ದೇವ ಬೆಳಗಾಯಿತೋ ಎನ್ನಯ ಸೇವಾ ಪ
ಸ್ವೀಕರಿಸೋ ಮಹಾನುಭಾವ ದೇವ ಅ.ಪ
ಮಧುರ ಗಾನವೇ ಗಂಗಾಸ್ನಾನ
ಹೃದಯ ಶುದ್ಧಿಯೇ ಬದರಿಸ್ನಾನ
ಬದಿಯಲಿರುವ ಭಕುತರ ಸಹವಾಸವೇ
ನದಿನದಗಳವಗಾಹನ ಸ್ನಾನವೋ 1
ಹಾಲಿಗೆ ಕರದಲಿ ಥಾಲಿಯ ಪಿಡಿದು
ಕೋಲಾಹಲ ಕಲಭಾಷಣ ಮಾಡುವ
ಬಾಲರ ನಗುಮೊಗ ನೋಡಲು ಕೃಷ್ಣನ
ಲೀಲೆಯ ಸಂದರ್ಶನಾನಂದವೋ 2
ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ
ಕುಸುಮ ರಾಶಿಯ
ಚಿಲ್ಲೆ ಪಲ್ಲೆಗಳ ಬಹುರೂಪದಿ ಶ್ರೀ
ನಲ್ಲ ನಿನಗೆ ಸಲ್ಲಿಸುವುದೇ ಭಾಗ್ಯವೋ 3
ತಾತನೆಂದು ಮೊರೆಯಿಡುವರು ನೀ ಅನ್ನ
ದಾತನೆಂದು ಮೊರೆಯುತಿಹರೋ
ತಾತನ ಕಿವಿಗೀ ಮಾತನು ತಿಳಿಸಲು
ದೂತನು ನಾ ಕಾದಿಹೆನೊ ಪ್ರಸನ್ನನೇ 4