ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟು ಪರೀಕ್ಷಿಸಿ ನೋಡುವೆಯೋ ಇನ್ನು ಎಷ್ಟು ಶೋಧಿಸೆ ನಿನಗಿಷ್ಟವೋ ರಂಗಾ ಪ ಹಣವಿರುವನಕ ಕುಣಿಕುಣಿದು ಮೆರೆದೆನೊ ಹಣವನಪಾತ್ರಕೆ ಮಣಿದು ಕಳೆದೆನೋ ಋಣವಮಾಡಿ ಯೆನ್ನ ಬಣಗುಹೊಟ್ಟೆಯ ಹೊರೆದೆ ಉಣಲುಡಲಿಲ್ಲದೆ ನೋಡದವೋಲಲೆದೇ 1 ಹೆಣ್ಣು ಹೊನ್ನು ಮಣ್ಣು ಕಣ್ಣಿಗಿಂಪಾಗಲು ಬಣ್ಣಿಸಿ ಭಾಗ್ಯವನುಣ್ಣಲು ಬಯಸಲು ಬೆಣ್ಣೆಯಂತಿದ್ದುದು ಸುಣ್ಣವಾಯಿತೊ ದೇವ ಕಣ್ಣು ಮಂಜಾಗಿ ಮೈಗಿಣ್ಣು ಮುರಿಯಿತಿನ್ನು 2 ಬಹು ಜನುಮದಿ ಸಂಗ್ರಹಿಸಿದ ಪಾತಕ ಬೃಹದಾಕಾರವಾಗಿದ್ದು ರಂಗಯ್ಯ ಅಹಿಶಯನನೆ ನಿನ್ನ ಮಹಿಮೆಯಿಂದೆಲ್ಲವು ದಹಿಸುವುದೆಂದು ನಂಬಿದೆ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಘನಲೀಲಾಕುಲ ದೇವಕಿ ಬಾಲಾ ಪ ಹೀನನ ಮೊರೆ ಕಿವಿಗೆ ಬೀಳದಲಾ ಸ್ವಾಮಿ ಅ.ಪ ಬಾಲಕ ನೆನೆದುದ ಆಲಿಸಿದೈ ತಂದೆ ಖೂಳನ ನುಡಿ ಕಿವಿಗೆ ಕೇಳಿಸದೆ ದೇವಾ 1 ಹಾಡಲು ಅರಿಯೆ ಕೊಂಡಾಡಲು ಅರಿಯೆನು ನೋಡುವೆಯೋ ನದಿಗೆ ದೂಡುವೆಯೋ ದೇವಾ 2 ಚರಣ ಸರೋಜದ ದರುಶನಗೈಸೋ ಕರವ ಮುಗಿವೆ ಮಾಂಗಿರಿ ರಂಗಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಯಕೃದ್ಭಯನಾಶನ ಮಾಯಾರಮಣ ಭವಭಯಹರಣ ಪ ಜೀಯ ಕಾಯುವುದಯ್ಯ ಪರಿಹರಿಸಯ್ಯ ತಾಪ- ತ್ರಯ ದಯೆತೋರಯ್ಯ ಎನ್ನೊಡೆಯಾ ಅ.ಪ ನಾನರಿಯೆ ನಿನ್ನಯ ಗುಣಗಣಾದಿಗಳ ಅನುದಿನದಿನಾ ಅನುಭವಿಸಿ ಭವಚಕ್ರದಾಟಗಳ ಜನುಮ ಜನುಮಾಂತರದಿ ಬಂದ ವಾಸನಾದಿಗಳ ದೀನವತ್ಸಲ ದೂರ ನೋಡುವೆಯ ನೀನರಿಯ ಎನ್ನನು ಉಳುಹುವ ಪರಿಯ ಎನಗ್ಯಾರಿಹರೊ ನಿನ್ಹೊರತು ಪೂರೆವರಯ್ಯ ವನಜಸಂಭವನಯ್ಯ ಜೀಯ 1 ಕರಿ ಮಕರಿ ಪಿಡಿಯಲು ಬಂದ ಪರಿಯೇನು ನಿಖಿಳಖಳಕುಲವೈರಿ ಶ್ರೀಹರಿ ಸಿರಿಗೆ ಹೇಳದ್ದೇನು ಭಕುತನಾರ್ತಧ್ವನಿಯ ಕೇಳಿ ಬಂದೆಯಾ ಏನು ನಾನು ಆಸಾಧನವನರಿಯೇನು ಘನ್ನಮಹಿಮ ನಿನ್ನಯ ಕೀರ್ತಿಯನು ಕೇಳಿ ಬಂದೆನು ಇನ್ನೇನು ನಿನಗೆ ಏನು ತೋರಿದಂತೆ ಮಾಡಿನ್ನು ಎನ್ನೊಡೆಯ ನೀನೆಂದಡಿಗೆ ಬಿದ್ದಿಹೆನೊ ಇನ್ನು 2 ಈಸಲಾರೆನು ಸಾರಿ ಈ ಭವಸಾಗರದೊಳಗೆ ಶ್ರೀಶ ನಿನಗತಿಶಯವೆ ಕರುಣವಿಲಾಸ ತೋರೆನಗೆ ದಾಸದಾಸದಾಸರದಾಸ್ಯ ಕೊಡಿಸೆನಗೆ ಶ್ರೀಶ ಎನ್ನಯ ಮನದ ಕ್ಲೇಶವನೂ ನಾಶವಗೈಸು-ನಿರಾಶ್ರಯನಾಗಿಹೆನು ಏಸುಬಲ್ಲೆನು ಕಾಸಿನವನು ಬೇಸರಿಸದಿರು ಇನ್ನೂ-ಮುನ್ನೂ 3 ತಾಪತ್ರಯಗಳಿಂದನುದಿನದಿ ನಾ ನೊಂದೆ ಶ್ರೀಪತಿಯೆ ಹೃತ್ತಾಪಕಳೆದು ಪೊರೆಯಬೇಕೆಂದೆ ಗೋಪನಿನ್ನಯ ಶ್ರೀಪಾದದೊಳು ಮನವ ನೀಡೆಂದೆ ಕುಪಿತವೇ ನಿನ್ನವನು ನಾನೆಂದೆ ಭೂಪ ಆಪತ್ತೋದ್ಧಾರಕನೆಂದೆ ಪಾಪಿಮಾನವಜನುಮದಲಿ ಬಂದೆ ಕಾಪಾಡುವುದು ಎಂದೇ-ತಂದೇ 4 ಭೂಸ್ಥಳದಿ ನಿಂತ ಶ್ರೀ ವೇಂಕಟೇಶ ಹರೇ ತ್ರಿಸ್ಥಳದೊಳು ಈ ಸ್ಥಳವೆ ವೈಕುಂಠ ದೊರೆಯೆ ವಿಸ್ತರದಿ ಮಹಿಮೆಯ ಪಾಡಿ ಪೊಗಳಲು ನಾವು ಶಕ್ತರೆ ಸ್ವಸ್ಥಚಿತ್ತವಿಲ್ಲ ಶ್ರೀಹರೇ ಈ ಸ್ಥಿತಿಯಲ್ಲಿ ಎನ್ನ ನೋಡುವರೆ ದುಸ್ಥಿತಿಯಬಡವನಕೈಯ ಬಿಡುವರೆ-ಶೌರೆ5
--------------
ಉರಗಾದ್ರಿವಾಸವಿಠಲದಾಸರು