ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಭಕುತಿಯಲಿ ಮನವಸ್ಥಿರವ ಗೊಳ್ಳಲಿಬೇಕು ಅರತು ಸದ್ಭಾವದಲಿ ದೃಢಗೊಳ್ಳಬೇಕು ಧ್ರುವ ನಿಶ್ಚಯವಿಡಬೇಕು ದುಶ್ಚಲವ ಬಿಡಬೇಕು ನಿಶ್ಚಿಂತದಲಿ ನಿಜಸುಖ ಪಡೆಯಬೇಕು 1 ನಂಬಿನಡಿಯಬೇಕು ಡಂಭಕವ ಬಿಡಬೇಕು ಹಂಬಲಿಸಿ ಅಂಬುಜಾಕ್ಷನ ನೋಡಬೇಕು 2 ವಿಶ್ವಾಸವಿಡಬೇಕು ವಿಷಗುಣವ ಬಿಡಬೇಕು ವಿಶ್ವವ್ಯಾಪಕನ ವಿಶ್ವದಿ ನೋಡಬೇಕು 3 ರತಿ ಪ್ರೇಮ ಬಿಡಬೇಕು ಅತಿ ಹರುಷ ಪಡಬೇಕು ಸ್ತುತಿಸ್ತವನವನು ಪಾಡಿಗತಿ ಪಡೆಯಬೇಕು 4 ಆರು ಜರಿಯಬೇಕು ಮೂರು ಹರಿಯಬೇಕು ಅರಿತು ಗುರುಪಾದ ಮಹಿಪತಿಬೆರೆಯಬೇಕು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನುಡಿದಂತೆ ನಡಿಯಬೇಕು ಪಿಡಿದು ಸುಪಥ ಧ್ರುವ ಸಾಧಿಸಿ ತಿಳಿಯದೆ ತನ್ನೊಳು ಖೂನ ಬೋಧಿಸಿ ಹೇಳುದು ಇನ್ನೊಬ್ಬರಿಗೇನ ಅದಿತತ್ವದ ಗತಿಯ ನಿಜಸ್ಥಾನ ಭೇದಿಸುವುದು ಸದ್ಗುರು ಕೃಪೆ ಙÁ್ಞನ 1 ನಡೆನುಡಿ ಒಂದಾದರೆ ಬಲು ಮೇಲು ದೃಢಭಕ್ತಿಗೆ ಒಂದಿದೆ ತಾ ಕೀಲು ಪಡೆವದು ಮನಮಾಡಿ ಮೀಸಲು ಬಿಡದೆ ಮಾಡುವ ಗುರು ದಯ ಕೃಪಾಳು 2 ಹೇಳಿಕಿಗಿದೆ ಬಿದ್ದದೆ ಬಲುಜನ ತಿಳುಹಿಸಿಕೊಡಲಿಕ್ಕಿಲ್ಲದೆ ಙÁ್ಞನ ತಿಳಿವು ತಿಳಿದರೆ ತನ್ನೊಳು ನಿಧಾನ ಹೊಳವ ಮಹಿಪತಿ ಗುರು ನಿಜ ಚಿದ್ಘನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಕ್ತಿಗೆ ಮೂರು ಗುಣಗಳು ಬೇಕು ಯುಕ್ತಿವಂತರು ಕೇಳಿ ಮುಕ್ತಿಶೀಲವು ತಿಳಿದು ನಿಜವಿರಕ್ತತನದಲಿ ಬಾಳಿ ಧ್ರುವ ಪ್ರೇಮ ಪ್ರೀತಿ ರತಿ ನೇಮದಲಿ ಶ್ರೀಸ್ವಾಮಿ ಚರಣದಲಿಡಬೇಕು ಸೌಮ್ಯ ಸಮಾಧಾನದಲಿ ತಾನಮೃತವನು ಹಿಡಿಯಬೇಕು ನಿರ್ಮಳದಲಿ ನಡಿಬೇಕು ಪಡೆದು ಸಮದೃಷ್ಟಿಗುಡಬೇಕು 