ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿ ನೆನೆಯೋ ಹರಿಯನಾಮ|ವಿಡಿದು ಘನ ಪ್ರೇಮಾ| ಭಾವಿಸೆಲೋ ನಿಷ್ಕಾಮಾ| ಇಂಬಾಗಿ ಹೊರೆವನು ನೇಮಾ ಮಂಗಳ ಧಾಮಾ ಪ ಹೆಸರಿಟ್ಟು ಹೋಲಿಸಿ ಕರೆದಾಜಮಿಳಗ ವರದಾ| ನೋಡೆಲೋ ಹರಿ ಬಿರುದಾ| ವಸುಧಿಲಿ ಭಕುತಿಂದ ಬೆರೆದಾವಗೆ ನೆರದಾ 1 ಸಕಲಧರ್ಮಗಳಿಂದವ ಜಾರಿ ಯನ್ನ ಚರಣವ ಸಾರಿ| ಭಜಿಸೆಂದು ಉದಾರಿ| ಪ್ರಗಟದಿ ಅರ್ಜುನಗ ಸಾರಿದನೋ ಮುರಾರಿ2 ಇನ್ನೊಂದು ಸಾಧನವು ಸಲ್ಲಾ ಇದರಿಂದಧಿಕಿಲ್ಲಾ| ತಂದೆ ಮಹಿಪತಿ ಸೊಲ್ಲಾ| ಮನ್ನಿಸಿ ನಡೆಯಲು ಸುಲಭ ಕೈವಲ್ಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಚ್ಚತ್ತು ನಡಿ ಕಂಡ್ಯ ಮನವೇ ನಮ್ಮ ಅಚ್ಯುತನಂಘ್ರಿಗಳನು ನೆನೆ ಮನವೇ ನೀ ನೆನೆ ಕಂಡ್ಯ ಮನವೇ ಪ ಆಡದಿರಪವಾದಗಳನು ನೀನು ಕೊಂಡಾಡದಿರು ಚಿಲ್ಲರೆ ದೈವಗಳನು ಬೇಡಾಡದಿರುಭಯ ಸೌಖ್ಯಗಳನು ನೀ ಮಾಡಿ ಕಂಡ್ಯ ದುರ್ಜನರ ಸ್ನೇಹವನ್ನು ಸಜ್ಜನರ ದ್ವೇಷವನು 1 ಹಾಳು ಹರಟಿಗ್ಹೋಗ ಬ್ಯಾಡ ಕಂಡ ಕೂಳುಗಳನು ತಿಂದು ವಡಲ್ಹೊರಿಯ ಬೇಡ ಕಾಲ ವೃಥಾ ಕಳಿಯ ಬ್ಯಾಡ ನಮ್ಮ | ಶ್ರೀ ಹರಿ ದಯಮಾಡಾ 2 ನಾನು ಯೆಂಬುದು ಬಿಡು ಕಂಡ್ಯಾ ಎನ್ನ ಮಾನಾಭಿಮಾನದ ಹರಿಯನ್ನು ಕಂಡ್ಯಾ ಜ್ಞಾನಿಗಳೊಡನಾಡು ಕಂಡ್ಯಾ ವಿಷಯ ಬೀಳುವಿ ಯಮಕೊಂಡಾ 3 ಅನ್ಯಸ್ತ್ರೀಯರ ನೋಡಬ್ಯಾಡಾ ಹಿಂದೆ ಮಣ್ಣು ಕೂಡಿರುವರೆಗೊ ಕೇಳೊ ಮೂಢಾ ಅನ್ಯಶಾಸ್ತ್ರವನೋದ ಬ್ಯಾಡಾ ನಮ್ಮ ಮೈಮರೆದಿರ ಬ್ಯಾಡಾ4 ನರಜನ್ಮ ಬರುವೋದು ಕಷ್ಟ ಅಮ್ಮ ಹಿರಿದು ನೋಡೆಲೋ ವಿಪ್ರತ್ವವು ಶ್ರೇಷ್ಠ ಮರಳಿ ಬಾರದು ಉತ್ಕøಷ್ಟ ನಮ್ಮ ಕೇಳೆಲವೋ ಮರ್ಕಟ 5 ಗೋವಿಪ್ರರ ಸೇವೆ ಮಾಡೋ ಸೋಹಂ ಭಾವಗಳನು ಬಿಟ್ಟು ದಾಸತ್ವ ಕೂಡೋ ಕೇವಲ ವೈರಾಗ್ಯ ಮಾಡೋ ಎಂಟು ಲಜ್ಜೆಯನೀಡ್ಯಾಡೋ6 ಕಷ್ಟ ಪಡದೆ ಸುಖ ಬರದು ಕಂ ಗೆಟ್ಟ ಮ್ಯಾಲಲ್ಲದೆ ಕಷ್ಟ ತಿಳಿಯದು ದುಷ್ಟ ವಿಷಯದಾಶೆ ಜರಿದು ವಿಜಯ ವಿಠಲನೆನ್ನದೆ ಮುಕ್ತಿಯು ಬರದೂ, ಕೂಗೆಲವೊ ಬ್ಯಾದೆರದು 7
--------------
ವಿಜಯದಾಸ
ಹುಡುಕಿ ನೋಡೆಲೋ ನಿನ್ಯಾರೆಂದು ಧೃಢಚಿತ್ತಕÉ ತಂದು ಪ ಮಲಮೂತ್ರದ ಬೀಡು ಹೊಲೆಯ ಸಂಸಾರದೊಳೀಡು ಗುರುಚರಣಕೆ ಕೂಡು 1 ಏಸು ದುರ್ಗಂಧದೊಳು ನೀ ಬೆಳಿದೆ ಸೂತಕದಿಂದಿಳಿದೆ ಆಶಾಪಾಶದಲಿ ದಿನವನು ಕಳೆದೆ ಮಾಯೆಯೊಳು ಸಳಿದೆ 2 ಅಂತರಾತ್ಮನ ನೆಲೆಯ ಹುಡುಕು ಇದಕ್ಯಾತಕೆ ತುಡುಕು ಶಾಂತ ಶ್ರೀ ವಿಮಲಾನಂದನ ಹುಡುಕು ಅಜ್ಞಾನವ ಬಿಡುಕು 3
--------------
ಭಟಕಳ ಅಪ್ಪಯ್ಯ
ನಿಂದ್ಯನಾಡಲಿಕ್ಕೆ ನೀನು ಬಂದೆಯೇನಯ್ಯ ಕೃಷ್ಣವಂದಿಸಿ ಭಕ್ತರು ಕರೆದರೂ ನೀನು ಹಿಂದಕ್ಕೆ ಹೋಗುವಿ ಪ.ಅಂದು ಅಹÀಲ್ಯಾದೇವಿ ಬಿಟ್ಟು ಒಂದೆರಡು ದಿವಸÀ ಕೃಷ್ಣಬಂದವನಲ್ಲೋ ತ್ವರೆಯಛಂದಾಗಿ ಹೇಳಯ್ಯ ನಮಗೆ 1ಒಂದಾರು ತಿಂಗಳದಿವಸ ಕಂದ ದಣಿಯೆ ಕರುಣಿಸಬಾರದೆಬಂದದ್ದೇನು ಇಂಥ ತ್ವರೆಯಚಂದಾಗಿ ಹೇಳಯ್ಯ ನಮಗೆ 2ಹಣ್ಣು ಹಸಿರು ಎಲೆ ತಿಂದು ಸಣ್ಣ ಮಾಡಿ ಶರೀರವನುಬಣ್ಣಿಸಿ ಭಕ್ತರು ಕರೆದರೆನೀನು ಕಣ್ಣಿಲೆ ನೋಡೆಲೋಅವರ3ಆನೆ ಜನ್ಮ ಬಂದು ರಾಯ ನಾನಾ ದುಃಖ ಬಡಲು ತಾನುನೀನು ಮುಂದೆ ನೋಡಿದೆ ಸಾವಿರ ವರುಷ ಇನ್ನೇನುದಯವಯ್ಯ ಅವನಿಗಿನ್ನೇನು ದಯವಯ್ಯ 4ತಂದೆ ರಾಮೇಶನ ಮನೆಗೆ ಬಂದಿದ್ದರೆ ಬಹಳ ದಯವುಒಂದು ನೆಗಳಿ ಸಾವಿರ ವರುಷಹಿಂದಕ್ಕೆ ದಣಿದೆಲ್ಲೊ ಕೃಷ್ಣ 5
--------------
ಗಲಗಲಿಅವ್ವನವರು