ಒಟ್ಟು 6 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಏನೋ ನಿನ್ನ ಗುಡೀ ಗುಡೀ |ಒಳಗಿನ ಕಸವನು ಹೊಡೀ ಹೊಡೀ ಪ ಹಗಲಿರುಳೊ ನೀ ಬದುಕ ಮಾಡಿ |ಏನು ಗಳಿಸಿದ್ಯೋ ಹುಡೀ ಹುಡೀ ||ಜಗದೊಳು ದೇವನ ತಿಳಿಯಲೊಲ್ಲಿ |ತಿಳಿದೀತೊ ಅಲ್ಲಿಗೆ ನಡೀ ನಡೀ 1 ಹಸಿದು ಬಂದು ನೀ ವಸ್ತಿಯಾಗಿಳಿದರೆ |ಮತ್ತೇನಾರ ಕೊಡೂ ಕೊಡೂ ||ಅಸ್ತಮಯಾದಿತು ಉದಯದಲೆದ್ದು |ತಪ್ಪದೆ ಇಲ್ಲೆಂಬೊ ನುಡೀ ನುಡೀ 2 ನಾಕು ಕಾಯದೊಳು ಎರಡಿಟ್ಟನು ನೀ |ಎರಡನೆ ದೇವರಿಗೊಡೀ ಒಡೀ ||ಲೋಕಪಾಲಕ ಭವತಾರಕನಂಘ್ರಿಯ |ಈ ಕಾಯದಿ ದಯಾ ಪಡೀ ಪಡೀ 3
--------------
ಭಾವತರಕರು
ಎಲೆ ಎಲೆ ಎಲೆ ಥೂ ಪರದೇಸಿ ನೀ ಸುಳ್ಳೆ ಸುಳ್ಳೆ ಮಾಡಬೇಡ ಚೌಕಾಸಿ ಪ ತಿಳಕೊಂಡು ನೋಡು ನೀನು ಸುಧಾರಿಸಿ ಬಲವಾಗಿ ಬರದೇನು ಹಿಂಬಾಲಿಸಿ ಅ.ಪ ಎಷ್ಟು ದುಡಿದಿ ಸತಿಸುತರಿಗಾಗಿ ಗಂಟು ಕಟ್ಟಿಕಟ್ಹ್ಹೂಳಿಟ್ಟಿ ಇವರಿಗಾಗಿ ಅಷ್ಟು ಬಿಟ್ಟು ನಡೀತಿದ್ದಿ ಹಾಳಾಗಿ ನಿನ್ನ ಇಟ್ಟು ಬಂದು ಉಣುತಾರೋ ಹೋಳಿಗಿ 1 ಕಣ್ಣು ಮುಚ್ಚ್ಯಾಟವನಾಡುತಿದ್ದಿ ನೀ ಬಣ್ಣಗೆಟ್ಟು ಖರೆಯೆನುತಿದ್ದಿ ಸುಣ್ಣದ್ಹರಳ್ಹೊತ್ತ ಕೋಣ ಹೋಗಿ ಭರದಿ ಕಂಡು ತಣ್ಣೀರಿನೊಳು ಬಿದ್ದು ಸತ್ತ ಗಾದಿ2 ಘಟ ಇದು ಪುಸಿಯು ಬರಿದೆ ಗಾಳಿಯ ಮಟ್ಟ ವಸುಧೇಯೊಳಧಿಕೆಂದು ತೊಡು ನಿಷ್ಠೆ ನಮ್ಮ ಅಸಮ ಶ್ರೀರಾಮನ ಪಾದ್ಹಿಡಿ ಗಟ್ಟಿ 3
--------------
ರಾಮದಾಸರು
ಕೊಳಲೇನು ಪುಣ್ಯವ ಮಾಡಿ ರಂಗನ ಬಳಿಗೆ ಬಂದಿತೇ ಪ ನಳಿನ ನೇತ್ರೆಯರ ಮನಸು ಎಲ್ಲಾ ಸೆಳೆದು ಪೋದೀತೇ ಅ.ಪ. ವನಜನಾಭನು ಯಮುನೆಯಲ್ಲಿ ಕೊಳಲನೂದುವಮನಸು ನಿಲ್ಲದ ನಡೀರೆ ಪೋಗೋಣ ಕೇಳಿ ನಾದವ 1 ಇಂದು ಗೋವುಗಳ 2 ಎಂಥ ರಾಗ ಮಾಡುವೋನು ಕಂತುಪಿತನುಅಂತರಂಗಕೆ ಸುಖವನಿತ್ತು ಭ್ರಾಂತಿಗೊಳಿಸುವ 3 ಕುಂಡಲ ಹಾರಪದಕ ಧರಿಸಿ ಕುಳಿತಿಹಸರಸಿಜಾಕ್ಷಿಯರೆ ನೋಳ್ಪ ಜನಕೆ ಹರುಷ ಕೊಡುತಿಹ 4 ಸಿರಿಯು ಬಂದು ಮುರಳಿಯಾಗಿ ಮರುಳು ಮಾಡುವನೆಪರರಿಗಿಂಥ ಸುಖವುಂಟೆಂದು ಭ್ರಾಂತಿಗೊಳಿಸುವನೆ ] 5 ಇಂದು ನಮ್ಮೊಳು ಸರಸವಾಡುವನೆ 6
