ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಸಿಂಹನೆ ಧೀರ | ನಂಬಿದೆನೊ ಪೊರೆಯೊ ಶ್ರೀ ರಮಾಪತಿ ವೀರ | ಕರಿಗಿರಿ ವಿಹಾರ ಪ. ಸಾರಿದೆನೊ ನಿನ್ನ ಪದವ ಅನುದಿನ ಸೇರಿಸೆನ್ನನು ಭಕ್ತಕೂಟದಿ ಗಾರು ಮಾಡುವುದುಚಿತವೇ ಹರಿ ಭವ ಸಮುದ್ರದಿ ಅ.ಪ. ತಾಪ | ನಾನಾರಿಗುಸುರಲೊ ಒಡಲ ದುಃಖವ ಭೂಪ | ನೀನಲ್ಲದಿಲ್ಲವೊ ಭವ ಶ್ರೀಪ | ತೋರದಿರು ಕೋಪ ಘುಡು ಘುಡುಸಿ ನೀ ಎನ್ನ ಬೆದರಿಸೆ ತಡೆವೆನೇ ನಿನ್ನ ಕೋಪದಗ್ನಿಗೆ ಬಿಂಕ ಎನ್ನೊಳು ತಡೆಯೊ ಎನ್ನ ದುರುಳತನಗಳ ಕಡುಕರುಣಿ ನೀನಲ್ಲವೆ ಹರಿ ಒಡಲೊಳಗೆ ಪ್ರೇರಕನು ನೀನೆ ನಡಸಿದಂದದಿ ನಡೆವೆನಲ್ಲದೆ ಒಡೆಯ ಎನ್ನ ಸ್ವತಂತ್ರವೇನೊ? 1 ದುರುಳತನದಲಿ ದೈತ್ಯ | ಭೂವಲಯವೆಲ್ಲವ ಉರವಣಿಸಿ ದುಷ್ಕುತ್ಯ | ಎಸಗುತಿರೆ ದುಃಖದಿ ಸುರರು ಮೊರೆಯಿಡೆ ಸತ್ಯ | ದೃಢಮನದಿ ಭೃತ್ಯ ಕರಕರೆ ಪಿತ ಬಡಿಸುತಿರಲು ದೊರೆಯೆ ನೀ ಪೊರೆ ಎಂದು ಮೊರೆಯಿಡೆ ಸರ್ವವ್ಯಾಪಕನೆಂದು ತೋರಲು ತ್ವರಿತದಲಿ ಕಂಭದಲಿ ಬಂದು ಸರಸಿಜವು ಕಂಗೆಡುವೊ ಕಾಲದಿ ಧರಿಸಿ ತೊಡೆಯ ಮೇಲಸುರ ಕಾಯವ ಕರುಳ ಬಗೆದು ಮಾಲೆ ಧರಿಸಿ ಪೊರೆದೆಯೊ ಸ್ತುತಿ ಕೇಳಿ ಬಾಲನ 2 ಅಜಭವಾದಿಗಳೆಲ್ಲ | ಸ್ತುತಿಸಿದರೆ ಮಣಿಯದ ಭುಜಗಶಾಯಿ ಶ್ರೀ ನಲ್ಲ | ನಾ ನಿನ್ನ ಸ್ತುತಿಸಿ ಭಜಿಸಲಾಪೆನೆ ಕ್ಷುಲ್ಲ | ಮಾನವನ ಸೊಲ್ಲ ನಿಜಮನವ ನೀ ತಿಳಿದು ಸಲಹೊ ಕಮಲ ತೋರಿ ಕುಜನನಲ್ಲವೊ ಹಿರಿಯರೆನಗೆ ಪಥ ತೋರುತಿಹರೊ ರಜ ತಮವ ದೂರಟ್ಟಿ ಶುದ್ಧದಿ ಭಜಿಸುವಂದದಿ ಕೃಪೆಯ ಮಾಡಿ ಸುಜನರೆನ್ನನು ಪಾಲಿಸುತ್ತಿರೆ ನಿಜದಿ ಗೋಪಾಲಕೃಷ್ಣವಿಠ್ಠಲ3
--------------
ಅಂಬಾಬಾಯಿ
ನೊಂದೆ ನಾನಾವಿಧದಲೀ ಬಂದ ಜನ್ಮಾವಧಿಯಲಿ ತಂದೆ ತಾಯಿ ಬಂಧು ಬಳಗ ಎಲ್ಲರೂ ನೀನೇ ಪ ಮಂದರಧರನೇ ಬೇಲೂರ ಚೆನ್ನಿಗರಾಯ ಹಿಂದಿಟ್ಟುಕೊ ಮುರಹರ ಸ್ವಾಮೀ ಅ.ಪ ಕುಕ್ಷಿಯೊಳೀರೇಳು ಲೋಕವನು ತಾಳ್ದನೇ ಪಕ್ಷಿವಾಹನಮೂರ್ತಿ ಮತ್ಸ್ಯಾವತಾರನೇ ಅಕ್ಷಯಾಗೆಂದು ದ್ರೌಪದಿಯ ಅಭಿಮಾನವನು ರಕ್ಷಿಸಿದ ಕೃಷ್ಣ ನೀನೆ ಸ್ವಾಮಿ 1 ಚಿಕ್ಕಂದು ಮೊದಲು ನಿನ್ನನು ನೆನೆವ ಬಾಲಕನಾ ಕಕ್ಕಸದ ಬಾಧೆಯಲಿ ಮೂದಲಿಪ ಹಿರಣ್ಯಕನಾ ಸೊಕ್ಕುಗಳ ಮುರಿದವನ ಕರುಳ ಮಾಲೆಯನಿಟ್ಟ ¨Àಕ್ತವತ್ಸಲನು ನೀನೇ ಸ್ವಾಮಿ 2 ಕರಿಕಂಠ ಹರನು ದಾನವನ ತಪಸಿಗೆ ಮೆಚ್ಚಿ ಅರಿತು ಅರಿಯದ ತೆರದಿ ಉರಿಹಸ್ತವನು ಕೊಡಲು ತರುಣಿ ರೂಪಿಲಿ ಪರಿಹರಿಸಿ ಭಸ್ಮಾಸುರನಾ [ಉರಿಸಿ]ಗೆಲಿದ ದೇವರದೇವಾ ಸ್ವಾಮಿ3 ಅಂದು ಮರೆಹೊಕ್ಕ ವಿಭೀಷಣಗೆ ರಾಜ್ಯವನು ಸಂದೇಹವಿಲ್ಲದಂದದಲಿ ಪಾಲಿಸಿ ನರನಾ ಮುಂದೆ ಸಾರಥಿಯಾಗಿ ರಥವ ನಡಸಿದ ಗೋ ವಿಂದ ಸಲಹಯ್ಯ ಯೆನ್ನನೂ [ಸ್ವಾಮಿ] 4 ದೇಶದೇಶದೊಳತ್ಯಧಿಕ ಕಾಶಿಗಿಂ ಮಿಗಿಲು ಭೂಸ್ವರ್ಗವೆನಿಪ ವೇಲಾಪುರವಾಸಾ ಕೇಶವ ಶ್ರೀವೈಕುಂಠ ಚೆನ್ನಿಗರಾಯಾ ಶೇಷಶಯನನೇ ಕರುಣಿಸೈ ಸ್ವಾಮೀ 5
--------------
ಬೇಲೂರು ವೈಕುಂಠದಾಸರು
ಬಂದದೆ ಎನಗೆ ಬರಿದೆ ದೂರು ಬಂದೊಂದು ಅವಗುಣದವನೆಂಬೊ ಮಾತು ಪ ಕಾಮಕ್ರೋಧಂಗಳು ಹೆಚ್ಚಿಸಿ ಮನದೊಳು ತಾಮಸ ಬುದ್ಧಿ ವಿಶೇಷವಾಗಿ ಕಾಮುಕವಾಗಿ ನಡವಳಿ ನಡಸಿದ ಈ ಮನದ ಅಧಿಕಾರಿ ಶ್ರೀಕೃಷ್ಣನೊ ನಾನೊ 1 ಅನ್ಯಾಯ ಅನ್ಯಾಯ ಅಸಡ್ಡಾಳ ಅಪದ್ಧ ನನ್ನ ನಿನ್ನದು ಎಂಬೊ ಬಡದಾಟವು ತನ್ನ ಸ್ಮರಣಿ ತಪ್ಪಿ ವಿಷಯಕ್ಕೆ ಎರಗಿಸಿ ಮುನ್ನ ಮನದ ದಾತಾ ಶ್ರೀಕೃಷ್ಣನೊ ನಾನೊ 2 ಮನೆ ಮನೆಗಳ ಪೊಕ್ಕು ಮಕ್ಕಳಾಟಿಕೆಯಿಂದ ವನುರುತರ ರೂಪಿಗೆ ಸೋತು ಆತು ಕನಿಕರಿಸಿ ಕ್ರಮಗೆಟ್ಟು ತಿರುಗಿಸುವ ತನವು ಮಾಡಿದಾತಾ ಕೃಷ್ಣನೊ ನಾನೊ 3 ನೀತಿ ನಿರ್ಣಯ ಮರೆದು ಪಾತಕದೊಳು ಬಿದ್ದು ಪ್ರೀತಿಯಲಿ ಅತಿಥಿಗಳ ವಂದಿಸದೆ ಯಾತಕ್ಕೆ ಬಾರದಾ ಚರಿತೆ ನಡೆವಂಥ ಚೇತನ ಕಲ್ಪಿಸಿದ ಕೃಷ್ಣನೊ ನಾನೊ 4 ಆವಾವ ದುಷ್ಕರ್ಮಗಳ ಮಾಡಿ ಉತ್ತಮ ದೇವ ಬ್ರಾಹ್ಮಣರ ಪೂಜಿಸಲಿಲ್ಲವು ಶ್ರೀ ವಿಜಯವಿಠ್ಠಲ ವೆಂಕಟಗಲ್ಲದ ಜೀವ ಪುಟ್ಟಿಸಿದಾತ ಕೃಷ್ಣನೋ ನಾನೊ 5
--------------
ವಿಜಯದಾಸ
ಬೇರೊಬ್ಬರನು ಕಾಣೆನೋ ಪ ಗರ್ಭದೊತ್ತಿನಲಿ ಇರಿಸಿದವರಾರೋ ಕೈಕಾಲಸುತ್ತಿನರದಲಿ ಬಿಗಿದವರಾರೋ ನೇತ್ರವನು ರಚಿಸಿದವರಾರೋ ತುಂಬಿ ತುತ್ತುಗಳ ನಡಸಿದವರಾರೋ 1 ನೇಮದಲಿ ಕಲ್ಪಿಸಿದವರಾರೋ ಪಲ್ಲವೋರಣದಿ ಪವಣಿಸಿದವರಾರೋ ನಿರ್ಮಿಸಿ ನವದ್ವಾರವನು ತಿದ್ದಿದವರಾರೋ ಪಾಪಗಳ ಕಾವಲನೆ ಮಾಡಿದವರಾರೋ 2 ನೀಲ ಕುರುಳಿಸಿದವರಾರೋ ಪಲ್ಲವಿಸಿ ಪಸರಿಸಿದರಾರೋ ಅಲ್ಲಿ ತೊಟ್ಟಿಲೊಳಿಕ್ಕಿದವರಾರೋ ಮೈಮರೆತಿಹರು ಮೂಢಜನರು 3 ಪ್ರತಿಬಿಂಬಿಸುತ ಪರಿಪೂರ್ಣನೆನಿಸಲಾರೋ ನೆಂಬುದಲ್ಲದೆ ಮತ್ತದಾರೋ ಅಂಬರೀಶನೆ ಸಾಕ್ಷಿಯಲ್ಲದಾರೋ 4 ಪತ್ತು ಬಿಡಸದೇನೋ ನೀ ಪರೀಕ್ಷಿಸಿದ ಮಾತ್ರದಿಂದೆನ್ನ ಪಾಪಗಳು ಪೋಗವೇನೋ ಶ್ರೀ ಲಕ್ಷ್ಮೀ ರಮಣಗರಿದೇನೋ 5
--------------
ಕವಿ ಪರಮದೇವದಾಸರು
ಹರಿಮಂದಿರಹರಿಮಂದಿರ ಈ ಸ್ಥಳವುಹರುಷದಿ ಚಿಂತಿಪರಿಗೆ ಪಹರಿಹರ ಬ್ರಹ್ಮಾದಿಗಳು ಪೊಗಳುತಿರೆಸುರಮುನಿ ನಾರದ ಋಷಿಗಳು ಸ್ತುತಿಸಲುಸುರರುಪುಷ್ಪ ವೃಷ್ಟಿಯ ಕರೆಯಲು ಅ-ಪÀ್ಸರಸ್ತ್ರೀಯರುನರ್ತನ ಮಾಡುವ ಸ್ಥಳಅ.