ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕದನ ಕಠೋರಿ ಬಂದುಕಾಲುಕೆದರ ಬ್ಯಾಡ ಮದನನ ಮಾತಿಗೆ ಇದುರೇನ ಎಲ್ಲ ನೀ ನೋಡ ಪ. ಓಡಿ ಬಂದವಳೆಂದು ಆಡಿದೆ ನೀ ಎನಗೆತಿರುಗಿ ಆಡಿದಲ್ಲೆ ಏನೂ ಹುರುಳಿಲ್ಲ ಎಲೆ ನೋಡೆತಿರುಗಿ ಆಡಿದಲ್ಲೆ ಏನೂ ಹುರುಳಿಲ್ಲ ಸುಭದ್ರ ನೋಡಿಕೋನಿನ ಮನದಲ್ಲೆ ಎಲ್ಲ ನೋಡೆ1 ಅಣ್ಣನ ವಂಚಿಸಿ ಓಡಿ ಬಂದವಳೆಂದುಎನ್ನನೆ ನುಡಿದೆ ಸುಭದ್ರಾ ಎಲೆ ನೋಡೆಎನ್ನನೆ ನುಡಿದೆ ಸುಭದ್ರಾನಿನ್ನಂತೆ ಸನ್ಯಾಸಿಯೊಡನೆ ಬರಲಿಲ್ಲ ಎಲ್ಲಿ ನೋಡೆ2 ಅತ್ತೆಯ ಮಗಳೆಂದು ಹತ್ತೆಂಟು ತಾಳಿದೆ ಒಂದುತ್ತರ ನಿನಗೆ ಕೊಡತೇನ ಎಲೆ ನೋಡೆಒಂದುತ್ತರ ನಿನಗೆ ಕೊಡತೇನ ಸುಭದ್ರಾಚಿತ್ತಕ್ಕೆ ಹೋಗಿ ನಡುವಂತೆ ಎಲೆ ನೋಡೆ 3 ಒಂದು ನುಡಿದು ಹನ್ನೊಂದು ನುಡಿಸಿಕೊಂಡೆಕುಂದದಂಥsÀವಳೆ ನಿನ್ನ ಬಣ್ಣ ಎಲೆ ನೋಡೆಕುಂದದಂಥsÀವಳೆ ನಿನ್ನ ಬಣ್ಣ ಸುಭದ್ರಾಬಂದದಾರಿ ಹಿಡಿದು ತಿರುಗಿ ಹೋಗೆ 4 ಬಾಳುವರ ಮನೆ ಮುಂದೆ ಕೋಳಿ ಕೂಗಿದಂತೆವೀಳ್ಯವ ಕೊಟ್ಟು ಯಾತರಿಂದ ಎಲೆನೋಡೆವೀಳ್ಯವ ಕೊಟ್ಟು ಯಾತರಿಂದ ಹೊಡೆಸಿಕೊಂಡಿನಿಲ್ಲದೆ ಹೋಗೆ ಮನೆತನಕ ಎಲೆ ನೋಡೆ 5 ಕುದುರೆಯ ಸಂಗಡ ಕುರಿ ಹುಲ್ಲು ಮೆಯ್ದರೆಕುದುರೆ ಹಿಂಗಾಲಿಲೆ ಒದೆಯದೆ ಎಲೆ ನೋಡೆಕುದುರೆ ಹಿಂಗಾಲಿಲೆ ಒದೆಯದೆ ಸುಭದ್ರಾಸುದತೆ ರುಕ್ಮಿಣಿಗೆ ಸರಿಯೇನೆ ನೋಡೆ6 ಆನೆಯ ಸಂಗಡ ಆಡು ಹುಲ್ಲು ಮೆಯ್ದೆರೆ ಆನೆ ಹಿಂಗಾಲಿಲೆ ಒದೆಯದೆ ಎಲೆ ನೋಡೆಆನೆ ಹಿಂಗಾಲಿಲೆ ಒದೆಯದೆ ಸುಭದ್ರಾನೀ ರಾಮೇಶನ ಮಡದಿಯ ಸರಿಯೇನೆ ಎಲೆ ನೋಡೆ 7
--------------
ಗಲಗಲಿಅವ್ವನವರು
ನಿಷ್ಠೆಯಿಂದ ನಿಂತ ಈ ಪುಟ್ಟ ಕಪಿಯ ನೋಡೆ ಪ. ಎಷ್ಟು ಮೌನ ಧರಿಸಿದಂಥ ಪುಟ್ಟ ಕಪಿಯ ನೋಡೆ ಅ.ಪ. ವಾರಿಧಿಯ ದಾಟಿದಂಥ ಪುಟ್ಟ ಕಪಿಯ ನೋಡೆ ಹೀರಿದ ಕುರುಪರ ರಕ್ತ ಪುಟ್ಟ ಕಪಿಯ ನೋಡೆ 1 ತೂರಿದ ಅನ್ಯರ ಮತ ಪುಟ್ಟ ಕಪಿಯ ನೋಡೆ ಸಾರಿ ಹರಿ ಸರ್ವೋತ್ತಮನೆಂದ ಪುಟ್ಟ ಕಪಿಯ ನೋಡೆ2 ಶೌರ್ಯವೆಲ್ಲ ಉಡುಗಿದಂಥ ಪುಟ್ಟ ಕಪಿಯ ನೋಡೆ ಹಾರಿ ಯಂತ್ರದಲ್ಲಿ ಶಿಲ್ಕಿದ ಪುಟ್ಟ ಕಪಿಯ ನೋಡೆ 3 ಮಾನ ಉಳಿಸಿಕೊಳ್ಳಲು ಮೌನದ ಪುಟ್ಟ ಕಪಿಯ ನೋಡೆ ಧ್ಯಾನ ಮುದ್ರಾಂಕಿತದಿ ಶೋಭಿಪ ಪುಟ್ಟ ಕಪಿಯ ನೋಡೆ 4 ಯೋಗಾಸನದಿ ಪದ್ಮಾಸನವು ಪುಟ್ಟ ಕಪಿಯ ನೋಡೆ ವಾಗೀಶನ ಪದಕ್ಹೋಗುವ ತಪದ ಪುಟ್ಟ ಕಪಿಯ ನೋಡೆ 5 ವ್ಯಾಸರಿಗೊಲಿದ ವೇಷಧಾರಕ ಪುಟ್ಟ ಕಪಿಯ ನೋಡೆ ಮೋಸವೊ ಧ್ಯಾನವೊ ಅರಿಯೆ ಪುಟ್ಟ ಕಪಿಯ ನೋಡೆ 6 ಕಷ್ಟದ ಭವಕಟ್ಟು ಬಿಡಿಸುವ ಪುಟ್ಟ ಕಪಿಯ ನೋಡೆ ಕಟ್ಟಿನೊಳ ಸಿಲ್ಕಿ ಗುಟ್ಟು ತಿಳಿಸದ ಪುಟ್ಟ ಕಪಿಯ ನೋಡೆ 7 ಸಿದ್ಧ ಸಾಧನ ಬುದ್ಧಿ ಬಲಿದ ಪುಟ್ಟ ಕಪಿಯ ನೋಡೆ ಉದ್ಧಾರಕ ಪ್ರಸಿದ್ಧ ಪುರುಷ ಪುಟ್ಟ ಕಪಿಯ ನೋಡೆ 8 ಸ್ವಾಪರೋಕ್ಷಿ ಜಗದ್ವ್ಯಾಪಕನಾದ ಪುಟ್ಟ ಕಪಿಯ ನೋಡೆ ಗೋಪಾಲಕೃಷ್ಣವಿಠ್ಠಲನ ದಾಸನೀ ಪುಟ್ಟ ಕಪಿಯ ನೋಡೆ 9
--------------
ಅಂಬಾಬಾಯಿ
