ಸಂದೇಹ ವೇತಕೆ ಸರ್ವೇಶಾ
ಇಂದೆನ್ನ ಹೃದಯಾದಿ ನಿಂದೆನ್ನ ರಕ್ಷಿಸಲು ಪ
ಹಿಂದೆ ನೀ ಸಲಹಿದವರು ಹೊಂದಿದವರೇನಾ
ಪಾದ ಹೊಂದಲಲ್ಲೇ
ಬಂದೆನ್ನ ಅತಿತ್ವರದಿಂದೆನ್ನ ಕೈಯಪಿಡಿದು
ಅಂಧ ನಾ ತೋರಿಸಾ ನಂದನ ಸುತಹರಿ 1
ಭಂಡಾರ ವುಳ್ಳವನಾಗಿ ನೀನುಯನ್ನ
ಕಂಡಾರೆ--------------
-------------- ಏನು
ಹೆಂಡಾರ ಮೇಲೆ ದೃಷ್ಟಿ ಗಂಡಾರಿಗಿಲ್ಲದಿರೆ
ದುಂಡೇರಿಗೇನುಗತಿ ಪುಂಡರೀಕ್ಷಾಕ ಹರಿ 2
ನಿನ್ನನ್ನೇ ನಂಬಿದವ ನಾನು ಇನ್ನು
ಯನ್ನಾ ನೀಕಡೆ ದೃಷ್ಟಿ ನೋಡ್ವದೇ ನೋ
ನಿನ್ನಾಣೆ ನಿನಗೆ ಇನ್ನು ಎನ್ನ ನೀ ಸಲುಹದಿರೆ
ಮುನ್ನೀನಾ ದೋಷ ಕಳೆದು 'ಹೆನ್ನೆಯ ವಿಠಲಾ’ 3