ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದೆ ಸುಪಥವೆ ಲೇಸು ಸದ್ಗುರು ಭಕುತಿಗೆ ಧ್ರುವ ಪಿಡಿದರೆ ದೃಢ ಗುರುಭಕುತಿ ಸಾಕು ಷಡದರುಷಣ ಗೂಢವ್ಯಾತಕೆ ಬೇಕು ನಡಿನುಡಿಯಲಿ ನಿಜ ಭೇದಿಸಬೇಕು ಪಡಕೊಂಡರೆ ಬಾಹುದು ಘನಥೋಕÁ 1 ಒಂದರಿಯದೆ ನಿಜದೋರುದು ಖೂನ ಸಂದಿಸಿ ಬೆರೆವುದು ಮನ ಚಿದ್ಛನ ತಂದೆ ಸದ್ಗುರು ದಯದನುಸಂಧಾನ ಎಂದೆಂದಿಗೆ ಅದ ತಾ ನಿಧಾನ 2 ಒಂದಾಗುದೆ ನಿಜಗುರು ದಯಕರುಣ ವಂದಿಸಿ ನೋಡಬೇಕಿದೆ ಘನಸ್ಫುರಣ ಹೊಂದಿ ಬದುಕಿರೊ ಮಹಿಪತಿಗುರುಚರಣ ಚಂದವಿದೆ ಇಹಪರ ಭೂಷಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧು ಸ್ವರೂಪ ಸಾದು ಸ್ವರೂಪ ಸಾಧಿಸಿದವ ಕುಲದೀಪ ಧ್ರುವ ಸ್ವರೂಪ ನಿಜಗೌಪ್ಯ ಸರ್ವರಿಗಿದು ಅಪ್ರಾಪ್ಯ 1 ನಡಿನುಡಿ ಬಲು ಗೂಢ ಪಡೆದವ ತಾ ಘನ ಪ್ರೌಢ 2 ದುರ್ಲಭ ದರುಶನ ಸುಲಭಲ್ಯಾಗದು ಖೂನ 3 ಸ್ವಹಿತ ಸಾಧು ದಯ ಮಹಿಪತಿಗಾಯಿತು ಉದಯ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಯಾಸದಿಂದ ಸಾಧಿಸಬೇಕು ಸತ್ಸಂಗ ಮಾಯಿಕಬುದ್ಧಿ ಬಿಟ್ಟು ನೋಡಿ ಅಂತರಂಗ ಧ್ರುವ ಆಯಿತವಾಗಿ ತೋರುತಾನೆ ಶ್ರೀರಂಗ ಸಾಯದಲ್ಯಾಗುತದೆ ನೋಡಿ ಭವಭಂಗ 1 ಹಿಡಿದರೆ ಹಿಡಿಯಬೇಕೊಂದೆ ಸಾಧು ಸಹವಾಸ ಪಡೆದರೆ ಪಡೆಯಬೇಕೊಂದೆ ತಾ ನಿಜಧ್ಯಾಸ ನಡಿನುಡಿ ಒಂದೆ ಆಗುವುದೆ ಅಪ್ರಯಾಸ ತಡಿಯದೆ ಮಾಡಬೇಕೊಂದೆ ನಿಜಾಭ್ಯಾಸ 2 ಅನೇಕ ಪುಣ್ಯ ಒದಗಿತು ಸತ್ಸಂಗದಾಗ ದಿನಕರಕೋಟಿ ಹೊಳೆವುದು ಮನದೊಳಗೆ ಬ್ಯಾಗ ತನುಮನವಿಟ್ಟು ಕೇಳಿ ಗುರುಪಾದಕೀಗ ಘನಸುಖದಾಯಕ ಮಹಿಪತಿಯ ಸದ್ಗುರುವಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ನೀನೆ ಸಾರ್ವಭೌಮ ಶ್ರೀ ರಘುರಾಮ ಸೋಮಶೇಖರ ಪ್ರಿಯ ದಿವ್ಯ ನಿನ್ನ ನಾಮ ಧ್ರುವ ಕಾಕುಸ್ಥತಿಲಕ ಕಾರುಣ್ಯನಿಧಿ ಕೃಪಾಲ ಪ್ರಕಟ ಪ್ರಖ್ಯಾತಲಿಹ ಸತ್ಯಶೀಲ ನಾಕಜರ ಸೆರೆಬಿಡಿಸ್ಯಾದೆ ಸಾನುಕೂಲ ಸಕಲ ಸುಖದೀವ ಮೂಲೋಕಪಾಲ 1 ಖರದೂಷಣಾರಿ ಶರಣಾಗತರ ಸಹಕಾರಿ ಸರ್ವರಾಧಾರಿ ಕೋದಂಡ ಧಾರಿ ದುರುಳ ದುಷ್ಟ ಜನಸಂಹಾರಿ ವರಪೂರ್ಣವೀವ ಪರಮ ಉದಾರಿ 2 ಅನುದಿನದಲಿ ನಿನ್ನ ನಡಿನುಡಿಗಳೊಂದವೆ ನೇಮ ಅನಂತಗುಣ ಪೂರ್ಣಾನಂದ ಮಹಮಹಿಮ ದೀನ ಮಹಿಪತಿ ಅತ್ಮಾರಾಮ ಪೂರಿತ ಕಾಮ ಭಾನುಕೋಟಿ ತೇಜ ಘನದಯ ನಿಸ್ಸೀಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು