ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನ ಒಲಿದೆನ್ನನು | ಪಾಲಿಸು ಜನನಿ ಪ. ಘನ ವಿದ್ಯಾದಾಯಿನಿ | ಜಲಜಾಂಬಕಿ ನೀ ಅ.ಪ ವಿದ್ಯಾವಿದಾತೆ ಬುದ್ಧಿಪ್ರದಾತೆ || ಶ್ರದ್ಧೆಯ ಬೇಡುವೆ | ಸದ್ಗುಣಭರಿತೆ 1 ಗಾನವಿಲೋಲೆ | ವಿನಮಿತಪಾಲೆ || ಜ್ಞಾನಪ್ರದಾಯಿನಿ | ಘನಗುಣಶೀಲೆ 2 ಆಡುವ ನುಡಿ ಕೈ | ಗೂಡುವ ತೆರದಲಿ || ಮಾಡೌ ಬೇಡುವೆ | ನಡಿಗಳಿಗೆರಗಿ 3 ಮನ್ಮನದಿಷ್ಟವ | ನಿತ್ತೆನ್ನ ಪೊರೆ ನೀ || ಬೊಮ್ಮನ ರಾಣಿ | ನಿತ್ಯಕಲ್ಯಾಣಿ4
--------------
ವೆಂಕಟ್‍ರಾವ್
ರುದ್ರ ಭವ ಶಂಭೋ ಪ ಬೇಡಿಕೊಂಬೆ ನಿನ್ನಡಿಗಳಿಗೆರಗಿ ನಾ ಕಡಲ ಕುವರಿಯ ಒಡೆಯನಲಿ ಮನ ಅ.ಪ ಮನಕಾರಣವಲ್ಲವೊ ಅನಲಾಕ್ಷನೇ ಹೀನ ಸುಕರ್ಮಕೆ ಪ್ರೇರಣೆ ಹೊರತು 1 ಮೃತ್ಯುಂಜಯ ಮುಪ್ಪುರಹರ ದೇವನೆ ಅತ್ಯಪರಾಧಗಳೆತ್ತೆಣಿಸದಿರೈ 2 ಶ್ರೀ ನರಹರಿಯಾಸುತನ ಕುವರನೇ ಅನುದಿನದಲಿ ಮನ ದೋಷಗಳಳಿಯ್ಯೆ 3
--------------
ಪ್ರದ್ಯುಮ್ನತೀರ್ಥರು