ಬಾರನೇಕೆ ಬಾಲಕೃಷ್ಣನೂ | ಎನ್ನ ಮನಕೆಪೋರ ಶೀಲ ಗೋಪ ಕೃಷ್ಣನೂ ಪ
ಸಾರಿ ಸಾರಿ ಕೂಗಿದಾರೂ | ದೂರವಿರುವನಂತೆ ನಟಸಿತೋರಗೊಡನು ತನ್ನ ರೂಪ | ಅರಿಗ್ಹೋಗಿ ಪೇಳಲಮ್ಮ ಅ.ಪ.
ಗೋಪಿ ಕೊಟ್ಟ | ಕಲ್ಲಿ ಬುತ್ತಿಯೊಡನೆ ಪೋಗಿಹಳ್ಳ ಕೊಳ್ಳದಲ್ಲಿ ಕುಳಿತು | ಮೆಲ್ಲುತಿರುವನೇನೊ ಅಮ್ಮ 1
ಗೋಪಿ ಜನರ | ಕಂಡು ಕಾಣಧಾಂಗೆ ಇಹನೆ 2
ತಂದೆ ಮುದ್ದು ಮೋಹನ ಗುರುಗಳೂ | ನಿನ್ನ ರೂಪತಂದು ತೋರಿ ಮನದಿ ನಿಲ್ಲಲೂ ||ಅಂದು ಕೇಳಿಕೊಂಡು ಇಹರು | ಅಂದ ವಚನ ಮರೆತೆಯೇನೋತಂದೆ ಗುರು ಗೋವಿಂದ ವಿಠಲ | ಇಂದೆ ನೀನೆ ಮನಕೆ ಪೊಳೆಯೊ 3