1 ನಿತ್ಯ ವಿವೇಕವು ತಿಳಿದು ಪಥ್ಯದಲಿ ನಡಿಯಬೇಕು ಚಿತ್ತವೃತ್ತಿ ಸವೃತ್ತಿಯ ಮಾಡಿ ಸತ್ಯದಲಿ ನುಡಿಯಬೆಕು ಉತ್ತಮೋತ್ತಮ ವಸ್ತುದ ನಿಜಸುಖ ಹೃತ್ಕಮಲದಲಿಡಬೇಕು ಭಕ್ತಿಗೆ ಭಾವನೆ ಬಲಗೊಂಡು ವೈರಾಗ್ಯದ ಸುಖ ತೊಡಬೇಕು 2 ಸೋಹ್ಯ ಸೋನ್ನಿಯ ಸೂತ್ರವ ತಿಳಿದು ಸ್ಥಾಯಿಕನಾಗಿರಬೇಕು ಧ್ಯೇಯಧ್ಯಾತಧ್ಯಾನವ ತಿಳಿದು ಮಾಯದ ಮೊನೆ ಮುರಿಬೇಕು ನ್ಯಾಯ ನೀತಿಯ ನೆಲೆನಿಭವನು ಉಪಾಯದಲಿ ಅರಿಯಬೇಕು ಪಾಯಕನಾಗನುದಿನ ಮಹಿಪತಿ ಗುರುಪಾದದಿ ಸ್ಥಿರವಿರಬೇಕು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮೋದದಲಿರಬೇಕಮ್ಮ | ಸುಮ್ಮನೆ ನೀನು ಮೋದದಲಿರಬೇಕಮ್ಮ ಪ. ಮೋದ ಶ್ರೀ ಗುರುಗಳ ಚರಣ ಕಮಲವನ್ನು ಮೋದದಿಂದಾಶ್ರಯಿಸಿ ಸುಖದಲಿರಲಿಬೇಕು ಲೋಕದ ಜನಗಳ ನುಡಿಗಳ ಲೆಕ್ಕಿಸದೆ ಲೋಕವಂದ್ಯನ ಚರಣ ಕಮಲವ ಸ್ಮರಿಸುತ ಅ.ಪ. ಪರಮಾತ್ಮನ ಕೃಪೆಗೆ ಕಾರಣವಿದು ಗುರುಕರುಣದ ಬಲವು ಅರಿಯದ ಮನುಜರ ಬಿರುನುಡಿಗೆ ಮನ ಕೊರಗಿಸದಂದದಿ ಹರುಷಪಡಲಿಬೇಕು 1 ಎಚ್ಚತ್ತು ನಡಿಯಬೇಕು | ಶ್ರೀ ಗುರುಸೇವೆ ಇಚ್ಛೆಯಿಂ ಮಾಡಬೇಕು ತುಚ್ಛ ಮಾತುಗಳಿಗೆ ಮನಕೊಡದೆ ಹರಿ ಮೆಚ್ಚುವಂದದಿ ಗುರು ಇಚ್ಛೆಯನರಿತು ನಡೆದು 2 ವಂದನೆ ನಿಂದ್ಯಗಳ | ಮೋಕ್ಷಾರ್ಥಿಯು ಒಂದಾಗಿ ಭಾವಿಸುತ ಮಂದರೋದ್ಧರನ ಮಾಯಕೆ ಮನದಿ ಮೋದಿಸುತ ಮಂದರಂದದಿ ಮನುಜರಿಗೆ ತೋರುತಲಿದ್ದು 3 ಮಾನವ ಜನ್ಮ ಸಾಧನ ಜನ್ಮವಮ್ಮ ಸಾಧಾರಣವಲ್ಲ ಸಾಧು ಸಜ್ಜನಸಂಗ ಸಾಧಿಸಿ ದುಷ್ಕರ್ಮ ಛೇದಿಸಬೇಕಮ್ಮ 4 ಚಿಂತೆಯನಳಿಯಬೇಕು | ಶ್ರೀ ಗುರು ಕರುಣ ಅಂತರ ತಿಳಿಯಬೇಕು ಸಂತತ ಗೋಪಾಲಕೃಷ್ಣವಿಠ್ಠಲನ ಅಂತರಂಗದಿ ಭಜಿಸಿ ಮುಕ್ತಿ ಸಾಧಿಸಬೇಕು 5
--------------
ಅಂಬಾಬಾಯಿ