ಪಸಿರಿನಾರಾಯಣ ಶೇಷಶಯನದಲಿಶಯನಿಸಿ ನಿದ್ರಿಸುತಿರೆಸಿರಿಭೂದುರ್ಗಾಂಬ್ರಣಿಯರು ಸೇವಿಸಲುನಾಭಿ ಕಮಲದಲಿಸರಸಿಜೋದ್ಭವ ಸ್ತುತಿಸುತ ಧ್ಯಾನಿಸಲುಕರಜೋಡಿಸಿ ಸುಜನರು ನಮೋ ನಮೋ ಎನೆಭರದಿ ಜಾಗಟೆಭೇರಿತಾಳ ತುತ್ತೂರಿಯುಕರದಿ ಶಂಖು ಗಂಟೆ ನಾದ ಮೊಳಗೆಹರಿಭಜನೆ ಮಾಡುತ ತದ್ಧಿಮಿಕೆನ್ನುವ ಸ್ಥಳ 1ಹರಿವೈಕುಂಠದಿ ಸಿರಿಯೊಡಗೂಡಿರಲುಭೃಗುಮುನಿ ತಾಡನದಿಸಿರಿದೇವಿ ಕೋಪಿಸಿ ಹರಿಯನು ಬಿಡಲುಸಿರಿಇಲ್ಲದೆ ಒಬ್ಬನೆ ಇರಲಾಗದೆ ವೆಂಕಟಗಿರಿಗಿಳಿತರಲುಸರಸಿಜಾಕ್ಷ ಕರಿಬೇಟೆಯ ನಾಡುತಬರುತ ಪದ್ಮಾವತಿಯನು ಮೋಹಿಸಿಕೊರವಿರೂಪತಾಳುತ ಕಣಿ ಹೇಳಲುಭರದಿ ಕಲ್ಯಾಣವು ನಡಸಿದ ಸ್ಥಳವಿದು 2ಸುರರುಅಸುರರು ಶರಧಿಯ ಮಥಿಸಿರಲುಅಮೃತವನೆ ಕಂಡುಹಿರಿ ಹಿರಿ ಹಿಗ್ಗುತ ನುಗ್ಗೆ ದಾನವರುಶ್ರೀಹರಿತಿಳಿದು ತ್ವರದಿಂದ ಮೋಹಿನಿರೂಪ ತಾಳಿಬಿರಿಬಿರಿ ನೋಡುತಲಿರೆ ದಾನವರುಸುರರಿಗೆ ಅಮೃತವನುಣಿಸುತ ಮೋಹಿನಿಪರವಶದಲಿ ಮೈ ಮರತಿರೆ ಅಸುರರುಸುರರಿಗೆ ಅಭಯವ ನೀಡಿದ ಸ್ಥಳವಿದು 3ವಿಶ್ವಾಸದಿ ತಪಗೈದ ಸುರನ ನೋಡಿಮಹದೇವರು ಒಲಿದುಭಸ್ಮಾಸುರ ಬೇಡಿದ ವರಗಳ ಕೊಡಲುನಿಜ ನೋಡುವೆನೆಂದು ಭಸ್ಮಾಸುರ ಬೆನ್ನಟ್ಟುತ ಬರುತಿರಲುವಿಶ್ವವ್ಯಾಪಕಹರಿತಾ ತಿಳಿದುತಕ್ಷಣ ಸ್ತ್ರೀ ರೂಪವ ಧರಿಸುತ ಬರೆಭಸ್ಮಾಸುರ ತನ್ಹಸ್ತದಿ ಮೃತಿಸಲುಭಕ್ತರನುದ್ಧರಿಸಿದ ಈ ಸ್ಥಳವು 4ಲೋಕ ಲೋಕದ ಜನರೆಲ್ಲರು ಕೂಡಿಪ್ರಜಾ ಕಂಟಕನಾದಮೂಕಾಸುರನನು ಗೆಲ್ಲಲು ಸಾಗದಲೆಶ್ರೀಕಾಂತನ ಪ್ರಾರ್ಥಿಸೆಮೂಕಾಂಬಿಕೆ ನಾಮದಿಂದಲಿ ಪ್ರಜ್ವಲಿಸಿಮೂಕಾಸುರನನು ವಧಿಸಿದ ಶ್ರೀ ಕೋಲಾ-ಪುರದಲಿ ವಾಸಿಸುತಲಿ ಸಂತತಶ್ರೀಕರ ಕಮಲನಾಭ ವಿಠ್ಠಲಏಕಾಂತದಿ ಭಕ್ತರ ಸಲಹಿದ ಸ್ಥಳವಿದು 5
--------------
ನಿಡಗುರುಕಿ ಜೀವೂಬಾಯಿ