ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಸುಕೃತವ ಮಾಡಿ ಜನಿಸಿದಳೊ ಯಶೋದೆ ದೀನಪಾಲಕ ನಿನ್ನ ಮಗನೆಂದು ಮನದಣಿಯೆ ಸೇವಿಪೆಳೊ ಪ. ಅನುದಿನ ಜಪತಪಾನುಷ್ಠಾನದಿಂದಿರುತಾ ಪಾದ ಸೇವಿಪ ಮುನಿಗಳಿಗೆ ದೊರೆಯುವ ವನಜನಾಭನೆ ನಿನ್ನ ವನರುಹಾನನ ನೋಡಿ ದಿನದಿನದಿ ಸುಖಿಸುವ ಘನ ಪುಣ್ಯ ಗಳಿಸಿದಳೋ 1 ದುಷ್ಟರನು ಸಂಹರಿಸಿ ಮೈ ಎಷ್ಟು ನೋವೊ ಎಂದು ದಿಟ್ಟೆ ಬಿಸಿನೀರೆರೆಯುವಳೊ ಇಷ್ಟ ಮೂರುತಿ ನಿನ್ನ ಶ್ರೇಷ್ಠತರ ಆಭರಣ ದಿಟ್ಟ ಕೃಷ್ಣ ನಿನಗಿಟ್ಟು ನೋಡುವಳೊ 2 ಕಸ್ತೂರಿ ತಿಲಕವನು ಶಿಸ್ತಿನಲಿ ಶೃಂಗರಿಸಿ ಕಸ್ತೂರಿರಂಗ ಶ್ರೀ ಶ್ರೀನಿವಾಸ ನಿನ್ನೆತ್ತಿ ತೊಡೆಯಲ್ಲಿ ಸ್ವಸ್ಥದೊಳು ಮಲಗೆಂದು ಪೊಂಬಟ್ಟಲೊಳು ಕ್ಷೀರವನು ಹಸ್ತಿವರದನೆ ಕುಡಿಯೆಂದು ಜೋಗುಳವ ಪಾಡುವಳೊ 3
--------------
ಸರಸ್ವತಿ ಬಾಯಿ
ಗೋಪಿಯ ಭಾಗ್ಯವಿದು |ಆ ಪರಮಾತ್ಮನ ಅಪ್ಪಿ ಮುದ್ದಿಡುವುದು ಪಅಂಬೆಗಾಲಿಡು ಹರಿಕುಣಿದಾಡೈ ತೋ-|ಳಂಬಲಿ ತಾ ಹೊಂಗುಬ್ಬಿಯನು ||ಅಂಬುಜನಾಭ ನೀನಾನೆಯನಾಡೆಂದು |ಸಂಭ್ರಮದಿಂದ ಮುದ್ದಾಡುವಳೊ 1ನಿತ್ಯನಿರ್ಮಲನಿಗೆ ನೀರನೆರೆದು ತಂದು |ಎತ್ತಿ ತೊಡೆಯೊಳಿಟ್ಟು ಮುದ್ದಿಸುತಾ ||ಸತ್ಯಲೋಕವನಾಳುವ ವಿಧಿಜನಕನ |ಪುತ್ರನೆಂದರಿತು ತಕ್ಕೈಸುವಳೊ 2ಪಾಲುಗಡಲು ಮನೆಯಾಗಿ ಮೂಲೋಕವ |ಪಾಲಿಸುತಿಪ್ಪ ನಾರಾಯಣನ ||ಕಾಲಮೇಲೆ ಮಲಗಿಸಿ ಬಟ್ಟಲ ತುಂಬ |ಹಾಲು ಕುಡಿಸಿ ಸಂತೈಸುವಳೊ 3ಹರಿನಿತ್ಯತೃಪ್ತನೆಂದರಿಯದೆ ಹೊನ್ನಿನ |ಹರಿವಾಣದೊಳಗೆ ಮೃಷ್ಟಾನ್ನವನು ||ನೊರೆಹಾಲು ಘೃತ-ಸಕ್ಕರೆ ಕೂಡಿಸಿ ಕರೆ-|ಕರೆದು ಉಣಿಸಿ ತೃಪ್ತಿ ಬಡಿಸುವಳೊ 4ಅಂಗಜಪಿತನಿಗೆ ಮೋಹದಿಂದ ಹೊಸ |ಅಂಗಿಯ ತೊಡಿಸಿ ಟೊಪ್ಪಿಗೆ ಇರಿಸಿ ||ಬಂಗಾರದರಳೆಲೆ ಬಿಂದುಲಿಗಳನಿಟ್ಟು |ಸಿಂಗರವನು ಮಾಡಿ ನೋಡುವಳೊ 5
--------------
ಪುರಂದರದಾಸರು