ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಛೀ ಯಾತರ ಜನ್ಮಾ | ನಾಯಿಗಿಂದತ್ತಾಧಮ ಪ ಛೀ ಯಾತರ ಜನ್ಮಾ ನಾಯಿ ಹಿಂದತ್ತಾಧಮ ಬಾಯಿ ಬಡಕನಾಗಿ ಮಯ್ಯ ಮರೆವರೇ ನಿಮ್ಮಾ ಅ.ಪ ಸಾಧುರಾನುಸರಿಸಿ | ಬೋಧನಾಮೃತ ಸೇವಿಸಿ | ಹಾದಿವಿಡಿದು ಗತಿ ಸಾಧಿಸಿ | ಘಾಸಿ 1 ಬುದ್ಧಿ ತನಗ ಇಲ್ಲಾ | ತಿದ್ದಿದರ ಕೇಳಲಿಲ್ಲಾ | ಇದ್ದೆರಡಾದಿನದೊಳು | ಸದ್ಯ ಸೌಖ್ಯ ಕಳೆದೆಲ್ಲಾ | 2 ಕಲ್ಲು ಕಟೆಯ ಬಹುದು | ಬಿಲ್ಲು ಮಣಿಸಬಹುದು | ನಿಲ್ಲದೇ ವನಕಿ ತುಂಡಾ | ಸಲ್ಲದಂತೆ ನೀನಾಗುದು 3 ಮರಹುಟ್ಟಿ ಮರ ಬಿದ್ದಾ | ತೆರನಾದೋ ಅಪ್ರಬುದ್ಧಾ | ತಿರುಗಿ ನೋಡಿನ್ನಾರೆ | ಚ್ಚರಿತು ನೀ ಮದದಿಂದ 4 ಗುರು ಮಹೀಪತಿಜನಾ ಧರಿಸಿರೋ ಸದ್ವಚನಾ ಸರಿಕರ ಕಂಡು ಹ್ಯಾವಾ ವರಿಸದೆ ಇಹುದೇನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಥಾದೇವೊ ತಥಾ ಗುರೌ ಶ್ರುತಿ ಹೇಳಿದ ಸನ್ಮತಲಿರ್ಯೊ ಧ್ರುವ ವೃಥಾ ಅಭಾವ ನೀ ಹಿಡುವರೆ ಸ್ವತ:ಸಿದ್ಧವ ತಾಂ ಬಿಡುವರೆ ಸತ್ಸಂಗದಲಿ ನೋಡಿನ್ನಾರೆ ಚಿತ್ಸುಖ ಹೊಳೆವರು ಕಣ್ಣಾರೆ 1 ಮುಗಿಲಿಗೆ ಮತ್ತೆ ಮುಗಿಲುಂಟೆ ಹಗಲಿಗೆ ಹಗಲಾಗುದುಂಟೆ ಜಗ ಇಹುದಕೆ ಜಗಮುಂಟೆ ಹೀಗಾದ ಮ್ಯಾಲೆ ವಸ್ತು ಎರಡುಂಟೆ 2 ಅನುಭವಕಿದರಿಟ್ಟು ಬಾಹುದು ಖೂನ ಹೇಳವ್ಯಾವು ನೋಡು ವೇದ ದೀನ ಮಹಿಪತಿಗಿದೆ ಬೋಧ ಭಾನುಕೋಟಿತೇಜನೊಂದೇ ತಾನಾದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು