ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಪ್ಪು ನೋಡುವರೇನೋ ಕೃಪಾಸಿಂಧು ಶ್ರೀಗುರು ಒಪ್ಪಿಸಿಕೊಂಡರೆ ತಪ್ಪಾರಿಸುವರೆ ಧ್ರುವ ಒಡಲಹೊಕ್ಕವರವಗುಣವ ನೋಡುವರೇನೊ ಒಡಿಯನೆಂದವರ ತಾ ಕೈಯ್ಯ ಬಿಡುವರೆ ಮಡದಿ ಮಕ್ಕಳೆನಿಸಿ ಕಡೆಗಣ್ಣ ನೋಡುವರೆ ಒಡುಹುಟ್ಟಿದವರಿಗೆರಡ ಬಗೆವರೇನಯ್ಯ 1 ಬಡವರ ಮಕ್ಕಳ ಮಡುವಿನೊಳು ಧುಮುಕಿಸಿ ಕುಡಗೋಲ ಕುಂಬಳ ಕೊಟ್ಟವರ ಕೈಯ್ಯ ಒಡನೆ ಹೋಳುವದುಚಿತವೇನಯ್ಯ 2 ಬಡವನಾಧಾರಿ ಎಂದು ನಾ ನಿಮ್ಮ ಪೊಡವಿಯೊಳು ಶ್ರೀಪಾದ ದೃಢದಲಿ ನೋಡು ಕರುಣಾಲೆನ್ನ ನೀಡಿ ಅಭಯ ಹಸ್ತದಿ ಮೂಢ ಮಹಿಪತಿಗೆ ಕಡೆಗಾಣಿಸುವುದೈಯ್ಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಪ್ಪೆಣಿಸುವರೇನೋ | ತಾಮರದಳಾಕ್ಷ ಅಪ್ಪ ನೀ ಒಪ್ಪಿದರೆ ತಪ್ಪೆಲ್ಲಿ ಇಹುದೋ ಪ ಅಕ್ಕರದ ಅಜಮಿಳನು ಅಕ್ಕನಾಮಗ ನೇನೋ ಚಿಕ್ಕ ಧೃವನಾ ತಾಯಿ ಚಿಕ್ಕಮ್ಮನೇನೋ ರಕ್ಕಸಾ ಸುತ ನಿನಗೆ ರೊಕ್ಕ ಕೊಟ್ಟನೊ ಎನೋ ಇಕ್ಕಿ ನೀ ಭವದೊಳಗೆ ಹೀಂಗೆ ನೋಡುವರೇನೋ 1 ಅಂತ್ಯಜಳ ಕೂಡಿ | ಅನಂತ ಕರ್ಮವ ಮಾಡಿ ಅಂತರದಿ ನಿನ್ನೊಮ್ಮೆ ನೆನೆದನೇ ನೋ ಅಂಥ ಶೊಬಚನ ಮಗಳ ಕಾಂತನೆಂದೆನಿಸಿದೀ ಕಂತು ಪಿತನೇ ನಿನ್ನ ಕರುಣವಿದ್ದರೆ ಸಾಕೊ 2 ನಾಮಾಡಿದಪರಾಧ ನೀಕ್ಷಮಿಸದಿದ್ದರೆ ಯಾರು ಪೊರೆವರೊ ಎನ್ನ ವಾರಿಜಾಕ್ಷ ಧೀರ ನರಸಿಂಹ ವಿಠಲ ನಿನ್ನಾಧೀನಳಾದೆನೋ ಇನ್ನೇನು ಮಾಡಿದರು ಮಾಡೋ ನೀನು 3
--------------
ಓರಬಾಯಿ ಲಕ್ಷ್ಮೀದೇವಮ್ಮ
