ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿಯೆನೋ ನಿನ್ಮಾಯ | ಸದ್ವಪುಷ ಚಿನ್ಮಯ ಪ ಪತಿ ಪರಿ ಮಿಗಿಲು ಇಲ್ಲವೊಚೆಲ್ವ ಹಯವೇರುತ್ತ ಮ್ಲೇಂಛರ ಸದೆವವನೆ ಅ.ಪ. ಪರಿ | ಪಂಥಿ ಬಾಧಕಕಂತುಹರ ಸಖ ಸೃಷ್ಟಿಕರ್ತನೆ | ಪ್ರಾಂತಗಾಣದ ಶಿರಿಸ್ತವನ ಕೊಂದನೆ 1 ಅಮಿತ ಮಹಿಮೋಪೇತ್ ಶಿರಿಹರಿ |ಸುಮತಿ ಸುಜನಾಂಬೋಧಿ ಚಂದಿರ | ಪ್ರಮಿತ ಜಗ ಸತ್ಕರ್ತ ಪ್ರಾಣನೇ 2 ಹರಿಯೆ ನಿನ್ನಯ ರೂಪ | ನೋಡುವುದಕೆ ಇರುವುದವು ಅಪರೂಪ |ದೇವಾದಿ ವರ್ಣಿಸೆ | ಇರುತಿರುವೆ ಬಹುರೂಪ | ಆರು ಅರಿಯದ ರೂಪ ನೀರೊಳಿರುತಿಹೆ | ಭಾರಪೊತ್ತಿಹೆ | ಕೋರೆದಂತನೆ ನಾರಸಿಂಹನೇ ಪೋರ ವಟುವೆ | ವೀರರಾಮನೆ | ಕ್ರೂರ ಖಳಹನ ನಾರಿಯರ ವ್ರತವಳಿದು ತೇಜಿಯನೇರ್ದ ಗುರು ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ಎಲೆ ಜೀವನ್ಮುಕ್ತ ನೀನೆ ಬ್ರಹ್ಮವೆಂದು ಕಾಣೋಎಲೆ ಜೀವನ್ಮುಕ್ತ ನೀನೆ ಬ್ರಹ್ಮವೆಂದು ಕಾಣೋ ಪ ಭಾನುವ ನೋಡಲು ಒಳಕಂಡಿಯ ಹಂಗ್ಯಾಕೆನೀನು ನಿನ್ನರಿವುದಕೆ ಯೋಗಗಳ ಸಾಧನ ಬೇಕೆ 1 ನಳಿನ ಸಖನ ನೋಡುವುದಕೆ ಬೆಳಕನು ಕೋರಲುಬೇಕೆಬಲು ನಿನ್ನನು ಕಾಣುವುದಕೆ ಸಾಧಕರ ಸಾಧನ ಬೇಕೆ 2 ಯೋಗಗಳೆಂಬುವುದಿನ್ನು ಜೀವ ಭ್ರಾಂತಿಯೆನ್ನುಈಗಲು ಇತರರಿಲ್ಲೆನ್ನು ಚಿದಾನಂದ ಸದ್ಗುರು ತಾನೆ ಎನ್ನು 3
--------------
ಚಿದಾನಂದ ಅವಧೂತರು
ನಿರಂಜನ ಸ್ವಾನುಭವವ ಪಡೆದು ನೋಡು ಪ ಬಿಡು ದೇಹದಿ ಆತ್ಮಭಾನ ಪಡೆ ಗುರುವಿನ ದಿವ್ಯ ಜ್ಞಾನ ನುಡಿ ಮನಸಿಗೆ ನಿಲುಕದಿರುವ ಕಡೆ ಇಲ್ಲದ ಸ್ಥಿತಿಯ ನೋಡು ಒಡಲುಪ್ರಾಣಮನಾದಿಗಳು ಜಡವಾದವು ಎಂದು ತಿಳಿದು ದೃಢನಿಶ್ಚಯದಿಂದ ಕಳೆಯೆ ಕಡೆಗುಳಿಯುವ ಮೂಲರೂಪ 1 ಪರಮಾತ್ಮನ ನೋಡುವುದಕೆ ಹೊರಗೆಲ್ಲಿಯು ಹೋಗಬೇಡ ಭರಿತನವನು ವಿಶ್ವದಲ್ಲಿ ಇರನೆ ನಿನ್ನ ಹೃದಯದಲ್ಲಿ ಮರೆಯದೆ ಈ ನುಡಿಯ ಬೇಗ ಅರಿತುಕೊಳ್ಳು ನಿನ್ನ ರೂಪ ಪರಮಪದವ ಪೊಂದುವಿ ನೀ ಗುರುಶಂಕರನುಕ್ತಿಯಂತೆ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಮಾಧವ ಸಾಧುಜನ ಕಾದಿರುವರೊ ಪ ಆದರದಿಂದ ನಿನ್ನ ನೋಡುವುದಕೆ ಅ.ಪ ಶಾಸ್ತ್ರಗಳಿಂದಲು ಅರಿಯದ ನಿನ್ನ ಪ ವಿತ್ರ ರೂಪವನು ನೋಡಲೋಸುಗ 1 ಘೋರತಪಗಳಿಂದ ಸೇರದೆÀ ನಿನ್ನನು ಚಾರಿಯೊಳ್ ಪೊಂದಲು ಕೋರುತಿಹರೊ 2 ದಾನ ಧರ್ಮಗಳಿಗೂ ಸುಲಭದಿ ದೊರೆಯದ ನೀನೆ ಬಂದಿರಲು ವಿನೋದಿಸುವರೊ 3 ತೀರ್ಥಯಾತ್ರೆಯು ಮನ ಮಾತ್ರ ಶೋಧಿಪುದೆಂದು ಮೂರ್ತಿ ನೋಡಲು ನಿನ್ನ ಪ್ರಾರ್ಥಿಸುವರೊ4 ಅನ್ನದಾನವ ಮಾಡೆ ಹೊನ್ನು ಇವರಿಗಿಲ್ಲ ಮನ್ನಣೆ ಮಾಡಿ ಪ್ರಸನ್ನನಾಗೆಲೊ 5
--------------
ವಿದ್ಯಾಪ್ರಸನ್ನತೀರ್ಥರು