ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬು ನಂಬೆಲೆ ಮನ ಗಿರಿಧರನ ನಿನ ಗಿಂಬುಗೊಡುವ ಭಕ್ತ ಸಂಜೀವನ ಪ ಕತ್ತೆಯಂತೆ ಕೂಗಿ ಕೆಡಬೇಡ ಪರ ಮಾರ್ಥತತ್ತ್ವದ ಹಾದಿ ತಿಳಿ ಮೂಢ ಸತ್ಯರ ಪಾದದಿ ಮನನೀಡೋ ನಿತ್ಯ ಉತ್ತಮರೊಳಗಾಡಿ ನಿಜ ನೋಡೋ 1 ಕೋತಿಯಂತೆ ಕುಣಿಯಲುಬೇಡೋ ಮಹ ನೀತಿವಚನ ಮೀರಿ ನಡಿಬೇಡೋ ಮಾತುಮಾತಿನ ಸಂಶಯಬೇಡೋ ಮುಂದೆ ಪಾತಕದೊಳು ಬಿದ್ದು ಕೆಡಬೇಡೋ 2 ಸಾರಸಂಸಾರ ಮಿಥ್ಯವೆಂದು ತಿಳಕೋ ನೀನು ಧೀರ ಶ್ರೀರಾಮನ ಅಡಿಗ್ಹೊಂದಿಕೋ ಗಂ ಭೀರ ಮೋಕ್ಷಪದವನೆ ಪಡಕೋ 3
--------------
ರಾಮದಾಸರು