ಆರ ಬಾಲಕನೆ ಜಾರನಿವನಾರ ಬಾಲಕನೆ ಪ.ಗುಂಡಿಗೆ ಬೆಣ್ಣೆ ಕದ್ದುಂಡಸಿಯರ ಕುಚಪುಂಡರೀಕವಿಡಿದು ಭಂಡು ಮಾಡುತಲಿಹ 1ನಿದ್ದೆಯ ಕಾಲಕೆ ಸದ್ದಿಲ್ಲದೆ ಬಂದುಗದ್ದಮುಂಡ್ಯಾಡಪ್ಪಿ ಮುದ್ದು ನೀಡುವ ನೋಡೆ2ಅರ್ತಿಲಿ ಬಾಲನ್ನೆತ್ತಿಕೊಂಡರೇನಮ್ಮಅತ್ತೆ ಮಾವನ ಮುಂದೆ ಬತ್ತಲೆ ಮಾಡುವ 3ಬಲು ಮೋಹ ಬರುತಿರೆ ಎಳೆಯನ ಕಾಣುತಅಳುಕದೆಮ್ಮುಡಿಯೇರಿ ಕಳೆವಕಂಚುಕಇವ4ಹುಸಿಯೇ ಅಳಲು ಅವಚಿ ರಂಬಿಸಿದ ಮೇಲೆಪ್ರಸನ್ವೆಂಕಟ ಕೃಷ್ಣ ನಸುನಗು ನಗುತಾನೆ 5
--------------
ಪ್ರಸನ್ನವೆಂಕಟದಾಸರು
ಶ್ರೀಗುರು ಎಂಥಾ ದಯವಂತನಿಹ ನೋಡೆಈಗ ಋಣವ ಕಳೆದೆನೆನಲು ಆನಂದವಹುದು ನೋಡೆಪಕರೆಯುತ ಸನಿಹಕೆ ಚರಣವ ಶಿರದಲಿಟ್ಟನು ನೋಡೆಹರುಷ ಉಕ್ಕುತ ಎನ್ನ ಮುಖವ ನೋಡಿದ ನೋಡೆಪರಮಾತ್ಮನು ನೀತಿ ಎಂದುಪರಿಪರಿ ಹೇಳಿದ ನೋಡೆಅರೆಮರೆಯೆಲ್ಲವು ನೀ ಬ್ರಹ್ಮನೆಂದು ಆಡಿದ ಕರ್ಣದಿ ನೋಡೆ1ತೋರುವುದೆಲ್ಲವು ನೀನೆ ಎಂದು ತಿಳುಹಿದ ಎನ್ನನು ನೋಡೆದಾರಾಸುತ ಸಹೋದರರೆಂಬರ ದಾರಿಯ ಬಿಡಿಸಿದ ನೋಡೆಮೂರು ಗುಣಗಳ ಮಂದಮತಿಗಳ ಮುಂದುಗೆಡೆಸಿದ ನೋಡೆಕಾರಣಕಾರ್ಯವ ಕಳೆದ ಅವಿದ್ಯದ ಕಷ್ಟವ ಕಳೆದ ನೋಡೆ2ಷಟ್ಚಕ್ರಂಗಳ ದಾಟಿಸಿ ಎನ್ನುನು ಶ್ರೇಷ್ಠನ ಮಾಡಿದ ನೋಡೆಅಡರಿಸಿ ಮೇಲಕೆ ಸಹಸ್ರಾರದಿ ಆನಂದಿಸಿದನು ನೋಡೆಕಿಡಿಯುಗುಳುವ ಕೋಟ್ಯಾದಿತ್ಯರ ಬೆಳಕನು ತೋರಿದ ನೋಡೆಮೃಡಚಿದಾನಂದ ಸದ್ಗುರು ಬ್ರಹ್ಮದಿ ಮುಕ್ತನು ಮಾಡಿದ ನೋಡೆ3
--------------
ಚಿದಾನಂದ ಅವಧೂತರು