ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀಲಮೇಘಶ್ಯಾಮಾ ಬಾರೊ ನೀವೊಂದು ಮುತ್ತ ತಾರೋ ಪ. ನೀರಜಾಕ್ಷ ನಲಿದು ಬಾರೊ ನಗೆಮೊಗವನ್ನೆ ತೋರೊ ಅ.ಪ. ನಿನ್ನ ಸಮರ್ಯಾರೊ ಕೃಷ್ಣಾ ಸನ್ನುತಾಂಗ ಓಡಿ ಬಾರೋ ಬೆಣ್ಣೆಕೋಲು ಬೆಂಡು ಬುಗುರಿ ಚಿನ್ನ ರನ್ನ ಕೊಡುವೆ ಬಾರೋ 1 ಮುತ್ತಿನಂಗಿ ಕೊಡಿಸುವೇನೂ ರತ್ನತಿಲಕವಿಡುವೆ ಬಾರೋ ವತ್ತಿ ನಿನ್ನ ಬಾಯೊಳೂದೆ ರತ್ನ ಕೊಳಲ ಕೊಡುವೆ ಬಾರೋ 2 ಸ್ವರ್ಣಮಯೂರಂಗವ ತೋರೊ ನೀಲವರ್ಣಾ ಚಂದ್ರಬಿಂಬ ಬಾರೋ 3 ಭಕ್ತಿ ಸುರಧೇನುಬಾರೊ ಮುಕ್ತಿದಾತ ಶ್ರೀ ಶ್ರೀನಿವಾಸ ಮಾಧವ ಬಾರೋ 4
--------------
ಸರಸ್ವತಿ ಬಾಯಿ
ಪತಿವ್ರತೆ ಹ್ಯಾಂಗಿರಬೇಕು ನಿಜವಾಗಿ ಪ ರತಿಪತಿಪಿತನನ್ನು ಪತಿಯಲ್ಲಿ ನೆನೆಯುತ್ತ ಅ.ಪ. ಹೊತ್ತಾರೆ ಏಳಬೇಕು ಪತಿಗೆ ವಂದಿಸಬೇಕು ನಿತ್ಯತುಳಸಿಗೆರಗಿಕೃತ್ಯಮಾಡಲಿಬೇಕು ಅತ್ತೆಮೆಚ್ಚಿಸಬೇಕು ತೊತ್ತಿನಂತಿರಬೇಕು ರತಿಯ ನೀಡುತ ಪತಿಗೆ ಹಿತದಿಂದ ಬಾಳಬೇಕು 1 ಮಿತಮಾತು ಇರಬೇಕು ಸುತರ ಪಾಲಿಸಬೇಕು ಮತಿಮತದಿ ನಡಿಬೇಕು ಅತಿಥಿ ಪೂಜಿಸಬೇಕು ವ್ರತನೇಮ ವಿರಬೇಕು ಗತಿ ಹರಿಯೆ ತಿಳಿಬೇಕು ಮಾತ್ಸರ್ಯಬಿಡಬೇಕು ತೃಪ್ತಿಯಿರಲಿಬೇಕು 2 ನೆರೆಹೊರೆ ಗಂಜಬೇಕು ತಿರುಗೋದು ಬಿಡಬೇಕು ತಿರಿ ತಿಂಡಿ ಬಿಡಬೇಕು ಹರಟೆಗಳ ಬಿಡಬೇಕು ಹರಿಕಥೆ ಕೇಳಬೇಕು ಹರಿದಿನ ಮಾಡಬೇಕು ಹರಿಯ ಪಾಡಲಿಬೇಕು 3 ನೆಟ್ಟಕುಂಕುಮ ಬೇಕು ಕೆಟ್ಟವರ ಬಿಡಬೇಕು ಕಟ್ಟಿ ಆಶೆಯ ಬಿಟ್ಟು ತೃಪ್ತಿಯಿಂದಿರಬೇಕು ಕಷ್ಟಬಂದರು ಬಹು ಗುಟ್ಟಿನಿಂದಿರಬೇಕು ನೆಂಟರೊಡನೆ ಕಠಿಣ ನಿಷ್ಟೂರ ಬಿಡಬೇಕು 4 ಚುಚ್ಚಬಾರದು ಚಾಡಿ ಬಿಚ್ಚಬಾರದು ಗಾಡಿ ಹಚ್ಚಬಾರದು ವಿಷಯ ಕೊಚ್ಚಬಾರದು ಜಂಭ ಹುಚ್ಚಳಂತಿರದ್ಹಾಂಗೆ ಸ್ವಚ್ಚನಡತೆಯು ಬೇಕು 5 ಪಾಪವ ತೊರಿಬೇಕು ಲೇಪನವ ಬಿಡಬೇಕು ಕೋಪವ ಬಿಡಬೇಕು ಕಪಟತ್ವ ಬಿಡಬೇಕು ರೂಪ ಮದವ ಬಿಟ್ಟು ಚಪಲತ್ವ ತೊರಿಬೇಕು ವಿಪರಿತ ಮಡಿಬಿಟ್ಟು ಶ್ರೀ ಪತಿಯ ನೆನಿಬೇಕು 6 ಅಂಗ ಶುದ್ಧಿಯು ಬೇಕು ಶೃಂಗಾರ ರಸಬೇಕು ನಗೆಮೊಗವಿರಬೆಕು ಸವಿಮಾತು ಗುಣಬೇಕು ಭಂಗಾರ ವಿಡಬೇಕು ರಂಗಗೆನ್ನಲಿ ಬೇಕು ಮಂಗಳಾಂಗ ನಮ್ಮ “ಶ್ರಿ ಕೃಷ್ಣವಿಠಲ” ನ್ನ ಹಿಂಗದೆ ನೆನೆಬೇಕು ಅಂಗಿನೀಗಲಿ ಬೇಕು 7
--------------
ಕೃಷ್ಣವಿಠಲದಾಸರು
ವೆಂಕಟೇಶ ಕಾಯೋ ಕಿಂಕರರವನೆಂದು ಪ ಪಂಕಜಾಸನ ಶಂಕರರಾರ್ಚಿತ ಶಂಬಸುದರ್ಶನಾಂಕಿತ ಅ.ಪ. ವಾಸುದೇವ ನೀನೆ ಶ್ರೀ ಸರಸಿಜಭವ ವೀಶ ಫಣಿಪ ವಹೇಶ ವಾಸವರಾಶೆ ಪೂರೈಸಿ ಪೋಷಿಸುವ ಜಗದೀಶ ಜೀವನದ ವಾ ರಾಶಿಜಾಧಿಪ ಭೇಶ ರವಿ ಸಂಕಾಶ ಕರಿವರಕ್ಲೇಶ ಹಾ 1 ಸ್ವರಮಣ ಭಕುತರ ಕಾಮಿತಪ್ರದ ಕೈರವದಳಶ್ಯಾಮ ಸುಂದರನೆ ಹೇಮ ಶೃಂಗೀವರಧಾಮ ದೀನಬಂಧು ಸನ್ನುತ ಸೋಮಧರ ಸುತ್ರಾಮ ಮುಖ ಸುರಸ್ತೋಮನಾ 2 ತ್ರಿಗುಣಾತೀತ ನರಮೃಗರೂಪ ನಾನಿನ್ನ ಪೊಗಳಬಲ್ಲೆನೆ ನಿಗಮವೇದ್ಯನೆ ಜಗನ್ನಾಥ ವಿಠಲ ಸ್ವಗತಭೇದ ಶೂನ್ಯನೆ ಮುಗಿವೆ ಕರಗಳ ಪನ್ನಗನಗಾಧಿಪ ಪೊಗರೊಗುವ ನಗೆಮೊಗವ ಸೊಬಗಿನ ಸುಗುಣನೆ 3
--------------
ಜಗನ್ನಾಥದಾಸರು
ಪಾರ್ವತಿ ಜಗದ್ಭರಿತೇ ಮಹೇಶ್ವರಿ |ಶರ್ವನಂಗನೆ ಖ್ಯಾತೆ ಪಸರ್ವ ಸ್ವತಂತ್ರೆಶರ್ವಾಣಿಕಾಳಾಹಿವೇಣಿ |ಸರ್ವಜನರ ಮದ | ಗರ್ವ ನಿವಾರಿಣಿ ಅ. ಪಸೃಷ್ಟಿಪಾಲಿನಿ ಗೌರೀ ಸರ್ವೇಶ್ವರಿ |ದುಷ್ಟಮರ್ದನ ಕಾರಿ |ಇಷ್ಟದಾಯಕಿಭವ| ಕಷ್ಟನಿವಾರಿಣಿಶಿಷ್ಟಪಾಲಿನಿ ಬೆಟ್ಟದ ಕಲಿಗೆ ಭವಾನಿಯೆ 1ಅಘನಾಶಿನಿ ದೇವೀ ಕಾತ್ಯಾಯಿನಿ |ಸುಗುಣರ ಸಂಜೀವಿ |ನಗೆಮೊಗವನು ತೋರಿ | ಸುಗುಣನೆಂದಿನಿಸೆನ್ನ |ಅಗಲಬೇಡವೋ ತಾಯೇ ಮುಗಿವೆನು ಕರವಾ 2ಪರಮಪಾವನೆ ನಿನ್ನಾ | ಭಕ್ತಿಯೊಳೀಗಾ |ಸ್ಮರಿಸಲರಿಯೆ ಮುನ್ನಾ |ತರಳಷಣ್ಮುಖನಂತೆ |ಪರಸಿ ರಕ್ಷಿಸೆ ಎನ್ನ | ಭರದಿ ಗೋವಿಂದನದಾಸನಿಗೊಲಿದು ||ಪಾರ್ವತಿ|| 3
--------------
ಗೋವಿಂದದಾಸ