ಬಾರಯ್ಯ ಬಾರೊ ಗುರುರಾಯ ತೋರಯ್ಯ ನಿಜಪ್ರಭೆಯ
ಬೀರಿಸಯ್ಯ ನಿಮ್ಮದಯಕರುಣಿಸಯ್ಯಾನಂದೋದಯ ಧ್ರುವ
ಇಂದು ಪುಣ್ಯಚರಣ ನೋಡೇನೆಂದು
ಮನ್ನಿಸಯ್ಯ ಕೃಪಾಸಿಂಧು ಧನ್ಯಗೈಸಯ್ಯ ನೀ ಬಂದು 1
ಮನವು ನೆನವುತದೆ ನಿಮ್ಮ ಅನುವಾಗಿ ನೋಡೇನೊಮ್ಮೆ
ಕನಗರಿಸೇಳುತ್ತದೆ ನಿಮ್ಮ ಅನುಕೂಲಾಗಾನಂದೋಬ್ರಹ್ಮ 2
ನೆವನಗೊಂಡಿದೆನ್ನಪ್ರಾಣ ಹವಣಿಸಿ ನೋಡಲು ಖೂನ
ಭಾವಿಸುತಿದೆ ಜೀವನ ದೈವಾಗಿಬಾರಯ್ಯ ಪೂರ್ಣ 3
ಕಂದ ನಿಮ್ಮ ಮಹಿಪತೆಂದು ಬಂದು ಕೂಡೊ ಹೃದಯಲಿಂದು
ತಂದೆ ತಾಯಿ ನೀನೆ ಬಂಧು ಎಂದೆಂದಗಲದಿರೊ ಬಂದು 4