ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಖಿಳ ಗುಣಗಣ ಪೂರ್ಣ ಪ ಅಂಬುಜಾಸನ ಜನಕ ನರಹರಿ ಅಂಭ್ರಣೀ ಜಗನ್ನಾಥ ನಾಯಕ ಬಿಂಬ ವಿಷ್ಣುವೆ ನಿಖಿಳವಿಶ್ವಕೆ ತುಂಬಿ ಭಕ್ತಿಯ ಕಾಯೋ ಕರುಣಿ ಯೇ ಅ.ಪ. ತಂದೆಕಾರಣ ಭವದೀ- ನೀ ಎನ್ನ ಬಂದೆನಲ್ಲದೆ ನಿಜದೀ- ಸುಖಪೂರ್ಣ ನಿಂದು ನಡೆಸದೆ ಭವದೀ- ದಾಟಿನ್ನ ಎಂದಿಗಾದರು ಗೆಲ್ಲುವೆನೆ ಘನ್ನ ಬಂಧನಪ್ರದ ನೀ ಬಂಧಮೋಚಕ ತಂದ ವಿಷ್ಣುವೆ ಮೂಲಕಾರಣ ವೆಂದು ಶೃತಿಗಳವೃಂದ ನುಡಿವುವು ಬಂದು ನಿನಗಿಂತಧಿಕರಾರೈ ನಿಂದು ಹೃದಯದಿ ಸರ್ವಕಾಲದಿ ತಂದು ಉಣಿಸುವೆ ಸಕಲ ವಿಷಯವ ಬಂಧಿ ನಾನಿಹೆ ಜಡವೆ ನೀ ಬಿಡೆ ಮುಂದಿನಾಗತಿ ಬೇಗ ತೋರೈ ಇಂದಿರೇಶ ಮಹೇಂದ್ರ ಸುಖಮಯ ಕಂದರಾಶ್ರಯ ಬ್ರಹ್ಮಮಂದಿರ ನಂದಿವಾಹನ ತಾತ ವಿಭುವರ ಚಂದಗೋಚರ ಸಾರ್ವಭೌಮನೆ ಕೂಂದುನಕ್ರನ ಗಜವ ಸಲಹಿದೆ ನಂದನೀಡಿದೆ ಪಾರ್ಥಮಡದಿಗೆ ತಿಂದು ಎಂಜಲ ಕಾಯ್ದೆ ಶಬರಿಯ ಗಂಧ ಕೊಳ್ಳುತ ಕಾಯ್ದೆ ಕುಬ್ಜೆಯ ಕಂದ ಕೂಗಲ್ ಬಂದೆ ಕಂಭದಿ ಇಂದ್ರ ಗೋಸುಗ ಬಲಿಯ ಬೇಡದೆ ಮಂದರಾದ್ರಿಯ ಪೊತ್ತೆ ಸುರರಡೆ ಸುಂದರಾಂಗಿಯುಆದೆ ಹಾಗೆಯೆ ಹಿಂದೆ ಈತೆರ ನಿತ್ಯತೃಪ್ತನೆ ಬಂದು ಸಲಹಿದ ಭಕ್ತವೃಂದವ ಮಂದನಾದರು ಶರಣುಬಿದ್ದವ ನೆಂದು ಸಲಹೈ ಪೂರ್ಣಕರುಣಿಯೇ1 ಕೂಡಿಸುತ ಮನ ವಿಷಯ ಬಲೆಯಲ್ಲೀ ಮಾಡಿಸುವೆ ಮಾಡಿದ್ದ ದಿನದಿನದೀ ಗೂಢ ನಿನ್ನಯ ಭಕ್ತಿ ಕೊಡಲೊಲ್ಲೀ ಕೇಡುಮೋಹ ಸಜಾಡ್ಯ ಹರಿಸಿಲ್ಲೀ ಓಡಿಓಡಿಸೆ ಜಗವು ನಡೆವುದು ನೋಡಿನೋಡಿಸೆ ನಾವು ನೋಳ್ಪೆವು ಮಾಡಿಮಾಡಿಸೆ ಕರ್ಮವಾಹುದು ಪ್ರೌಢ ನಿನ್ನಯ ಬಲದ ವಿಶ್ವಕೆ ಕಾಡಿಕಾಡಿಪ ವಿಷಯ ಬಿಡಿಸುತ ಹಾಡಿಹಾಡಿಸಿ ನಿಮ್ಮ ಕೀರ್ತನೆ ಆಡಿಆಡಿಸಿ ಸಾಧುಸಂಗದ ಜಾಡುತೋರಿಸೊ ಭಕ್ತಿ ಮಾರ್ಗದ ಕ್ರೋಢನರಹರಿ ಮತ್ಸ್ಯವಾಮನ ಪ್ರೌಢ ಭಾರ್ಗವ ರಾಮಕೃಷ್ಣನೆ ಗಾಡಿಕಾರ ಪರೇಶ ಬುದ್ಧನೆ ದೂಡು ಕಲಿಯನು ಕಲ್ಕಿದೇವನೆ ಕೂಡು ಮನದಲಿ ಬಾದರಾಯಣ ನೀಡು ಜ್ಞಾನವ ಜೀಯ ಹಯಮುಖ ಮಾಡು ದತ್ತಾತ್ರೇಯ ಕೃಪೆಯನು ಈಡುಕಾಣದು ಕಪಿಲಮೂರ್ತಿಯೆ ಬೀಡುಗೈದಿಹ ಬೀಜ ನಿದ್ರೆಯು ನೋಡಗೊಡದೈ ನಿನ್ನತುರ್ಯನೆ ನಾಡುದೈವಗಳನ್ನು ಭಜಿಸಲು ಓಡದದು ಎಂದೆಂದು ಸತ್ಯವು ಮಾಡುತಲಿ ಸಾಷ್ಟಾಂಗ ನತಿಗಳ ಜೋಡಿಸಿಹೆ ಶಿರ ಪಾದಪದ್ಮದಿ ಗಾಢಪ್ರೇಮದಿ ಸಲಹು ಭೂಮನೆ ಮೂಡಿಸುತನಿಜ ಭಕ್ತಿ ಜ್ಞಾನವ 2 ಎನ್ನ ಯೋಗ್ಯತೆ ನೋಡೆ ಫಲವಿಲ್ಲ ನಿನ್ನಕೃಪೆ ತೋರದಿರೆ ಗತಿಯಿಲ್ಲ ಅನ್ಯ ಹಾದಿಯು ಯಾವುದೆನಗಿಲ್ಲ ಘನ್ನಚಿತ್ತಕೆ ಬರಲು ತಡಿಯಿಲ್ಲ _ ಹೇನಲ್ಲ ಪೂರ್ಣಜ್ಞಾನಾನಂದ ಶಾಶ್ವತ ಪೂರ್ಣ ಚಿನ್ಮಯ ಪೂರ್ಣ ಮೂಲದಿ ಪೂರ್ಣ ನಂದದಿ ಪೂರ್ಣ ಅವಯವಿ ಪೂರ್ಣಶಕ್ತನೆ ಪೂರ್ಣಬೋಧ ಮುನೀಂದ್ರ ವಂದಿತ ಶರಧಿ ದೇವನೆ ಪೂರ್ಣನಿತ್ಯಾನಂದ ದಾಯಕ ಪೂರ್ಣಮಾಡೈ ಬಯಕೆ ತೂರ್ಣದಿ ನೀನೆ ಸರ್ವಾಧಾರ ಪ್ರೇರಕ ನೀನೆ ರಕ್ಷಕ ಸರ್ವಶಿಕ್ಷಕ ನೀನೆ ಸೀಮಾಶೂನ್ಯ ನಿಶ್ಚಯ ನೀನೆಪೊಗಳಿತನಿಖಿಳವೇದದಿ ನೀನೆ ವಾಚ್ಯನು ಸರ್ವಶಬ್ದದಿ ನೀನೆ ಮುಕ್ತಾಯಕ್ತ ಸೇವಿತ ನೀನೆ ದೋಷವಿದೂರ ಸ್ಥಾಣುವು ನೀನೆ ಸೃಷ್ಟಾ ದ್ಯಷ್ಟಕರ್ತೃವು ನಿನ್ನಸಮ ಉತ್ಕøಷ್ಟರಿಲ್ಲವು ನಿನ್ನ ದಾಸರು ಸರ್ವಜೀವರು ಭಿನ್ನರೈ ಸರ್ವತ್ರ ಸರ್ವರು ನಿನ್ನ ದಾಸರ ಭಾಗ್ಯಬೇಡುವೆ ಜನ್ಮಜನ್ಮಕು ಇದನೆ ಬಯಸುವೆ ನಿನ್ನ ನಂಬಿಹೆ ನಿನ್ನನಂಬಿಹೆ ಸಿರಿಪತಿ ಕೃಷ್ಣವಿಠಲನೇ 3
--------------
