ನಾಟ್ಯಕಲಾವಿದ ಶಿವನೋ ಕೇಶವನೋ
ನಾಟ್ಯಕೆ ನಲಿವನಾ ಭವನೋ ಮಾಧವನೋ ಪ
ನಾಟ್ಯಾಪ್ಸರಗಣವೇಷ್ಟಿತನಿವನು
ನ್ಯಾಟ್ಯದಿಸಕಲರಾಭೀಷ್ಟದನವನು ಅ.ಪ
ಝಣ ಝಣ ಝಣರವ ರಣಿಪನಿವನು
ಕಿಣಿ ಕಿಣಿ ಕಿಣಿರವ ಚೆಲ್ಲುವನವನು
ಗಣ ಗಣ ನಾದದಿ ವರ್ತಿಪನಿವನು
ಮಣಿಗಣನಾದದಿ ನರ್ತಿಪನವನು 1
ಮುರಳಿಯಗಾನವ ಪಾಡುವನಿವನು
ನಿರುಪಮ ದಿವಿಜಾ ನರ್ತಕನವನು
ಭರತನಾಟ್ಯ ಕಲಾ ಕೋವಿದನಿವನು
[ವರ ನಾಟ್ಯ ನಟನಾ ನಿಪುಣನವನು] 2
ಭೇರಿನಗಾರೀ ತುತ್ತೂರಿ ಡಮರುಗ
ಕರಿಮುಖ ಷಣ್ಮುಖಯುತ ಭಸಿತಾಂಗ
ನಾರದ ತುಂಬುರ ವೀಣೆ ಮೃದಂಗ
ಸಾರಗಾನಯುತ ಮಾಂಗಿರಿರಂಗ 3