--------------
ಇಂದಿರೇಶರು
ನಡೀರೇ ನೋಡುವಾ ಗುರುಮೂರ್ತಿಯಾ | ಮಹಿಪತಿಯಾ | ತಡೆಯದೇ ಸಖಿಯರು ಪ ಪೊಡವಿಯೊಳಾನಂದ ಸ್ಥಿತಿಯಾ | ವರ ಯತಿಯಾ | ಅಡಿ ಕಮಲವ ಪಿಡಿದು | ಜಡಿದಿಟ್ಟು ಸದ್ಭಾವರತಿಯಾ | ಕರ ಮುಗಿದು 1 ಷೋಡಶ ಪರಿಸೇವೆ ಮಾಡುವಾ | ಪಾಡುವಾ | ನೋಡದೆಲೆ ಎಡ ಬಲವಾ | ಪಡ ಕೊಂಬಷ್ಟು ಸುಖವಾ 2 ಶರಣ ಬಂದ ವರಂಗೀಕಾರವಾ |ಮಾಡಿ ಹೊರವಾ | ದೋರಿ ಸನ್ಮಾರ್ಗ ಪೂರ್ಣಾ | ವರನಿಗಮದರ್ಥ ಸಾರವಾ | ನೋಡಿ ಬೀರುವಾ | ಕರುಣಿಪ ಕೃಷ್ಣನ ಪ್ರೀಯನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎತ್ತೋದೆಯಮ್ಮ ನಂಗನ್ನೆತ್ತಿಕೊ ಅಮ್ಮ ಬಲುಹೊತ್ತು ಹತ್ತು ಬಂದೇನೆ ಇತ್ತೆಅಮ್ಮಿತಿಂದೇನೆಪ.ತುತಿಬಾಯಿ ವಂಗ್ಯಾವೆ ಬಿತಿ ಆವು ವಾಕಿಕ್ಕಿ ಬತ್ತಾವೆಅತಿ ಆವು ಉಪ್ಪುಕಾಯಿ ಅಮ್ಮ ಮಮ್ಮೊಲ್ಲೆಉತ್ತತ್ತಿ ಹನ್ನು ಬೆನ್ನೆ ತಿಂದೇನೆ 1ಕಲ್ಲ ಕಿತ್ನ ಎಂತಾಡೆ ಬಂಗಾಡ ಬುಲ್ಲಿ ಬೆಲ್ಲ ತಿಂತಾಡೆಗಲ್ಲ ಕತ್ತಿಉಮ್ಮುಕೊತ್ತು ಹಲ್ಲು ನತ್ತುತಾಡೆಕೊಲ್ಲಬಾಲದೆ ದೂತ್ತ ಗೊಲ್ಲತೇಲನ 2ಎಕ್ಕೋ ಬಾ ಎಂಬ್ಯಾಡೆ ಬಿಸಿ ನೀಲು ಬುಕಶ್ಶಿ ಮಾಬ್ಯಾಡೆಸಕ್ಕರಿ ಚಿನ್ನಿಪಾಲು ಬತ್ತಲ ತುಂಬ ಕೊಡುಬಕ್ಕು ಮರಿಗಳ ಕೂಡ ಉಂಡೇನೆ 3ನತ್ತೆತ್ರ ತಂದುಕೊಡೆ ಚಂದಮಾಮನಿತ್ತಿತ್ತ ಕಡತಾಡೆಪುತ್ತಮಿಲ್ಲಿ ತುಂಬ ವಲ್ಲೆ ಮುತ್ತು ಕೊತ್ತರೆ ಶನ್ನಬುತ್ತಿ ತುಂಬ ಹನ್ನು ತಂದು ತಿಂದೇನೆ 4ಲಾಲಿಮಾಡಿಸಬ್ಯಾಡೆ ಕಿತ್ತನ್ನ ಮ್ಯಾಲೆ ದೋಗುಲ ಪಾಡೆಬಾಲ ಬವು ಕಂಡ್ಯನಗಂಜಿಕಿ ಬತ್ತದೆದೂಲ ಎನ್ನ ಬಿತ್ತು ನೀ ವೋಗಬ್ಯಾಡೆ 5ಉಗ್ಗು ಕೂಸು ಬಾಯಂಗೆ ಬಚ್ಚನಿಗೆ ಮಗ್ಗಮ್ಮಿ ಕೂಯಂಗೆಕೊಗ್ಗ ಮೀಸಿ ಜೋಗಿಗೆ ಕೋಬ್ಯಾಡೆ ಬಾಗಿಲಹೊಗ್ಗೆ ಹೋಗದಿಲ್ಲ ಜತ್ತಿಗನಾಣೆ 6ಕೂಚಿಗಮ್ಮಿ ಕೋಬ್ಯಾಡೆ ನಂಗಂಗಚ್ಚತಾನೆ ಅಮ್ಮ ನೋಡೆಪೆಚನ್ನ ವೆಂಕತ ಕಿತ್ತಪ್ಪ ಕನ್ನಡೀಲಿನಚುನಗಿ ನಗುತಾನೆ ಕಡತಾಡೆ 7
--------------
ಪ್ರಸನ್ನವೆಂಕಟದಾಸರು