ಕೃಷ್ಣವಿಠಲದಾಸರು
ಇದೇ ನೋಡಿರೋ ನಿಜನೋಡಿರೋ ಧ್ರುವ ನೋಡಿನೋಡಿ ನೋಡಿ ನೋಡುದರೊಳು ಕೂಡಿ ನೋಡುವದೇನೆಂದು ನೋಡಿ ನೋಡಿದ ಮ್ಯಾಲಿನ್ನು ಮೂಡಿಬಂದರ ಘನ ನೋಡುವದೇ ಖೂನ ಮಾಡಿ ಮಾಡಿದ ಮಾಟವು ಕೂಡಿಬಂದರೆ ಕೈಯ ನಾಡಗೂಡ ಹೇಳಬ್ಯಾಡಿ ಗೂಢ ಗುಹ್ಯದ ಮಾತು ಒಡೆದು ಹೇಳುವದಲ್ಲಾ ನೋಡಿ ನಿಮ್ಮೊಳು ಬೆರೆದಾಡಿ 1 ಓದಿದರೋದಬೇಕಿದೊಂದೇ ಅಕ್ಷರ ಭೇದಿಸುವಂತೆ ಬ್ರಹ್ಮಾಂಡ ಇದೇ ಸಾಧಿಸಿನ್ನು ಮೂಲವ ತಿಳಿಯದೆ ಓದುವದ್ಯಾಕೆ ಉದ್ದಂಡ ಹಾದಿ ತಿಳಿಯದಿದ್ದರೆ ಹೇಳಿಕೊಡುವನು ಸದ್ಗುರು ಘನಪ್ರಪಂಚ ಭೋದಿಸಿ ಬ್ರಹ್ಮಾನುಸಂಧಾನದ ಸುಖ ಉದಯ ಮಾಡುವ ಅಖಂಡ 2 ನಾನ್ಯ ಪಂಥವೆಂಬ ಮಂತ್ರದನುಭವ ಚನ್ನಾಗ್ಯಾಗಬೇಕು ಖೂನ ಇನ್ನೊಂದು ಬ್ಯಾರೆಂಬ ಭಿನ್ನವಳಿದ ಮ್ಯಾಲೆ ತನ್ನೊಳಾಯಿತು ಸಮ್ಯಕಙÁ್ಞನ ಧನ್ಯ ಧನ್ಯ ಧನ್ಯ ಧನ್ಯಗೈಸುವದಿದು ಕಣ್ಣಾರೆ ಕಾಂಬೊ ಸಾಧನ ಉನ್ಮತವಾಗದೆ ಸನ್ಮತದೋರದು ಇನ್ನೊಬ್ಬರ ಕೇಳುವದೇನ 3 ಸರ್ವಮಿದಂ ಖಲು ಬ್ರಹ್ಮವೆಂಬುವ ಮಾತು ದೋರ್ವಾಂಗೆ ನೆಲೆಗೊಳಬೇಕು ಸರ್ವ ಸಾಕ್ಷಿ ಸರ್ವಾಧಾರವು ತಿಳಿಯದೆ ಗರ್ವಿತಲ್ಯಾಡುವ ಮಾತು ಹೋತು ಗುರ್ವಿನಂಘ್ರಿಗಿನ್ನು ಗುರುತವ ಕೇಳದೆ ಮವ್ರ್ಹಿನೊಳೀಹುದು ಮುಸುಕು ನಿರ್ವಿಕಲ್ಪನ ನಿಜ ಸ್ಮರಿಸುವಾಂಗೆ ಕಣ್ಣ ದೆರ್ವದಿದೊಂದೇ ಸಾಕು 4 ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಎಂದು ಗುರುವಿಗೆ ಕೇಳಿ ನಿಜ ವಂದ ದೇಹದ ಒಳಗಿಹ್ಯ ದ್ಯಾವರ ತಿಳಿದರ ಜನ್ಮಕೆ ಬಂದುದು ಚಂದ ಸೋಹ್ಯ ಸೊನ್ನೆಯ ಗುಹ್ಯವ ತಿಳಿದರ ಭವ ಮೂಲದಿಂದ ಬಾಹ್ಯಾಂತ್ರ ಪರಿಪೂರ್ಣ ಭಾಸುತಲ್ಯದೆ ಮಹಿಪತಿಗಿದೆ ಬ್ರಹ್ಮಾನಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎಷ್ಟು ಸುಖವ ಕೃಷ್ಣನ ನೋಡಿನೋಡಿಸುಖಿಸುವ ಜನರು ಎಷ್ಷು ಎಷ್ಟು ಭಾಗ್ಯದಿಂದ ತುಷ್ಟರು ಉತ್ಕøಷ್ಟರಿವÀರು ಪ. ಬಾಜಾರದೊಳಗೆಲ್ಲ ತೇಜಿ ಆನೆಯ ಸಾಲುಕಾಜಿನ ಕಂಬ ಕಿಡಕಿ ಕಮಲಾಕ್ಷಿಕಾಜಿನ ಕಂಬ ಕಿಡಕಿ ಮಹಲೊಳು ಜೂಜಾಡುವರು ಕಡೆಯಿಲ್ಲ 1 ನೀಟಾದ ಬೀದೀಲಿ ಥಾಟಾದ ಮನೆಗಳುಮಾಟಾದ ಪಗಡಿ ಚದುರಂಗ ಕಮಲಾಕ್ಷಿಮಾಟಾದ ಪಗಡಿ ಚದುರಂಗ ಜೂಜಿನ ಆಟ ಆಡೋರು ಕಡೆಯಿಲ್ಲ2 ಹಿಂಡು ಕಡೆಯಿಲ್ಲ 3 ಲಿಂಬೆ ಪೊಪ್ಪುಳಿ ಸೀರೆಯನ್ನುಟ್ಟು ತುಂಬ ವಸ್ತ್ರಗಳಿಟ್ಟುಕಂಬು ಕಂದರನ ಪುರದೊಳು ಕಮಲಾಕ್ಷಿಕಂಬುಕಂದರನ ಪುರದ ಬೀದಿಯೊಳಗೆಗೊಂಬೆ ಯಾಡುವರು ಕಡೆಯಿಲ್ಲ 4 ಮ್ಯಾಲಿನ ಬೀದೀಲಿ ಬಾಲಕಿಯರಿಂದೆಷ್ಟುಶ್ರೀಲೋಲ ರಾಮೇಶನ ಪುರದೊಳಗೆ ಕಮಲಾಕ್ಷಿಶ್ರೀಲೋಲ ರಾಮೇಶನ ಪುರದ ಬೀದಿಯೊಳಗೆ ಗೋಲಿಯಾಡುವರು ಕಡೆಯಿಲ್ಲ 5
--------------
ಗಲಗಲಿಅವ್ವನವರು
ವ್ಯರ್ಥ ಹೋರಾಟವಲ್ಲದೆ ಇದು ನಿಜವಲ್ಲಾ ಕರ್ತೃ ಶ್ರೀಹರಿ ಮಾಡಿದರ್ಥವೆ ಸರಿ ಅಲ್ಲದೆ ಪ ಪುರಾಕೃತ ಸಂಚಿತಾರ್ಥ ಪುಣ್ಯ ಪಾಪಗಳಿಂದ ಪರಿ ಅನುಭವ ಬಡುತಾ ಇನ್ನೂ ಇರುವೆಯಲ್ಲದೆ ಘಣಿಯಲಿ ವಿರಂಚಿ ಬರೆದ ಭಂಗ ಬಡುತಲಿಷ್ಟು 1 ಎಂದೆಂದೂ ನಿನ್ನ ಹಿಂದೆ ಒಂದೂ ಬರುವುದಿಲ್ಲ ಮುಂದುಗಾಣದೆ ಇನ್ನು ಮೋಹಕೆ ಸಿಲುಕಿ ನಂದೆಂದು ಪರಿಯಿಂದ ಘಳಿಸಿದ ದ್ರವ್ಯದ ಬಿಂದಿಗೆ ದಾರೋ ನೀದಾರೋ ಪಾಮರ ಮೂಢಾ 2 ನನ್ನ ಹೆಂಡತಿ ಮಕ್ಕಳು ನನ್ನ ಮನೆ ಬಾಗಿಲು ನನ್ನ----ಯು ವೃತ್ತಿ ನನ್ನದೆಂದೂ ನಿತ್ಯ ಒಂದಾಡುವೆ ನೀದಾರೋ ಮೂಢಾ 3 ತಂದೆ ತಾಯಿಯ ಗರ್ಭದಿಂದ ಪುಟ್ಟಿರುವಂದೇ ತಂದೆಲ್ಲೊ ತಾಯೆಲ್ಲೊ ತಾನೆಲ್ಲೊ ಮರುಳೆ ಹಿಂದೆ ಆದವರ ಚರ್ಯವ ವಿವರಿಸಿ ನೋಡಿನೋಡಿ ಕುಂದು ಇಲ್ಲದೆ ಮುಕ್ಕುಂದನ ಸ್ಮರಿಸು ಗಾಢಾ 4 ಮಾಯಾ ಪ್ರಪಂಚದೋಳ್ ಮಗ್ನನಾಗಿ ಇನ್ನು ಕಾಯಾ ಅಸ್ಥಿರವೆಂದು ಕಾಣೋ----- ಶ್ರೀಯರಸ 'ಹೆನ್ನ ವಿಠ್ಠಲ’ರಾಯನ ಕರ್ಮ ಧ್ಯಾನವು ಬಿಟ್ಟು 5
--------------
ಹೆನ್ನೆರಂಗದಾಸರು
ಹರಿನಾಮ ಭಜನೆಯೊಳಿರು ಇರೂ ಶ್ರೀಹರಿ ಮಹಿಮೆಯ ಭುವಿ ತೋರುರೋರು ಪ ಸಜ್ಜನರ ಸಂಗವ ಮಾಡು ಮಾಡು ದುರ್ಜನರ ಸಂಗವ ಬಿಡೂ ಬಿಡೂ ಮೂಜ್ಜಗದೊಡೆಯನ ಪಾಡು ಪಾಡು ಇನ್ನು ಮುಕುತಿಯ ಬೇಕೆಂದು ಬೇಡು ಬೇಡು 1 ಪಾದ ಹಿಡಿ ಹಿಡಿ ಮನದಿರುವ ಕಾಮ ಕ್ರೋಧ ಕಡಿ ಕಡಿ ಶರಣರ ಕೂಟದೋಳ್ ಕೂಡಿ ಕೂಡಿ ಬೇಗ ನರಹರಿ ಮೂರ್ತಿಯ ನೋಡಿನೋಡಿ 2 ರಾಮನಾಮಾಮೃತ ಕುಡಿ ಕುಡಿ ಅತಿಕಾಮುಕ ದ್ರವ್ಯವ ಬಿಡಿಬಿಡಿ ಸ್ವಾಮಿ ನಾರಾಯಣನೆಂದು ನುಡಿನುಡಿ ಬಹು ಪ್ರೇಮದಿ ಹರಿಕರುಣ ಪಡಿಪಡಿ 3 ಸಕಲಶಾಸ್ತ್ರಗಳ ನೋಡು ನೋಡು ಅದರ ಸಾರಾಂಶ ತಿಳಿದು ಆಡೂ ಆಡೂ ಪ್ರಕಟಿತ ಭಕ್ತರಿಗನ್ನ ನೀಡು ನೀಡು ಇನ್ನು ಪರಮಾತ್ಮನ ಕೊಂಡಾಡು ಆಡು 4 ನರಹರಿಯು ಕಥೆಯ ಕಿವಿಲಿ ಕೇಳುಕೇಳು ಪರಮ ಭಕ್ತರ ಪಾದಕೆ ಬೀಳು ಬೀಳು ಶ್ರೀ ಪರಬ್ರಹ್ಮನ ಸೇವೆಗೆ ಏಳು ಏಳು 5 ಯೋಗ್ಯರ ಕಂಡರೆ ಹಿಗ್ಗೂ ಹಿಗ್ಗೂ ಅತಿ ಭಾಗ್ಯರ ಕಂಡರೆ ತಗ್ಗೂ ತಗ್ಗೂ ಸುಜ್ಞಾನಿಗಳಿಗೆ ಡೊಗ್ಗು ಡೊಗ್ಗು ಇನ್ನು ಶುದ್ಧಾತ್ಮಕರೊಳು ಜಗ್ಗು ಜಗ್ಗು 6 ಸನ್ಯಾಸಿಗಳನು ಸೇರು ಸೇರು ದುಷ್ಟದುರ್ಮಾಗರ ಕಂಡು ದೂರು ದೂರು ಮರ್ಮ ಬಲ್ಲವರಲ್ಲಿ ಜಾರು ಜಾರು ಶ್ರೀ ಮಹಾ 'ಹೆನ್ನ ವಿಠ್ಠಲನ’ ‘ಸಾರೂ ಸಾರೂ’ 7
--------------
ಹೆನ್ನೆರಂಗದಾಸರು