ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘನ ಗುರು ನೀನೆನೋ ಎನಗೆ ಸಾಕ್ಷಾತವೋ ಮನಕಾದನಕೂಲವೋ ಧ್ರುವ ಕಣ್ಣಿಲೆ ಕಂಡೆವೋ ಚನ್ನಾಗ್ಹಿಡಿದೆವೋ ಇನ್ನೆಲ್ಲಿಗ್ಹೋದೆಲವೋ ಮುನ್ನಿನ ಪುಣ್ಯವೋ ನಿನ್ನ ನೋಡಿದೆವೋ ಧನ್ಯ ಧನ್ಯವಾದೆವೋ 1 ಸಾಧಿಸಿ ಬಿಡೆವೋ ಭೇದನ ಮಾಡೆವೋ ಸದಮಲ ಸುಖಗೂಡುವೆವೋ ಸಾಧನ ಮಾಡುವೆವೋ ಭೇದಿಸಿ ನೋಡುವೆವೋ ಸದೋದಿತ ಬೆರದಾಡುವೆವೋ 2 ಗುಹ್ಯ ಗುರುತವೋ ಧ್ಯಾನಿಸುವೆವೋ ದಂiÀiಮಾಡಬೇಕೆಲವೋ ಇಹಪರ ನೀನೆವೋಮಹಿಪತಿ ನಿಜವೋ ತಾಯಿತಂದೆ ನೀನೆವೋ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಧುರಾಪುರದಿಂದ ಎಂದಿಗೆ ಬರುವಿಯೊ ಕೃಷ್ಣಾ ಮಧುರಾಪುರದ ಬಾಲೆಯರು ಬಲು ಮೋಸಗಾರರು ಪ. ಗೋಕುಲದ ನಾರಿಯರು ನಾವು ಏಕವಾಗಿ ಬರುವೆವು ಅನೇಕ ಬಗಿಯ ಸುಖದಿಂದಾ ಗೋಪಿಯ ತಂದಾ ಅ.ಪ. ಯೆಂದಿಗೆ ನಿನ್ನ ಮುಖಾರವಿಂದವ ನೋಡುವೆವೋ ಅಂದಿಗೆ ಸುಖವೋ ಮಾಧವ ಮಂದರೊದ್ಧರನೆ ಮಾವ ಕಂಸನ ಕೊಂದು ಸಿಂಧುರನಯನನೆ ನೀ ಬೇಗ ಬರಬೇಕೆಂದು ನಾವು ಬೇಡುವೆವು ಬಂದು 1 ಮಧುವನದಲ್ಲಿ ನಿನ್ನಾ ಮಧುರ ಸ್ವರವನ್ನು ಕೇಳಿ ಮದನ ತಾಪಕೆಮ್ಮ ಮರುಳು ಮಾಡಿಸಿ ಮುರಲಿ ನುಡಿಸಿ ಆಧರಾಮೃತ ಪಾನವನ್ನೇ ಮಾಡಿಸಿದ ನಿನ್ನ ಮಹಿಮೆಯನ್ನು ತೋರಿದಿ2 ಯೆಷ್ಟು ಮೊರೆ ಪೊಕ್ಕಾರು ಒಂದಿಷ್ಟು ದಯವ್ಯಾಕೆ ಬಾರದೊ ನಿನ್ನ ಬಿಟ್ಟು ಒಂದರಘಳಿಗಿರಲಾರೆವು ನಾನು ಪ್ರಾಣನಾಯಕನೇ ಎನ್ನ ಪ್ರಾಣದೊಲ್ಲಭನೆ ಕೇಳೊ ಸರ್ವಪ್ರಾಣಿಗಳಿಗೆ ಪ್ರೇರಕನೆ ನಮ್ಮ ಕಾಳಿಮರ್ಧನ ಕೃಷ್ಣನು 3
--------------
ಕಳಸದ ಸುಂದರಮ್ಮ