ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಝಣ ಝಣ ಝಣರೆಂದು ಕುಣಿವುದ ನೋಡೆ ಫಣಿಪತಿ ಶಯನನು ಕಾಣುವ ನೋಡೆ |ನಾಡೆ ಪ ಕಿಣಿ ಕಿಣಿ ಕಿಂಕಿಣಿ ಕಿಣಿರವ ಕೇಳೇ ಮಣಿ ಮಣಿದಾತನ ನಾಮವ ಪಾಡೇ ಅ.ಪ ನೋಡುವ ನಲಿಯುವ ಹೊಂಗೊಳಲೂದುವ ಪಾಡುವ ಕರೆಯುವ ನಗಿಸುವ ನಗುವಾ ಮಾಡೆ ವಂದನೆಗಳ ಸಂತಸಗೊಳುವಾ ಬೇಡುವರಿಷ್ಟವ ಕರುಣದಿ ಕೊಡುವಾ 1 ಬೃಂದಾವನದಾನಂದದ ನೋಟಾ ಮಂದಗಮನೆಯರ ನಲವಿನ ಕೂಟಾ ಇಂದಿರೆಯರಸ ಮಾಂಗಿರಿಪತಿಯಾಟಾ ಸಂದಪುದೆಮಗೆ ಬಾ ಕೃಷ್ಣನೊಳಾಟಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಂದವನಾವನೋ ನಾ ಕಾಣೆ ಇಂದೀವರ ನೇತ್ರಾ ಸುಗಾತ್ರಾ ಪ ಮೆಲ್ಲಡಿ ಇಡುವ ಮರೆಯಲಿ ನಿಲುವಾ ಕಾಂತಿಯ ಚೆಲ್ಲುವ ನೋಡಲು ನಗುವಾ ಅ.ಪ ಆಕಳ ಕರೆವಾಗ ಸಾಕೆಂದೆನುವಾ ಆಕಳ ಬೆಣ್ಣೆಯೇ ಬೇಕೆನುತಿರುವಾ ಏಕೆಲೊ ಮರೆಯಾಗಿ ನಿಂತಿಹೆ ಪೇಳೆನೆ ನೀ ಕೊಡೆ ನಾ ಬಿಡೆ ಕೇಳೆಂಬಾ 1 ಮೊಸರನು ಕಡೆವಾಗ ಹಸಿವೆಂದೆನುವ ಬಿಸಿಯನ್ನವನಿಡೆ ಹಸುವಿಗೆ ಕೊಡುವಾ ನುಸುಳಿ ಬಂದು ಕೆನೆಮೊಸರನೆ ಮೆಲ್ಲುವ ಕಿಸಿಕಿಸಿ ನಗುತಲಿ ಓಡುವನಾರೋ 2 ಕಣ್ಣು ಮುಚ್ಚಲು ಬೆಣ್ಣೆಯ ಕಳುವ ಹೆಣ್ಣುಗಳೆಡೆಯಲಿ ನಗುತಲಿ ಹುದುಗುವ ಚಿಣ್ಣನು ಮಾಂಗಿರಿರಂಗನೇ ಯೇನೋ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್