ಸರಿತಪ್ಪುಗಳ ಗೊಡವೆ ನನಗೇತಕೋ
ಸರಿತಪ್ಪ ನಡೆಸುವವನು ನೀನಾಗಿರೇ ಪ
ಹರಿ ನಿನ್ನ ಕೈಗೊಂಬೆ ನಾನಾಗಿರೆ
ಪರಿಪರಿಯ ಯೋಚನೆಯು ನೀನಾಗಿರೇ ಅ.ಪ
ಹಗಲಿರುಳ ಬಗೆ ಭಾವ ಎನಗೇತಕೆ
ನಗುವಳಲ ಶೋಕಂಗಳು ಇನ್ನೇತಕೇ
ಜಗವೆಲ್ಲ ತುಂಬಿರುವೆ ಭಯವೇತಕೆ
ಭಗವಂತ ನಿನ್ನದಯೆ ಇರದೇತಕೆ 1
ಹರಿಚರಣ ಶರಣೆಂಬುದೆನಗಾಗಲಿ
ಕರವಿಡಿದು ನಡೆಸುವುದು ನಿನಗಾಗಲೀ
ಗುರುದೇವ ನೀನೆಂಬುದರಿವಾಗಲೀ
ಸಿರಿ ಮಾಂಗಿರಿಯರಂಗ ದಯೆದೋರಲಿ 2