ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಸು ರೂಪಾಯ್ಗೆ ಕೊಂಡು ಕೊಂಡೆವ್ವಾ ಒಸರುವ ಗಡಿಗೆ ಪ ಏಸುರೂಪಾಯ್ಗೆ ಕೊಂಡುಕೊಂಡೆವ್ವಾ ಏಸುರಾಪಾಯ್ಗೆ ಕೊಂಡುಕೊಂಡಿ ಹೇಸಿಕೊಳ್ಳದೆ ಇದನು ನೀನು ಬೇಸರಿಲ್ಲದೆ ತೊಳೆಯುತಿದ್ದಿ ವಾಸನಿಕ್ಕಿ ನಾರುತಿದೆ ಅ.ಪ ಎಂಥ ಕುಂಬಾರಿದನು ಮಾಡಿದ ಎಷ್ಟುಕಾಲದಿ ಕುಂತು ಇದಕೆ ಶೋಧ ಹುಡುಕಿದ ಅವನು ದಾವ ಸಂತೆಯೊಳಗೆ ಕುಂತು ಮಾರಿದ ಕೊಂಡೇನುತಿಳಿದ ತಂತು ತಿಳಿಯದೆ ಹೊತ್ತುಕೊಂಡು ನಿಂತಿಯಿದರ ಖ್ಯಾಲಿನೊಳಗೆ ಸಂತೆ ತೀರಿಹೋಗಲಾಗೇನಂತ ಹೇಳುವಿ ಕೇಳುವವರಿಗೆ 1 ಕಷ್ಟದ್ಹೊತ್ತು ಕುದಿಯುತಿದ್ದ್ಯಲ್ಲ ಹುಚ್ಚು ಎಷ್ಟುದುಡಿದು ತುಂಬುತಿದ್ದ್ಯಲ್ಲ ನಿಲ್ಲದಿನಿತು ಅಷ್ಟು ಒಸರಿ ಬಸಿಯುತಾದಲ್ಲ ಖೂನ ನಿನಗಿಲ್ಲ ನಟ್ಟನಡುವೆ ಗಂಟುಬಿದ್ದು ಕೊಟ್ಟು ನಿನಗೆ ಕಷ್ಟ ವಿಧ ವಿಧ ಕಟ್ಟ ಕಡೆಗೆ ಕೈಯ ಬಿಟ್ಟು ಕೆಟ್ಟು ಮಣ್ಣು ಕೂಡುತಾದೆ 2 ಮಸಣಿಬುದ್ಧಿ ನೀಗಿ ಕೇಳಮ್ಮ ನಿಜವನಿರುತ ಕುಶಲರ್ಹೇಳುವ ಮಾತು ತಿಳಿಯಮ್ಮ ಮುಂದೆ ಮಹಕಾಲ ನಿಶೆಯು ಒದಗುತದೆ ತಂಗೆಮ್ಮ ಪುಸಿಯಲ್ಲವಮ್ಮ ಮಸಿಯ ಗಡಿಗ್ಹಿಡಿದು ಹಸನಮಾಡಿ ವಸುಧೆಗಧಿಕ ಶ್ರೀರಾಮಪಾದ ಕುಸುಮಕರ್ಪಿಸಿ ಧನ್ಯಳಾಗಿ ಅಸಮಮೋಕ್ಷಪದವಿ ಪಡೆಯೆ 3
--------------
ರಾಮದಾಸರು
ಕಾಯವಿದು ನಿತ್ಯವೆಂದು ನೆಚ್ಚಬೇಡ ಮಾಯಾಕಾರ್ಯನಾಗಿ ಮೆರೆವುದಿದು ತಿಳಿದುನೋಡಾಕಾಯವಳಿವ ಮುನ್ನ ಹರಿಯ ಕೃಪೆಯ ಜೋಡ ತೋಡುನಾಯಬಾಯತುತ್ತ ನಂಬಿ ಬೆರೆಯ ಬೇಡ ಪಮಾತಾಪಿತೃರೇತಸ್ಸಿಂದ ಪತನವಾಗಿ ಪಂಚಭೂತಕಾರ್ಯದಿಂದ ಸ್ಥೂಲಾಕಾರವಾಗಿರೇತಸ್ಸು ರಕ್ತಗಳಾರು ಕೋಶವಾಗಿ ಕರ್ಮಜಾತಕಾಯ ಹೀಗೆ ತೋರುತಿಪ್ಪುದಾಗಿ 1ಹುಟ್ಟಿ ಬೆಳೆದು ನಲಿದು ಮುಪ್ಪಿನಿಂದ ಕ್ಷೈಸಿ ಕಡೆಗೆನಷ್ಡವಾಗಿ ಹೋಗಿ ಮಣ್ಣಿನೊಳಗೆ ಬೆರಸಿಇಷ್ಟೂ ಪರಿಯೊಳಾರು ವಿಕಾರವ ತೋರಿಸಿ ವಂದಿಷ್ಟೂ ಫಲವಿಲ್ಲದಂತೆ ುದಕೆ ಭ್ರಮಿಸಿ 2ಕಾಲಕರ್ಮ ಪಂಚಭೂತ ಮಿಳಿತವಾಗಿ ಇದಕೆಮೂಲವಾದ ಕರ್ಮವೆ ಪ್ರಧಾನವಾಗಿಢಾಳಿಸುವಾತ್ಮನ ತೇಜಾಧಾರವಾಗಿ ಕರ್ಮತೇಲಲಾಗಿ ದೀಪದಂತೆ ಪೋಪುದಾಗಿ 3ಬತ್ತಿಯನ್ನು ಎಣ್ಣೆಮುಗಿವ ಸಮಯಕಾಗಿ ಎಣ್ಣೆಯೂಮತ್ತೆ ತಂದು ತುಂಬೆ ದೀಪ ಪೋಗದಾಗಿಇತ್ತೆರದ ಕರ್ಮದಿಂದ ಚಕ್ರವಾಗಿ ಜನ್ಮಮೃತ್ಯುಗಳೀ ದೇಹಕ್ಕವಧಿುಲ್ಲವಾಗಿ 4ತೈಲಮಿಶ್ರವರ್ತಿಯಗ್ನಿ ಸಮ್ಮೇಳದಿಂದಾ ದೀಪಬಾಳಿಬೆಳಗುವುದು ತೈಲದಾಧಾರದಿಂದಾತೈಲಮುಗಿಯೆ ದೀಪ ಕೆಟ್ಟು ಹೋಹ ಛಂದದಂತೆಕೇಳು ದೇಹವೀಪರಿಯೊಳಿಹುದರಿಂದಾ 5ಹುಟ್ಟಿದಲ್ಲಿ ಸೂತಕವು ಹೊಂದಿದಲ್ಲಿ ಸೂತಕವುಮುಟ್ಟಿವಸ್ತುಗಳುಚ್ಚಿಷ್ಟಂಗಳಹವೂನಟ್ಟನಡುವೆ ಬಂದದೆಂದು ಶಿಷ್ಟರಿದ ಮನ್ನಿಸರುನಷ್ಟವಾಗಿ ಕಡೆಗೆ ತಾನು ಹೋಹ ದೇಹವೂ 6ತಾನು ಬಂದ ಬಗೆಯು ತನಗೆ ತಿಳಿಯದಿದ್ದರೂ ನಿನ್ನಸೂನು ಬಂದ ಬಗೆಯ ನೋಡಿ ತಿಳಿದುಕೊಂಡಾರುಹೀನನಾದ ಕಾಯವಭಿಮಾನಿಸದಿರು ಮುಂದೆಶ್ರೀನಾಥನ ಪದವ ಭಜಿಸಿ ಸುಖದಿಂದಿರುತಿರು 7ಮನವೆ ಮಿಥ್ಯದೇಹದಭಿಮಾನವೇತಕೆ ಬಹುಜನುಮ ಜನುಮದಲ್ಲಿ ದುಃಖದಗೆ ನೂಕೆಕೊನೆಗೂ ಹೀಗೆ ಬಂಧವನ್ನು ಕೊಡುವದಕ್ಕೆ ಮಚ್ಚಿಜಿನುಗುವಿರಿಕೆಯೇನು ಇನ್ನೂ ಬಿಡದೆ ಬಯಕೆ 8ಘೋರರೂಪಾಪಾರಸಂಸಾರಾಂಬುಧಿಯನ್ನೂಮೀರಲೇರು ವೆಂಕಟೇಶನಾಮನಾವೆಯನ್ನುಧೀರಗುರು ವಾಸುದೇವರಂಘ್ರಿಯನ್ನು ಬೇಗಸಾರುವ ವಿವೇಕತನವಂದು ಚೆನ್ನೂ 9ಕಂ|| ಜೀವನು ವಿರತಿಯ ಸಾಧಿಪಭಾವಧಿ ಮನದೊಡನೆ ಕಾಯವ ನೆಚ್ಚದಿರೆನ್ನುತಕೈವಲ್ಯದ ಪಥವ ಪೇಳಲುಜೀವನೊಳಾಡಿದುದು ಕಾಯವಚ್ಚರಿಯೆನ್ನಲೂ
--------------
ತಿಮ್ಮಪ್ಪದಾಸರು
ಸಾರಿ ಸಾರಿ ಹೇಳು ತೀನಿ ಕಡ್ಡಿ ಮುರಿದು ನಾನು ಬಾರಿ ಬಾರಿಗೆ ಸತ್ತು ಹುಟ್ಟತಲಿಹೆ ನೀನು ಪ ಇರುಳು ವಿಷಯದೊಳಗೆ ಮನವ ನಿರಿಸಿ ಮಡದಿ ಮಕ್ಕಳೆಂಬಲೆಯಲಿ ಪರಿಯನರಿಯದಿದು ಇನ ಸುತನ ದೂತರೊಡನೆ ಕೊಲಿಸಿ ಕೊಳದಿರು 1 ನೀನು ಹುಟ್ಟಿ ಬರುವ ಮುನ್ನ ಇವರಿಗೆಲ್ಲ ವಾಸವೆಲ್ಲಿ ನೀನದೆಲ್ಲಿ ನಟ್ಟನಡುವೆ ಬಂದ ಸಿರಿಯಿದು ಕಾನ ಕಪಿಗಳಂತೆ ನೆರೆದು ಮಡದಿ ಮಕ್ಕಳೆಂದು ಈಗ ಪ್ರಾಣವನ್ನು ತಿನಲು ಬಂದ ನರಿಗಳಿವದಿರು 2 ದಾರಿ ಹೋಕರಿವರು ನಿನ್ನ ಋಣವು ತೀರಿ ಹೋದ ಬಳಿಕ ಯಾರಿಗಾರು ಇಲ್ಲ ನಿನಗೆ ನೀನದಲ್ಲದೆ ವೈರಿ ಕೋಣೆಲಕ್ಷ್ಮೀಪತಿಯ ಸೇರಿ ನಾಮ ಸ್ಮರಣೆಯಿಂದ ಮುಕ್ತಿ ಪಡೆದಿರು 3
--------------
ಕವಿ ಪರಮದೇವದಾಸರು