ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದಯರಾಗ ಜನಿಸಲಾರೆನು ಜಗದೊಳಗೆ ಹರಿಯೆ ಪ ಕನಸಿನೊಳು ನೆನೆಯೆ ಕಂಪನವಾಗುತಿದೆ ಮನಕೆ ಅ.ಪ ವಾರಿಮಂಡಲ ವೃಷ್ಟಿಧಾರೆ ಧಾರುಣಿ ಜನಕ ದ್ವಾರದಿಂ ಸರಿದುಪೋಗಿ-ಸಾಗಿ ಜಾರಿ ಜನನೀ ಜಠರ ನಾರುವ ದುರ್ಗಂಧ ಸೇರಿ ಬೊಬ್ಬುಳಿಯ ತೆರದಿ-ಭರದಿ ವಾರಿವಾರಕೆ ಬೆಳೆದು ತಾರಿತಗಲಿ ಬಳಲಿ ಶರೀರವನ್ನೆ ಪೊತ್ತು-ತೆತ್ತು ಖಾರ ಕಟು ಲವಣಾದಿ ಘೋರತರ ಮಹಕ್ಲೇಶ ವಾರಿಧಿಯೊಳಗೆ ಮುಳುಗಿ ಮರುಗಿ ಸೊರಗಿ 1 ಲೇಶಾವಕಾಶವಿಲ್ಲದ ದೇಶದೊಳು ಸನ್ನಿ ವಾಸ ಉಲ್ಬಣದೊಳಿದ್ದು-ಕುದ್ದು ಘಾಸಿಯಲ್ಲಿ ಪರಿತಾಪ ಸೂಸಲು ಹಾಹಾಯೆಂಬ ಘೋಷಧ್ವನಿಯಿಂದ ಬೆದರಿ-ಅದರಿ ರೋಷವಾಗಿದ್ದ ಕ್ರಿಮಿರಾಶಿ ಮುಖ ಕಾಟದಿಂ ಏಸು ಬಗೆಯಿಂದ ನೊಂದು ಬೆಂದು ಶ್ವಾಸ ಬಿಡುವುದಕೆ ವ್ಯತ್ಯಾಸವಾಹುದು ಮುಂದೆ ಮೋಸಗೊಂಡು ಮತಿಗೆಟ್ಟು ಬೇಸರಿಕೆ ಅಕಟಕಟ 2 ಜಾನು ಮಧ್ಯದಲಿ ಶಿರಗೋಣು ತೂರಿಸಿಕೊಂಡು ಮಾಣದಲೆ ಬಿಕ್ಕಿ ಬಿಕ್ಕಿ-ಸಿಕ್ಕಿ ಏನೆಂಬೆ ಮಸೆದುಕ್ಕಿನ ಬಾಣ ಪೆಟ್ಟಿನ ಸಮ- ಬೇನೆಯಿಂದಧಿಕವಾಗೆ ಮೈಗೆ ಮೇಣು ಕೈಕಾಲುಗಳು ಕಾಣಿಕಾ ಕಾಲವಗ- ಲಾನು ಚರಿಸದಾದೆನೊ ಇನ್ನೇನೊ ಗಾಣ ತಿರುಗಿದಂತೆ ಗೇಣು ಬೈಲೊಳಗೆ ಈ ಆ-ನನ ಮೇಲಡಿಯಾಗಿ ಬಂದೆ-ನೊಂದೆ 3 ಸೂತಿಕಾಮರುತ ಬೀಸಿದಾತುರಕೆ ಬೆಸಸುವ ಯಾತನೆಗೆ ಕಾಣೆ ಲೆಖ್ಖ-ದು:ಖ ಗಾತುರವು ಕಿರಿದಾಗಿ ಪೋತಭಾವವ ವಹಿಸೆ ಭೂತಳಕೆ ಉಗ್ಗಿಬಿದ್ದು-ಎದ್ದು ಶೀತೋಷ್ಣ ಮಲರೋಗ ಭೀತಿ ಲಾಲನೆಯಿಂದ ಮಾತೆಯ ಮೊಲಿಯನುಂಡು-ಉಂಡು ಆ ತರುವಾಯ ಉಪನೀತ ವಿವಹಗಳಲ್ಲಿ ವ್ರಾತ ಕೈಕೊಂಡೆನಯ್ಯ ಜೀಯ 4 ಯೌವನದಿ ಚತುರ್ವಿಂಶತಿ ತತ್ವಜ್ಞಾನವ ಜರಿದು ಯುವತಿಯರ ರೂಪಲಾವಣ್ಯ ನೋಡಿ-ಬಾಡಿ ನೆವನೆವದಿ ಭೋಗಗಳ ಸವಿ ಸವಿದಿಪೇಕ್ಷಿಸಿ ಭವನ ಭವನವÀನು ಪೊಕ್ಕು -ಸೊಕ್ಕು ಅವರಿವರ ಜಾತಿಯೆನ್ನದೆ ಮಾತುಗಳನಾಡಿ ದಿವರಾತ್ರಿಯಲ್ಲಿ ಹೊರಳಿ-ಉರುಳಿ ಕವಿಜನರ ಧಿಕ್ಕರಿಸಿ ಕೋಣನಂತೆ ಸದಾ ಕಾಲ ಕಳೆದೆ ಉಳಿದೆ 5 ಹೆಂಡ್ರು ಮಕ್ಕಳಿಗಾಗಿ ಎನ್ನ ಹಿತಮನೆ ಮರೆದು ಕಂಡಕಂಡವರ ಕಾಡಿ-ಬೇಡಿ ಉಂಡುಟ್ಟು ಸುಖಪಟ್ಟು ಪಾರತ್ರಯವ ಜರೆದು ಕೊಂಡೆಯಲಿ ನಿಪುಣನಾಗಿ ತೂಗಿ ಮಂಡೆಯನು ಬಲಿತ ಪಶುವಿನಂತೆ ಮದವೇರಿ ಚಂಡ ವೃತ್ತಿಯಲಿ ನಡೆದು-ನುಡಿದು ಹಿಂಡು ಮಾತೇನು ಈ ಜರೆನರೇ ಬಂದೆನ್ನ ಲಂಡತನ ಪೋಗದಕಟ್ಟ-ಉಂಬೆ ವಿಕಟ 6 ನಾನಾ ಯೋನಿಗಳಲ್ಲಿ ಬರಲಾರೆ ಬರಲಾರೆ ನಾನು ಪೇಳುವುದು ಏನೋ-ಇನ್ನೇನೊ ನೀ ನೋಡಿದರೆ ಅನ್ಯ ಕಾವ ದೈವರ ಕಾಣೆ ಮಾನಸದೊಳಗೆ ಒಮ್ಮೆ-ಇಮ್ಮೆ ದೀನರಕ್ಷಕ ಬಿರುದು ಅನವರತ ನಿನ್ನದು ಎಣಿಸದಿರು ಎನ್ನ ದೋಷ ಲೇಶ ಶ್ರೀನಾಥ ವಿಜಯವಿಠ್ಠಲರೇಯ ನೀನೊಲಿದು ಧ್ಯಾನದಲ್ಲಿ ಬಾರೊ ನಿಜ ಮೂರುತಿಯ ತೋರೊ 7
--------------
ವಿಜಯದಾಸ
ಬಂಟ ಬುದ್ಧಿವುಳ್ಳ ಹನುಮಂತಹದ್ದಾಗಿ ಹಾರಿದÀನೆ ಆಕಾಶಕೆನಿದ್ರೆಗೈವ ಸಮಯದಲಿ ಎದ್ದು ಬಾರೆಂದರೆ ಅಲಿದ್ದÀ ರಕ್ಕಸರನೆಲ್ಲ ಗೆಲಿದಾತನೆ 1 ಬಂಟ ಹನುಮಂತನ ನೋಡಿ-ಬಾರೆಂದರೆ ಪೋಗಿ ಲಂಕೆಯ ಸುಟ್ಟು ಬೇಗದಲಿಮರನೇರಿಕೊಂಡಾತನೆ2 ಬಂಟ ಹನುಮಂತನೆಸೀತಾದೇವಮ್ಮನಿಗೆ ಪ್ರೀತಿಯ ಬಂಟನಾದಮುಖ್ಯ ಪ್ರಾಣ ಹಯವದನನ ದೂತನೆ 3
