಧಿಯ ಹೇಳುವರುವಳ್ಳಿತಾಗಿ ನೀನೀಗ ಕೇಳೋಕೆಂಡವನುಗುಳುತ ಯಮದೂತರೊಯಿದರೆಬಿಡಿಸಿಕೊಳ್ಳಹೇಳೋ4ಹೆಂಡಿರು ಮಕ್ಕಳು ಹಿತರೆಂದು ನಂಬಲುಕೆಡುವೆ ನೀನೀಗ ಕಂಡ್ಯಾಚೆನ್ನ ಚಿದಾನಂದ ಸದ್ಗುರುವನು ನಂಬುಕಡೆಹಾಯಿದು ಹೋಗುವಿ ಕಂಡ್ಯಾ5
--------------
ಚಿದಾನಂದ ಅವಧೂತರು