ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾತ್ಮದ ವಿದ್ಯ ಅಧ್ಯಕ್ಷಾಗಬೇಕು ಸಾಧ್ಯ ಧ್ರುವ ಕನ್ನಡಿಯೊಳಗಿನ ತಾ ಗಂಟು ಸನ್ನಿಧವಾಗುವದೆ ಕೈಗೊಟ್ಟು ಬಣ್ಣಿಸಬ್ಯಾಡಿ ನಿಜಬಿಟ್ಟು ಕಣ್ಣಾರೆ ಕೆಟ್ಟು 1 ಕನಸಿಲೆ ತಾ ಕಂಡಭಾಗ್ಯ ಅನುಭವಕೆ ಬಹುದೆ ಶ್ಲಾಘ್ಯ ನೆನಸಿಕೊಂಡವ ಅಯೋಗ್ಯಜನದೊಳು ಅಶ್ಲಾಘ್ಯ 2 ಹೊತ್ತಿಗೆಲ್ಹೇಳುವ ಪುರಾಣ ಯಾತಕೆ ಬಾಹುದು ನಿರ್ವಾಣ ಚಿತ್ತಗಾಗುದು ಸಮಾಧಾನ ಹತ್ತಿಲಿ ನಿಜಗಾಣಾ 3 ಬಾಹುದೆ ನಿರ್ವಾಹ ಹೊಗುವರೆ ಹೊಕ್ಕರೆ ಸಹಾ ಹೋಗದು ತೃಷದಾಹ 4 ಸಾಧನ ಮಾಡಿಕೊ ಸಾಧ್ಯಸದ್ಗುರು ಕೃಪೆಯಲಿ ನಿಜ ಅಭೇದ್ಯ ಸಾಧಿಸೊ ಮಹಿಪತಿ ಸಧ್ಯ ಆಧ್ಯಾತ್ಮಸುವಿದ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಉಪಾಧಿ ಬೇಡಆತ್ಮನೆಂಬುದೇ ಕಾಂಬುದು ನಿಮ್ಮ ಮಹಾತ್ಮರಾದವರು ಪ ಕುಂಭಗಳು ಇರುತಲಿರೆ ಅಂಬರದ ಚಂದ್ರನುಕುಂಭಗಳೊಳಗೆ ಹಲವಾಗಿ ಬಿಂಬಿಸುವ ತೆರದಿಅಂಬುಜಾಸನ ಮೊದಲು ಜೀವ ಕಂಬದೊಳು ದೃಷ್ಟಿಯಿಟ್ಟು ಇಂಬಾಗಿ ಇರುವನೊಬ್ಬ ಚೇತನಾತ್ಮಕನು1 ಕನ್ನಡಿ ಪಳುಕಿನ ಗೃಹದಿ ಸನ್ನಿಧಿಯಲೊಂದು ದೀಪವಿಡೆಕನ್ನಡಿಯೊಳಗೆ ದೀಪ ಹಲವಾದ ತೆರದಿಉನ್ನತ ಜೀವರಾಶಿಯ ತನ್ನ ಛಾಯೆ ಹೊಳೆ ಹೊಳೆದುತನ್ನ ತಾನೇ ಇರುವನೊಬ್ಬ ಚೇತನಾತ್ಮಕನು2 ಒಬ್ಬನಾ ಕಾಂತಿಯಿಂ ಹಬ್ಬಿಕೊಂಡಿದೆ ಲೋಕಒಬ್ಬನೆಂದೇ ತಿಳಿದಡೆ ತಾನೊಬ್ಬನೇ ಇಹನೀಹರನುಒಬ್ಬನನೊಯ್ದು ನೀವು ಹಾಗಿಬ್ಬರ ಮಾಡಲಾಗದುಒಬ್ಬನೇ ಚಿದಾನಂದನು ಚೇತನಾತ್ಮಕನು3
--------------
ಚಿದಾನಂದ ಅವಧೂತರು