ದೂರ ನೋಡುವರೆ ರಂಗಯ್ಯ ಎನ್ನ ಪ ದೂರ ನೋಡುವರೇನೋ ಸಂಸಾರ ಶರಧಿಯೊಳಗೆ ಮುಳುಗಿ ದಾರಿಗಾಣದೆ ನೀನೆ ಗತಿ ಮು-ರಾರಿಯೆಂದು ಸಾರಿದ ಮೇಲೆ ಅ.ಪ ಆಸೆ ಬಿಡದೆಲೊ ಕಾಸುವೀಸಕೆ-ಕ್ಲೇಶ ಘನ್ನವೆಲೊ ಈಶ ಯಾರಿಗೆ ಪೇಳಲೊಶವೆಲೊ-ಶ್ರೀಶ ಎನ್ನ ಮನಸಿನಲ್ಲಿ ಬಹಳ ಘಾಸಿಪಟ್ಟೆನೊ-ದಾಶರಥಿ 1 ಭಕುತಿಯಿಲ್ಲವೊ ಅದರ ಹೊರತು-ಮುಕುತಿಯಿಲ್ಲವೊ ಯುಕುತಿಯಿಂದಲಿ ವಲಿವನಲ್ಲವೊ- ಮುಕುತಿದಾಯಕ ನಿನ್ನ ಕಾಣದೆ ಭಕುತಿಗೋಸುಗ ಪರರ ತುತಿಸಿ, ಕಕುಲಾತಿಯಿಂದಲೆನ್ನ- ಶಕುತಿಯೆಲ್ಲ ನಷ್ಟವಾಯಿತು 2 ಪೊರೆಯದಿರುವರೆ ಕರುಣಾಳುಯೆಂಬ-ಬಿರುದ ಬಿಡುವರೆ ಹರಿಯೆ ಯೆನ್ನ ಮರೆತು ಬಿಡುವರೆ- ಕರಿಯು ಹರಿಯೇ ಎಂದು ಕರೆಯೆ ಸಿರಿಗೆ ಪೇಳದೆ ಭರದಿ ಬಂದು, ಪೊರೆದೆಯೆಂಬ ವಾರ್ತೆಕೇಳಿ -ಮರೆಯ ಹೊಕ್ಕೆನೊ ವಿಜಯವಿಠ್ಠಲ 3
--------------
ವಿಜಯದಾಸ
ಯಾಕೆಲೋ ರಂಗಾ | ನಿನ್ನರಸಿಯೊಳುಮುನಿದಿರುವೆ | ಲೋಕವೀರೇಳು ರಕ್ಷಿಪ ಮುದ್ದು ರಂಗಾ ಪ ನಾಲ್ಕನೆಯ ಅವತಾರದಲಿ ಉಗ್ರವಾಗಿರೆ | ಆ ಕಮಲಜ ಮುಖ್ಯ ಬೆದರುತಿರಲು | ಲಕುಮಿ ತಾಕಂಡು ತೊಡೆಮೇಲೆ ಕುಳ್ಳಿರಲು | ಈ ಲೋಕದೊಳು ಶಾಂತನೆನಿಸಿದಳೊ ನಿನ್ನರಿಸಿ 1 ಗುಂಜೆಯಮಾಲೆ ಕೊರಳಿಗೆ ಹಾಕಿ ಗೋವಳರ | ಎಂಜಲ ತಿನುತ ಗೋಗಳ ಕಾಯುತಿರಲು | ಕಂಜನಯನೆಯು ಬಂದು ಸಕಲ ಶಿರಿಯಿಂದಲಿ | ರಂಜಿಸಿದಳೊ ಜಗದೊಳಗೆ ನಿನ್ನ ಅರಿಸಿ 2 ಇಂತರಿದು ನಾನಾಪರಿಯಿಂದ ನಿನ್ನ ಮೇಲೇ | ಸಂತತ ಉಪಕಾರ ಮಾಡಿರೆ ನೀನು | ಕಂತುಮಾತೆಯ ತಪ್ಪು ನೋಡುವರೇನೋ | ಆ- ನಂತನೇ ಏಳು ಮಹೀಪತಿನಂದನೊಡೆಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು