ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನೊಳು ನೋಡಾನಂದವ ಎನ್ನ ಮನವೆ ಚೆನ್ನಾಗಿ ಚಿನ್ಮಯವ ಇನ್ನೊಂದಿಹವೆಂಬನ್ಯ ಪಥವಳಿದು ಉನ್ಮನಿಯೊಳು ಘನಸುಖ ಅನುಭವಿಸುತ ಧ್ರುವ ಕಂಗಳ ಕೊನೆಯ ಮೆಟ್ಟಿ ಮುಂಗಡಿಯಲಿಹ ಮಂಗಳಾತ್ಮಕನ ನೋಡಿ ಲಂಘಿಸಿ ಮೂಲಸ್ಥಾನವ ತುಂಗ ವಿಕ್ರಮನ ಸಂಗ ಸುಖವನರಿದು ಅನುದಿನ ಇಂಗಿತವಾಗಿ ನೀ ಗಂಗೆಯೊಳು ಜಲ ಬೆರೆದಾ ಸುಸಂಗದಿ 1 ನಾನು ನಾನೆಂಬದಳಿದು ನಿನ್ನೊಳು ನೀನೆ ಏನೆಂದು ತಿಳಿದು ನೋಡು ಆನಂದೋ ಬ್ರಹ್ಮದಾಟವು ತಾನೆ ತಾನಾಗಿ ತನುವಿನೊಳು ತೋರುವದು ಘನಗುರುವಚನಾನುಭವದಲಿ ಸೇವಿಸಿ ಸ್ವಾನುಭವದ ಸುಖದಲಿ ಲೋಲ್ಯಾಡುತ 2 ಮರೆದು ಮಾಯದ ಮಾಟವ ಅರಿತು ನೋಡು ಬೆರೆದು ದಾಂಟಿ ತ್ರಿಕೂಟವ ತೋರುವ ದಿವ್ಯಭಾವವ ತಾರಕಗುರು ಸಾರುವ ಕರುಣ ನೋಟವ ಅರವಿನೊಳಿರು ಮಹಿಪತಿ ಗುರುಪಾದದಿ ಪರಮಾನಂದದಿ ಸುಖ ಸೂರ್ಯಾಡುತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮರಣ ಕಾಲವ ತಿಳಿಸೋ ಮಧುಸೂದನಾ ಪ ಶರಣು ಬಂದವರ ಭಯಹರಣಾ ಅ.ಪ. ಸ್ನಾನಮಾಡಲಿಬೇಕು ಮೌನದಿಂದಿರಬೇಕು ಹರಿಜ್ಞಾನಪೂರ್ವಕ ಹರಿಯ ಧ್ಯಾನಬೇಕುನಾನಾ ವಿಷಯದ ಚಿಂತೆ ಮಾನಸದಿ ಬಿಡಬೇಕುದಾನ ಧರ್ಮಗಳನು ಮಾನಸದಿ ಮಾಡಬೇಕು 1 ಸುತ್ತಲು ಜನರುಗಳ ಹತ್ತಿರ ಕೂಡುತಲಿನಿತ್ಯ ಭಾಗವತಾದಿ ಶಾಸ್ತ್ರಗಳನುಮೃತ್ಯು ಕಾಲದಿ ಪರಿಸೆ ಶ್ರೋತ್ರದಿಂ ಕೇಳಿ ಯಮ-ಭೃತ್ಯರು ಓಡಲಿಬೇಕು ಎತ್ತಿ ಕಾಲುಗಳು 2 ಮಕ್ಕಳು ಮನೆಗಳಲಿ ಚಿಕ್ಕ ಯುವತಿಗಳಲ್ಲಿಮಿಕ್ಕಾದ ಪಶು ಕೃಷಿ ರೊಕ್ಕಗಳಲ್ಲಿಪೊಕ್ಕಿ ಮನಸಿಲಿ ವಿಷಯ ಸಿಕ್ಕಿ ತೊಡಕೆನೊ ಎನ್ನವಕ್ರವಾ ತೋರಿಸುತ ಮೆಲ್ಲ ಕೈ ಬಿಡಿಸಿನ್ನು 3 ಕಮಲ ಮಂದಹಾಸವ ತೋರೋಸಿಂಧು ಉದ್ಧರನೆ ವೃಂದಾವನೀಯೋ 4 ಸಿಂಧುವಿನ ತಟದಿ ಗೋವೃಂದದೊಳಗೆ ಚಂದದಲಿ ಕೊಳಲೂದೋ ಸುಂದರ ಮುಖ ಕಮಲಒಂದೇ ಮನದಲಿ ನೋಡಾನಂದದಲಿ ಮಾಡೋಇಂದಿರೇಶ ನಿನ್ನ ಮುಂದೆ ನಿಂತಿರುವಾನಾರಂದ ಮುನಿ ಗುರುವರ ಮಂದಸ್ಮøತಿ ನೀಡೋ 5
--------------
ಇಂದಿರೇಶರು
ಮುದ್ದು ಕೃಷ್ಣಯ್ಯನ ನೋಡಾನ ಬನ್ನಿ ಪ ಕೃಷ್ಣಗೆ ಪೂಜೆಯ ಮಾಡಾನ ಬನ್ನಿ ಅ.ಪ ಚಿನ್ನದ ತೊಟ್ಟಿಲಲ್ಲಿ ಚೆನ್ನಾಗಿ ಕುಂತವ್ನೆ ಚೆನ್ನ ಚೆಲುವನಕ್ಕೋ ನಗುತವ್ನೇ ಕನ್ನೆ ರಾಧಮ್ಮಗೆ ಸನ್ನೆಯ ಮಾಡುತವ್ನೆ ಬನ್ನಿ ಬನ್ನಿ ಎಂದು ಕರಿತವ್ನೆ 1 ಹುಬ್ಬಹಾರಿಸ್ತವ್ನೆ ಮಬ್ಬ ತೋರಿಸ್ತವ್ನೆ ಅಬ್ಬಬ್ಬ ಇವನಾಟ ಬಲ್ ತಮಾಸೆ ಒಬ್ಬಿಟ್ಟು ಬೇಕಂತ ಕೈಲೇ ತೋರಿಸ್ತಾನೆ ಅಬ್ಬ ಇವ ಏಳೋದು ಒಂಥರ ಬಾಸೆ 2 ಎಂಥ ಮುದ್ದಿನ ಮೊಗ ಚೆಂದುಳ್ಳಿ ಚೆಲುವ ಇಂಥವ್ನ ನೀವೆಲ್ಲೂ ಕಂಡಿಲ್ಲ ಬನ್ರೋ ನಿಂತು ನೋಡಬೇಕಿವಗೆ ಆಲು ಮೊಸರು ಬೆಣ್ಣೆ ಹಣ್ ತುಂಬಿದ ಗಂಗಾಳ ತನ್ರೋ 3 ಕಿನ್ನರ ಗೆಜ್ಜೆ ಕೈಗೆ ಔಜುಬಂದಿ ತೊಟ್ಟವ್ನೆ ಕಣ್ಗೆ ಕಪ್ಪಾ ಹಚ್ಚಿ ನವಿಲ್ಗರಿ ತಲ್ಗಿಟ್ಟಿ ಹಣೆ ಉದ್ದಾದ ತಿಲಕ ಇಟ್ಟವ್ನೇ 4 ರಾಮ್ನೂ ನಾನೆಂತಾನೇ ಭೀಮ್ನೂ ನಾನೆಂತಾನೇ ಕಾಮ್ನಪ್ಪನೂ ನಾನೆ ನೋಡಂತಾನೆ ನಿಮ್ಮೂರ ದೇವ್ರಾಣೆ ನಾನೆ ಮಾಂಗಿರಿರಂಗ ನಿಮ್ನ ಕಾಯೋಕ್ಬಂದೆ ಅಂತಾನೆ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್