ನಿನಗಿದು ಹಿತವೇ | ಇದು ಹಿತವೇ ಪ ಕಂಸಾರಿ ಚರಣವ ನಂಬದೇ ಕ್ಷಣಿಕದ | ಸಂಸಾರದಲಿ ಬೆರಿಯಬೇಡಾ 1 ಕನ್ನಡಿಯೊಳಗಿನಾ ಹೊನ್ನಿನಾ ಗಂಟ ನೋಡಿ | ಕಣ್ಣಗೆಟ್ಟಿರುವರೇ ಮೂಢಾ 2 ಬಿಸಿಲಿನ ನೀರಿನಿಂದೆ ತೃಷೆಯಾರಿಸುವದುಂಟೆ | ಹಸಗೆಡದಿರು ವಿಷಯ ಕೂಡಾ | 3 ಕನಸಿನ ಸಂಪದವನೆನೆಸಿ ತಾ ಹಿಗ್ಗುವರೆ | ಮನವೇ ನೀ ಮಥನಿಸಿ ನೋಡು 4 ದಾವನು ಗುರು ಮಹಿಪತಿ ಪ್ರಭು ಭಜಿಸನು | ಅವಗಿಲ್ಲ ಸುಖಸುರವಾಟಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನುಡಿ ಜ್ಞಾನದ ಮಾತು ಒಡನೆ ನಂಬುದ್ಹೇತು ನಡಿ ಜ್ಞಾನದ ಮಾತು ಕಡೆಗಾಣಿಸಿತು ಧ್ರುವ ನುಡಿಯ ಒಡಲೊಳಗಿಟ್ಟು ನಡಿಯೊಳಗ ನುಡಿದೋರಿ ಕೊಡುವರಿಗ್ಯದೆ ಘನಮಹಿಮೆ ನೋಡಿ ನುಡಿದಂತೆ ನಡೆದರೆ ನಡೆನುಡಿ ಆಗುವದು ನುಡಿ ಅಡಿ ತೋರುವರಿಗೆಲ್ಲಿ ನಡೆನುಡಿ 1 ನಡೆಯೊಳಗ ನುಡಿಯದೆ ಪಡೆದುಕೊಂಬವ ಬಲ್ಲ ಒಡನೆ ಸದ್ಗುರು ದಯದೊಲವಿಲಿದ್ದು ನಡೆನುಡಿ ನಿಜವಾಗಲರಿಯದೆ ನಾಡೊಳಗೆ ಅಡಿಗಡಿಗೆ ಹೇಳ್ಯಾಡು ಮಾತೆ ಬರದು2 ನುಡಿವುದೆ ವೇದಾಂತ ನಡೆವುದೆ ಸಿದ್ಧಾಂತ ನಡೆನುಡಿಗೆ ಸಾಕ್ಷ ಶ್ರೀದೇವದತ್ತ ನುಡಿಗೆ ನಿಜ ನೆಲೆದೋರಿ ನಡಿಗೆ ನಿಲುಕಡೆ ಮಾಡಿ ಕೊಡುವನೊಬ್ಬನೆ ಮಹಿಪತಿ ಗುರು ಸಮರ್ಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬೀಸಿದ ಗುಂಡಗೆ ಬುಕ್ಕಿದ್ದೇ ಲಾಭ ಬೇಸರವಿಲ್ಲದೆ ಪ ವಾಸುಕಿಶಯನನ ಲೇಶವು ಭಜಿಸದೆ ಅ.ಪ ಹಗಲು ಇರುಳು ವಿಷಯಗಳಲಿ ಮುಳುಗಿ ಪೊಗಳದಿರಲು ಹರಿ ನಾಮವನು ಜಗದೊಳೆನಗೆ ಸಮರಾರೆಂದೆನುತಲಿ ಬೊಗಳಿ ನರಕಕ್ಕುರುಳುವೆನೆಂದರಿಯದೆ 1 ಮೋಸದಿಂದ ಧನರಾಶಿಗಳಿಸಿ ಅತಿ ಹೇಸಿಗೆ ಭೋಗಗಳಾಶಿಸುವ ಈಶನಂತೆ ಬಲು ಮೆರೆಯುತ ಮದದಲಿ ಶ್ರೀಶ ಸಹಾಯವ ಬಯಸದ ತನಕ 2 ಗಂಗಾ ಶುಚಿಜಲ ದೊರಕುತಿರೆ ಹಲ ವಂಗವ ನೀರನು ಬಯಸುವರೇ ಮಂಗಳ ಕರ್ಮಗಳಾಚರಿಸದೆ ನೀ ಮಂಗನಂದದಲಿ ಕುಣಿಯುವ ತನಕ 3 ಕಂಗಳಿಲ್ಲದ ಕುರುಡನಿಗೆ ಬೆಳ ದಿಂಗಳ ಸೌಖ್ಯವು ತೋರುವುದೆ ರಂಗನ ಮಹಿಮೆಯನರಿಯದ ಮೂಢನು ತಂಗಳು ಭೋಗವ ಬಯಸುವ ತನಕ 4 ಕನ್ನಡಿಯೊಳಗಿನ ಗಂಟಿನಂತಿರುವುದು ನಿನ್ನ ನಶ್ವರದ ಭೋಗಗಳು ಇನ್ನಾದರು ನಿನ್ನ ಮೂಢತನವ ಬಿಟ್ಟು ಸಂತತ ಭಜಿಸೋ ಪ್ರಸನ್ನ ಶ್ರೀಹರಿಯ 5
--------------
ವಿದ್ಯಾಪ್ರಸನ್ನತೀರ್ಥರು
ಭವ ಮುಖ್ಯ ಸುರಗಣ ಮುನಿನಿಕರ ಸಿದ್ಧ ಪರಿವಾರವು 1 ಸರಿತು ಪ್ರವಾಹದಂತೆ ವಾಗ್ವೈಖರಿಯಿಂದ ನಿರುತ ತೃಪ್ತಿಪಡಿಸಲಾರರು ಇನ್ನು 2 ಉರು ಉಗ್ರಜಾತಿ ಅಸುರ ಕುಲದಿ ಪುಟ್ಟಿದ ನಾನು ನೆರೆ ತುತಿಸಿ ತೃಪ್ತಿಪಡಿಸಲಾಪೆನೆ ನಿನ್ನ 3 ಆದೊಡೆ ಕುಲ ರೂಪ ವಯಸ್ಸು ವಿದ್ಯೆಗೆ ನೀನು ಮೋದಪಡುವನಲ್ಲ ಭಕ್ತಿಯೊಂದಕೆ ನಲಿವೆ 4 ಕರಿರಾಜನೇ ಸಾಕ್ಷಿ ಕರುಣಾಮಯನೇ ನಿನ ಗಿರುವುದೇ ವೈಷಮ್ಯ ? ಭಕ್ತಗೆ ವಶ ನೀನು 5 ಅರವಿಂದನಾಭ ನಿನ್ನ ಚರಣಾರವಿಂದವನು ನಿರುತ ಭಜಿಸುವ ಉತ್ತಮನೆನಿಸುವ 6 ಸರುವ ಸ್ವತಂತ್ರ ಪೂರ್ಣಕಾಮ ನಿನ್ನನು ನಾವು ಹಿರಿದಾಗಿ ಆರಾಧಿಸಿ ತೃಪ್ತಿಪಡಿಸುವುದೇನೊ 7 ನಾವು ಮಾಡುವ ಕರ್ಮಸಾಧನದಿಂದ ನಿನಗೆ ಯಾವ ಫಲವೂ ಇಲ್ಲ ! ಫಲವೆಲ್ಲ ನಮಗಯ್ಯಾ 8 ಬಿಂಬವನಲಂಕರಿಸೆ ಕನ್ನಡಿಯೊಳಗೆ ಪ್ರತಿ ಬಿಂಬಕೆ ಅಲಂಕಾರ ಕಾಣುವ ಪರಿಯಲಿ 9 ತರಳನ ಮೊರೆಯನು ಲಾಲಿಸಿ ಪಾಲಿಸೊ 10 ನಮ್ಮ ಸಾಧನೆಗಾಗಿ ನಿನ್ನ ಆರಾಧಿಪೆವು ಬೊಮ್ಮನಯ್ಯನೆ ನಿನ್ನ ಆನುಗ್ರಹದಿಂದಲಿ 11 ಬ್ರಹ್ಮಾದಿ ಸುರರೆಲ್ಲ ನಿನ್ನ ಸೇವಕರಯ್ಯಾ ಹಮ್ಮು ಮತ್ಯಾತಕಯ್ಯಾ ನಮ್ಮಂಥವರಿಗೆಲ್ಲ 12 ನಿನ್ನ ಕೋಪಕೆ ಅಂಜಿ ನಡುಗದವರುಂಟೆ ಮನ್ನಿಸಿ ಕೋಪವ ಉಪಶಮ ಮಾಡೋ ಸ್ವಾಮಿ 13 ನಿನ್ನ ಈ ಉಗ್ರರೂಪ ಧ್ಯಾನವು ಜನರಿಗೆ ಘನ ಭಯವ ಕಳೆಯೆ ಸಾಧನವಾಗಲಿ 14 ದಿಗಿಲು ಪುಟ್ಟಿಸುವಂಥ ಈ ನಿನ್ನ ಮುಖ ಜಿಹ್ವೆ ಭೃಕುಟಿ ಕರಾಳ ದಂಷ್ಟ್ರ 15 ಕೊರಳಲ್ಲಿ ಧರಿಸಿಹ ಕರುಳ ಮಾಲಿಕೆ ರಕ್ತ ಬೆರದ ಕೇಸರ ಮತ್ತೆ ನಿಗುರಿದ ಕರ್ಣಗಳು 16 ಲೋಕ ಭಯಂಕರವಾಗಿವೆ ಆಂದೊಡೆ ಶ್ರೀಕರ ನಿನ್ನ ಕೃಪೆಯಲಿ ನಾನವಕೆ 17 ಅಂಜುವನಲ್ಲ ಕೇಳು ಕಂಜನಾಭನೆಯಿನ್ನು ಅಂಜುವೆನೊಂದಕೆ ಸಂಸಾರ ಚಕ್ರಕೆ 18 ತೊಳಲಿಸÀುವುದು ಜನ ದುಃಖದಿ ಸಂಸಾರ ಬಲು ಪರಿಯಲಿ ಅದು ದುಃಖದಿ ಸಾಗರ 19 ಇಷ್ಟವಾದದ್ದು ಕೊಡದೆ ಇಷ್ಟವಿಲ್ಲದ್ದುಣಿಸಿ ಭವ 20 ಸಂಸಾರ ಸಾಗರ ದಾಟಿಸೋ ಮಹಾಮಹಿಮ ಸಂಶಯವಿಲ್ಲದೆ ಸೇರಿಸೋ ನಿನ್ನ ಬಳಿ 21 ಕರುಣಾಸಾಗರ ನಮ್ಮ ಕರಿಗಿರೀಶನೆ ಸ್ವಾಮಿ ತರಳನ ಮೊರೆಯನು ಲಾಲಿಸಿ ಪಾಲಿಸೊ 22 ( ಪ್ರಹ್ಲಾದ ನರಹರಿಯನ್ನು ಸ್ತುತಿಸಿದ್ದು )
--------------
ವರಾವಾಣಿರಾಮರಾಯದಾಸರು
ನಾ ನಿನ್ನ ಧ್ಯಾನದೊಳಿರಲು - ಇಂಥಹೀನ ಮಾನವರಿಂದೇನಾಹೋದು ಹರಿಯೆ ಪ.ಮಚ್ಚರಿಸಿದರೇನ ಮಾಡಲಾಪರೊ ಎನ್ನಅಚ್ಯುತ ನಿನ್ನದೊಂದು ದಯವಿರಲು ||ವಾಚ್ಛಲ್ಯ ಬಿಡದಿರು ನಿನ್ನ ನಂಬಿದ ಮೇಲೆಕಿಚ್ಚಿಗೆ ಗೊರಲೆ ಮುತ್ತುವುದೆ ಕೇಳೆಲೊ ರಂಗ 1ದಾಳಿಯಲಿ ತೇಜಿ ವೈಹಾಳಿಯಲಿ ನಡೆಯಲುಧೂಳು ರವಿಗೆ ತಾನು ಮುಸುಕುವುದೇ ||ತಾಳಿದವರಿಗೆ ವಿರುದ್ಧ ಲೋಕದೊಳುಂಟೆ ?ಗಾಳಿಗೆ ಗಿರಿ ನಡುಗುವುದೆ ಕೇಳೆಲೊ ರಂಗ 2ಕನ್ನಡಿಯೊಳಗಿನ ಗಂಟ ಕಂಡು ಕಳ್ಳಕನ್ನವಿಕ್ಕಲು ವಶವಾಗುವುದೇ ?ನಿನ್ನ ಧ್ಯಾನವ ಮಾಡೆ ಪುರಂದರವಿಠಲನೆಚಿನ್ನಕ್ಕೆ ಪುಟವಿಕ್ಕಿದಂತೆ ಕೇಳೆಲೊ ರಂಗ 3
--------------
ಪುರಂದರದಾಸರು