ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿದೆನೋ ಕೊಂಡಾಡಿದೆನೋ ಪ ಜೋಡಿಸಿ ಕರಗಳ ಬೇಡಿದೆ ಕೃಷ್ಣನ ಅ.ಪ ಮೂಡಲು ಸೂರ್ಯನು ಹಿಮದ ಕಣಗಳಂತೆ ಓಡಿದು ಮೋಹವು ಕೂಡಿತು ಧೈರ್ಯವು ನೋಡಲು ಕೃಷ್ಣನ ಮಂಗಳ ಮೂರ್ತಿಯ ಈಡೇರಿತು ಮನದಾಸೆಯು ಕೃಷ್ಣನ 1 ಕಳೆಯಿತು ದುರಿತವು ಬೆಳೆಯಿತು ಸುಕೃತವು ಸೆಳೆದನು ಮನವನು ತನ್ನಡಿಗಳಲಿ ಬಳಿಯಲಿ ರುಕ್ಮಿಣೀ ಭಾಮೆಯರೊಡಗೂಡಿ ಕೊಳಲೂದುವ ಮಂಗಳಕರ ದೃಶ್ಯವ 2 ಉಕ್ಕಿತು ಹರುಷವು ಪರಮ ದರುಶನದಿ ನಕ್ಕನು ನೋಡುತ ಕರುಣಾಪಾಂಗದಿ ಭಕ್ತ ಪ್ರಸನ್ನನು ತಕ್ಕವನೆಂದೆನ್ನ ಅಕ್ಕರೆಯಿಂದಲಿ ಕರೆಯುವಂತಿರುವುದ 3
--------------
ವಿದ್ಯಾಪ್ರಸನ್ನತೀರ್ಥರು
ವ್ರಜ ವಿಹಾರ ಜಯ ಮುರಾರೆ ಪ ಭಜಿಪ ಯೋಗವೇನು ಸುಕೃತವೊ ಅ.ಪ ಮುರಳಿನಾದ ಸುಧೆಯ ಧಾರೆ ಹರಿದುದೆನ್ನ ಶ್ರವಣದಲ್ಲಿ ಬೆರೆತೆ ನಿನ್ನ ಮರೆತೆ ಮೈಯ್ಯ ಹಿರಿಯದಾಯ್ತು ಜನುಮವಿಂದು 1 ಮೃದುಲಹಾಸ ಮಧುರಭಾಷ ವದನ ಸೊಬಗ ನೋಡಿದೆನೋ ಶ್ರೀಶ ಸದನದಲಿ ಮನೋಹರ ವಿಲಾಸ ಹೃದಯ ಕಮಲಕಾದುದು ವಿಕಾಸ 2 ಭೋಕ್ತ ನಿನಗೆ ಭಕುತಿ ಕುಸುಮವೆನ್ನ ಸೇವೆ ಸುಖವನೀಪರಿ ನಿತ್ಯಗೊಳಿಸೊ ಮುಕುತಿಯಿರಲಿ ಶ್ರೀ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಹೇ ಮುರಾರೆ ಹೇ ಮುಕುಂದ ಪ ಪ್ರೇಮ ವೀಕ್ಷಣದಿಂದ ಪೊರೆಯೊಅ.ಪ ಈ ಮಹಾ ಕುತಾಪಗಳಲಿ ನಾಮ ಕೀರ್ತನೆಯೊಂದೆ ಎನಗೆ ಕ್ಷೇಮಕರವೆಂದರಿತು ವದನದಿ ರಾಮ ರಾಮನೆಂದು ಕೂಗುವೆ 1 ನೋಡಿದೆನೋ ಈ ಭವದ ಭೋಗವ ಬೇಡದಾಯಿತೊ ನಿನ್ನ ದಯದಿ ಈಡನರಿಯೆನೊ ನಿನ್ನ ಗುಣಗಳ ಪಾಡಿ ಹಿಗ್ಗುತ ಕುಣಿಯುವುದಕೆ 2 ಆಸೆ ಎನ್ನನು ಮೋಸ ಮಾಡಿತೊ ಕ್ಲೇಶ ಬಿಡದೊ ಈಶ ನಿನ್ನಯ ಭಜನೆಯೊಂದೆ ಲೇಸೊ ಲೇಸೊ ಹೇ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ದಣಿಯ ನೋಡಿದೆನೋ ವೆಂಕಟನ ಮನದಣಿಯೆ ನೋಡಿದೆ ಶಿಖಾಮಣಿಯ ನಿರ್ಮಲನ ಪಕೇಸಕ್ಕಿಅನ್ನ ಉಂಬುವನ ದುಡ್ಡುಕಾಸು ಬಿಡದೆ ಹೊನ್ನುಗಳಿಸಿಕೊಂಬುವನ ||ದೋಸೆ ಅನ್ನವ ಮಾರಿಸುವನತನ್ನ ದಾಸರ ಮೇಳದಿ ಕುಣಿದಾಡುತಿಹನ 1ಗಂಟಿನೊಲ್ಲಿಯ ಹೊದ್ದಿಹನ-ಹೊರಹೊಂಟು ಹೋಗಿ ಬೇಟೆಯಾಡುತಲಿಹನ ||ಗಂಟೆ ನಾದಕೆ ಒಲಿಯುವನ ಭೂವೈ-ಕುಂಠವಿದೆಂದು ಹಸ್ತವ ತೋರಿದವನ 2ಬೆಟ್ಟದೊಳಗೆ ಇದುತಿಹನ ಮನಮುಟ್ಟೆ ಭಜಿಪ ಭಕುತರಿಗೊಲಿದವನ ||ಕೊಟ್ಟ ವರವ ತಪ್ಪದವನ ಈಸೃಷ್ಟಿಗಧಿಕಪುರಂದರವಿಠಲನ3
--------------
ಪುರಂದರದಾಸರು