ಒಟ್ಟು 4 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವ ಹಿಂಗವ್ವ ಸುಳ್ಳೆ ಮಂಗ್ಯಳಾಗಿ ತಿರುಗಬೇಡವ್ವ ಪ ಪಿಂಗಟದಿಂದ ಭವಸಂಕಟದಲಿ ಬಿದ್ದು ಭಂಗದಿಂ ಕಂಗೆಡಬೇಡವ್ವ ಅ.ಪ ಮುಂಗಿಯ ಮನೆಯೊಳು ನಿಂತೆವ್ವ ತಂಗಿ ಹ್ಯಾಂಗಿದ್ದದರಂತರಿಯವ್ವ ಕಂಗಳಿನಿಕ್ಕಿ ಮಹ ಮಂಗಳಾತ್ಮನ ಕಂಡು ಪಿಂಗದ ಸವಿಸುಖ ಸುರಿಯವ್ವ 1 ಹಾಳು ಜಗದ ಗಾಳಿ ಬೇಡವ್ವ ನಿಜ ಬಾಳುವ ಮಾರ್ಗವ ತಿಳಿಯವ್ವ ನೀಲ ಶ್ಯಾಮನ ಧ್ಯಾನ ತಾಳಿಯ ಕಟ್ಟಿಕೊಂಡು ಕಾಲನ ದಾಳಿಯ ಗೆಲಿಯವ್ವ 2 ಮೈಲಿ ಮುಟ್ಟು ಚಟ್ಟಳಿಯವ್ವ ನೀ ಮೇಲುಮಂಟಪ ಹತ್ತಿ ನೋಡವ್ವ ಬೈಲಿಗೆ ಬೈಲು ನಿರ್ಬೈಲು ಶ್ರೀರಾಮನ ಲೀಲೆಯೊಳಗೆ ನಿಂತು ನಲಿಯವ್ವ 3
--------------
ರಾಮದಾಸರು
ಮರಗವ್ವ ತಂಗಿ ಮರಗವ್ವ ದುರುಳ ಗುಣದ ಸವಿ ಸುರಿಯವ್ವ ಪ ಪರಿಪರಿಯಿಂದಲಿ ಹರಿಹರಿಯೆನ್ನದೆ ದುರಿತದುರುಲಿನೊಳು ಬಿದ್ದೆವ್ವ ಅ.ಪ ಗುರುಹಿರಿಯರನು ಜರೆದೆವ್ವ ಪರಿಪರಿ ಪಾಪ ಕಟ್ಟಿಕೊಂಡೆವ್ವ ಹರಿಶರಣರ ಸೇವೆ ಅರಿಯವ್ವ ಹರಿಹ್ಯಾಂಗೊಲಿತಾನು ನಿನಗವ್ವ 1 ಹಿಂದಿನ ಕರ್ಮದು ನೋಡವ್ವ ಮುಂದೆ ಚಂದಾಗಿ ತಿಳಕೊಂಡುಳಿಯವ್ವ ಮಂದರಧರ ಗೋವಿಂದನ ಮಾನಸ ಮಂದಿರದೊಳಗಿಟ್ಟು ಭಜಿಸವ್ವ 2 ಗುರುವರ ಶ್ರೀರಾಮ ಚರಣವ್ವ ತಂಗಿ ಅನುದಿನ ಸ್ಮರಿಸವ್ವ ಶರಣ ಜನರ ಪ್ರಿಯ ಕರುಣಾಕರನು ನಿನ್ನ ಪೊರೆಯದೆ ಎಂದಿಗೆ ಇರನವ್ವ3
--------------
ರಾಮದಾಸರು
ಸಿಕ್ಕಿದನೆಹರಿಅಕ್ಕಕ್ಕ ಸುಖದಕ್ಕಿಸಿ ಕೊಳಬನ್ನ್ಯಕ್ಕಕ್ಕಚಿಕ್ಕವನಿವನಲ್ಲಮ್ಮಮ್ಮ ಬಿಡೆಪುಕ್ಕಟೆ ಜಾರುವನಮ್ಮಮ್ಮ ಪ.ಚಲ್ಲಿದ ಹಾಲ್ಮೈಯೆಲ್ಲಾಗಿದೆ ಹೊನ್ಚಲ್ಲಣ ತೊಯಿದಿದೆ ನೋಡವ್ವೆಅಳ್ಳೆದೆಗಾರನು ಅಳುಕುವನೆ ಹಗಲ್ಗಳ್ಳನ ಮಾಟವ ನೋಡವ್ವೆ 1ಮುಂಗುರುಳಿಗೆ ಮೆತ್ತಿದೆ ಕೆನೆಮೊಸರುಕಂಗಳುತುಪ್ಪಾಗಿದೆ ತಂಗಿ ರತ್ನದುಂಗುರ ಬೆರಳು ಮುಂಗೈಯ ಮತ್ತಂಗೈ ಬೆಣ್ಣ್ಯಾಗಿದೆ ತಂಗಿ 2ಪಡಗೊಡಿದು ಬಿಸಳಿಗೆ ನುಗ್ಗಲ್ಲೆಅಡಗ್ಯಡಗ್ಯಾಡುವನಿವನಂತೆಬಡಗಣ ಮೂಡಣ ಪಡು ತೆಂಕಣದಿತುಡುಗನ ಹುಯ್ಯಲು ಘನವಂತೆ 3ಗೋಡೆಯನೇರುವ ಧುಮುಕುವ ತಾ ಸಿಡಿದೋಡುವನಂಜದೆ ಅಲ್ಲಲ್ಲೆನೋಡಲು ಬಾಲಕ ಬಾಲೆಯರ ಪಿಡಿದಾಡ್ಯಾಲಂಗಿಪನಲ್ಲಲ್ಲೆ 4ಈಗಲೆ ಕಟ್ಟುವ ಬಿಟ್ಟರೆ ಇನ್ನಾವಾಗಲಿ ಸಿಕ್ಕುವನೆ ಬಾಲೆಹ್ಯಾಗಾದರೆ ಪ್ರಸನ್ವೆಂಕಟಗಿರಿಭೋಗಿಯ ಹೊಂದುವ ಬಾಲೆ 5
--------------
ಪ್ರಸನ್ನವೆಂಕಟದಾಸರು