--------------
ವಾದಿರಾಜ
ಎನ್ನ ಮನದ ಡೊಂಕ ತಿದ್ದಿ-ಚರಣದಲ್ಲಿ ಸೇರಿಸೋ |ನಿನ್ನ ಸೇವಕನಾದ ಮೇಲೆಇನ್ನು ಸಂಶಯವೇಕೆ ಕೃಷ್ಣ ಪಉದಯವಾದರೆ ಊಟದ ಚಿಂತೆ ಅದರ ಮೇಲೆ ಭೋಗದ ಚಿಂತೆ |ಹದಿನಾಲ್ಕು ಲೋಕಂಗಳನಾಳಬೇಕೆಂಬ ಚಿಂತೆ ||ಇದು ಪುಣ್ಯ ಪಾಪವೆಂದು ಹೃದಯದಲಿ ಭಯವಿಲ್ಲದಲೆ |ಮದ ಮೋಹಿತನಾದೆ ನಿನ್ನ ಪದವ ನಂಬದೆ-ದಯಾಳೊ 1ನೆರೆಮನೆಗಳ ಭಾಗ್ಯವ ನೋಡಿ-ತರಹರಿಸುತ ಅಸೊಯೆಯಿಂದ |ಹರಿಯ ಸ್ಮರಣೆಗೆ ವಿಮುಖನಾದೆ - ನರರಸ್ತುತಿಯ ನಾ ಮಾಡಿದೆ ||ಪರರ ಸತಿಗೆ ಪರರನ್ನಕೆ ತಿರುಗಿ ತಿರುಗಿ ಚಪಲನು ಆದೆ |ಗುರುಹಿರಿಯರ ದೂಷಿಸುತಲಿ ಮರುಳನಾದೆ ದೀನಶರಣ್ಯ 2ಅಗಣಿತಸುಖ ಬಂದರೆ ನಾನು -ಅಗಣಿತದುಃಖಕೆ ಹರಿಯೆನ್ನುವೆನು |ಜಗದೊಳಾವ ಲಾಭವು ಬಂದರು ಧನಿಯು ನಾನೆ ಎಂಬೆ ||ಮಿಗೆ ಹಾನಿಗೆ ಹರಿಯನು ದೂಷಿಸಿನೆಗೆದು ಪತಂಗವು ಕಿಚ್ಚಲಿ ಬೀಳುವ |ಬಗೆ ನಾನಾದೆನುಪುರಂದರವಿಠಲನಖಗರಾಜಸುವಾಹನ ಶ್ರೀ ಕೃಷ್ಣ 3
--------------
ಪುರಂದರದಾಸರು
ಬಂದು ನಿಂದಿಹ ನೋಡಿ- ಭೂತಳದಿ ವೆಂಕಟಇಂದಿರೆಯನೊಡಗೂಡಿ- ಒಪ್ಪುವ ನಿರಂತರಪೊಂದಿ ಭಜನೆಯ ಮಾಡಿ- ಆನಂದ ಬೇಡಿ ಪವಂದಿಸುತ ಮನೆದೊಳಗೆ ಇವನಡಿ-ದ್ವಂದ್ವ ಭಜಿಸಲು ಬಂದ ಭಯಹರ |ಇಂದುಧರಸುರವೃಂದನುತ ಗೋ-ವಿಂದಘನದಯಾಸಿಂಧು ಶ್ರೀಹರಿ ಅ.ಪದ್ವಾರದೆಡಬಲದಲ್ಲಿ- ಜಯವಿಜಯರಿಬ್ಬರುಸೇರಿ ಸೇವಿಪರಲ್ಲಿ- ಸನಕಾದಿನುತ ಶೃಂ-ಗಾರನಿಧಿ ಅಂಗದಲಿ- ಮುತ್ತಿನಲಿ ಶೋಭಿಪಹಾರ ಹೊಂದಿಹುದಲ್ಲಿ- ವಿಸ್ತಾರದಲ್ಲಿ ||ವಾರವಾರಕೆ ಪೂಜೆಗೊಂಬುವಹಾರ ಮುಕುಟಾಭರಣ ಕುಂಡಲ-ಧಾರಿ ಭುಜ ಕೇಯೂರ ಭೂಷಿತಮಾರಪಿತಗುಣಮೋಹನಾಂಗ ||ಚಾರುಪೀತಾಂಬರ ಕಟಿಯ ಕರ-ವೀರ ಕಲ್ಹಾರಾದಿ ಹೂವಿನಹಾರ ಕೊರಳೊಳು ಎಸೆಯುತಿರೆ ವದ-|ನಾರವಿಂದನು ನಗುತ ನಲಿಯುತ 1ಎಲ್ಲ ಭಕುತರಭೀಷ್ಟ-ಕೊಡುವುದಕೆ ತಾ ಕೈ-ವಲ್ಯ ಸ್ಥಾನವ ಬಿಟ್ಟ- ಶೇಷಾದ್ರಿ ಮಂದಿರದಲ್ಲಿ ಲೋಲುಪ ದಿಟ್ಟ-ಸೌಭಾಗ್ಯನಿಧಿಗೆದುರಿಲ್ಲ ಭುಜಬಲ ಪುಷ್ಪ-ಕಸ್ತೂರಿಯಿಟ್ಟ ||ಚೆಲ್ವ ಪಣೆಯಲಿ ಶೋಭಿಸುವ ಸಿರಿ-ವಲ್ಲಭನಗುಣಪೊಗಳದಿಹ ಜಗ-ಖುಲ್ಲರೆದೆದಲ್ಲಣ ಪರಾಕ್ರಮಮಲ್ಲಮರ್ದನಮಾತುಳಾಂತಕ||ಫಲ್ಗುಣನಸಖಪ್ರಕಟನಾಗಿಹದುರ್ಲಭನು ಅಘದೂರ ಬಹುಮಾಂಗಲ್ಯ ಹೃಯಯವ ಮಾಡಿ ಸೃಷ್ಟಿಗೆಉಲ್ಲಾಸ ಕೊಡುತಲಿ ಚೆಂದದಿಂದಲಿ 2ಪದಕ-ಕೌಸ್ತುಭದಾರ-ಸರಿಗೆಯ ಸುಕಂಧರಸುದರ್ಶನ-ದರಧಾರ-ಸುಂದರ ಮನೋಹರಪದಯುಗದಿ ನೂಪುರ-ಇಟ್ಟಿಹನು ಸನ್ಮುನಿಹೃದಯ ಸ್ಥಿತ ಗಂಭೀರ-ಬಹುದಾನ ಶೂರ ||ವಿಧಿ-ಭವಾದ್ಯರ ಪೊರೆವ ದಾತನುತುದಿ ಮೊದಲು ಮಧ್ಯವು ವಿರಹಿತನುಉದುಭವಾದಿಗಳೀವ ಕರ್ತನುತ್ರಿದಶಪೂಜೀತ ತ್ತಿಭುವನೇಶ ||ಸದುನಲಾಸದಿ ಸ್ವಾಮಿ ತೀರ್ಥದಿಉದುಸುತಿರೆಸಿರಿಮಹಿಳೆ ಸಹಿತದಿಪದುಮನಾಭಪುರಂದರವಿಠಲನುಮುದದಿ ಬ್ರಹ್ಮೋತ್ಸವದಿ ಮೆರೆಯುತ 3
--------------
ಪುರಂದರದಾಸರು