ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಯೆ ಕೇಳೆನ್ನ ಬಿನ್ನಪವ ಬಲು ಮಾಯ ಕಾರನು ಕೃಷ್ಣ ಮಾಡಿದೊಳಿಗವ ಪ ಮಕ್ಕಳೂಳಿಗವ ತಾಯ್ಗಳಿಗೆ ಹೇಳ ತಕ್ಕುದು ನೀತಿ ಕೇಳವ್ವ ನಿಮ್ಮಡಿಗೆ ಠಕ್ಕನ ದೆಸೆಯಿಂದ ದಣುಕೊಂಬುದೆಮಗೆ 1 ಬೆಳಗು ದೋರದ ಮುನ್ನ ಬರುವ ಕೃಷ್ಣ ನೆಲುವಿನ ಪಾಲ್ಬೆಣ್ಣೆಗಳ ಕದ್ದು ಮೆಲುವ ನಿಲುಕದಿದ್ದರೆ ಕಲ್ಲಲಿಡುವ ಒಳ ಹೊರಗೆಲ್ಲ ಕ್ಷೀರ ಸಮುದ್ರವ ಕರೆವ 2 ಉಂಡುದ ಕಳಲುವರಲ್ಲ ನೆಲನುಂಡು ಕೆಟುದು ಪಾಲು ಬೆಣ್ಣೆಗಳೆಲ್ಲ ಮೊಸರ ಬಾಂಢವೆಂದರೆ ಬರಲೊಲ್ಲ ಇವನ ಕಂಡೆನೆಂದರೆ ಸುಳುಹನೆ ಕಾಣಲಿಲ್ಲ 3 ಹೆಣ್ಣ ಮಕ್ಕಳನಿರಗೊಡನು ಬಲು ಬಣ್ಣಿಸಿ ಕರೆದು ಮುದ್ದಿಸಿ ಆಡುತಿಹನು ಚಿಣ್ಣರಂದದಿ ಕಾಣುತಿಹನು ತೊಂಡೆ ವೆಣ್ದಟಿಯ ನಗಲಿಸಿ ನೋಡಿ ನಸುನಗುತಿಹನು 4 ಆಸೆ ನಮಗೆ ಊರೊಳಿಲ್ಲ ಪರ ದೇಶಕ್ಕಾದರೂ ಹೋಗಿ ಜೀವಿಪೆವೆಲ್ಲ ಬೇಸರಾಯಿತು ನಿಮಗೆಲ್ಲ ನಮ್ಮ ಪೋಕ್ಷಿಸುತಿಹ ಲಕ್ಷ್ಮೀರಮಣನೆ ಬಲ್ಲ 5
--------------
ಕವಿ ಪರಮದೇವದಾಸರು
ಬಲ್ಲೆ ಬಲ್ಲೆ ನಿಮ್ಮೆಲ್ಲರ ಗುಣವನು ನಾನು ಪಾರ್ಥಅವರ ಹೊಲ್ಲತನವ ಹೇಳಲು ಹೋಗುವಿ ಕೋಪಿಸಿ ನೀನು ಪ. ಒರಲಿ ಒರಲಿಬಾಯಿ ತೆರೆಯಬಾರದು ದಯಸಾಕೊಹಿರಿಯನೆಂಬೊ ಹರಲಿಗೆ ತಕ್ಕವನಲ್ಲಇವ ಹರಲಿಗೆ ತಕ್ಕವನಿವನಲ್ಲನಿಮ್ಮ ಚರಿಯವ ಕೇಳುತ ಅಂಜರೊ ನರರೆಲ್ಲ 1 ಕುಂಭಿಪಾಕದೊಳು ಕುದಿಸುವ ಕೆಲವರು ಕೇಳೋ ಅದು ದಯವೆಂಬೊಮಾತಿದು ಮಂದಿಗೆ ಇರದು ಹೇಳೊಜಂಬವೆಂಬುದು ತುಂಬಿದೆ ಇವನಲ್ಲೆಷ್ಟು ಇದುನಮ್ಮ ಅಂಬುಜಾಕ್ಷನಲಿ ಅತಿ ಬ್ಯಾಗ ಬಾಹೋದು ಸಿಟ್ಟು 2 ಅನ್ಯ ಲೋಕದವರ ನ್ಯಾಯ ಕೇಳುವನಿವನಲ್ಲತನ್ನ ಬುದ್ದಿಯನು ತಾ ಕಳೆದನು ಧರ್ಮನು ಎಲ್ಲಮಾನ್ಯ ಮಾನ್ಯರೊಳು ಮಾನ ಭಂಗಿಸುವುದು ಇರುವುದು ಏನೊನಮ್ಮ ಚದುರ ರಾಮೇಶನು ಚನ್ನಾಗಿ ನಗುತಿಹನುತಾನು 3
--------------
ಗಲಗಲಿಅವ್ವನವರು
ತಂಬೂರಿ ಮಾಡಿಸಿ ತರಲಿಲ್ಲವಮ್ಮನಮ್ಮ ರಂಭೆ ದ್ರೌಪತಿ ಕೋಪ ‌ಘನವಾಯಿತಮ್ಮ ಪ.ಮೂಡಲಗಿರಿವಾಸ ನಾಡು ನಾಡಿನ ಜವಳಿಬೇಡಿದ ಪರಿಯು ತರಿಸಿದನಮ್ಮಬೇಡಿದಪರಿತರಿಸಿದನು ಧರ್ಮನನೋಡ ಬಂದವರಿಗೆ ಉಡುಗೊರೆಕೆಲದಿ1ಚಂದದ ಜವಳಿ ಕಂದರಿಗೊಸ್ತವುಇಂದಿರಾರಮಣ ತರಿಸಿದನಮ್ಮಇಂದಿರಾರಮಣ ತರಿಸಿದನಮ್ಮ ಧರ್ಮನಬಂದ ಜನಕೆಲ್ಲ ಉಡುಗೊರೆಕೆಲದಿ2ಲೆಕ್ಕವಿಲ್ಲದ ಜವಳಿ ಮಕ್ಕಳಿಗೊಸ್ತವುಲಕ್ಕುಮಿರಮಣ ತರಿಸಿದನಮ್ಮಲಕ್ಕುಮಿರಮಣ ತರಿಸಿದನಮ್ಮ ಧರ್ಮನಮಿಕ್ಕ ಜನಕೆಲ್ಲ ಉಡುಗೊರೆಕೆಲದಿ3ಏಸುರತ್ನದಹೇರುವಾಸುದೇವನು ತರಿಸಿರಾಶಿ ಸುರುವಿದ ಸಭೆಯೊಳುಕೆಲದಿರಾಶಿ ಸುರುವಿದ ಸಭೆಯೊಳು ಧರ್ಮನಆಸು ಜನಕೆಲ್ಲ ಉಡುಗೊರೆಕೆಲದಿ4ಫುಲ್ಲನಾಭನು ದ್ರವ್ಯ ಚಲ್ಲಿದ ಸಭೆಯೊಳುಎಲ್ಲ ನಾರಿಯರು ಬಳಕೊಳ್ಳಿರಮ್ಮಎಲ್ಲ ನಾರಿಯರು ಬಳಕೊಳ್ಳಿರಮ್ಮ ಎನುತಲೆಚಲ್ವ ರಾಮೇಶ ನಗುತಿಹನಮ್ಮ 5
--------------
ಗಲಗಲಿಅವ್ವನವರು
ಹೇಗೆ ಉದ್ಧಾರ ಮಾಡುವನು - ಶ್ರೀಹರಿ|ಹೀಗೆ ದಿನಗಳೆದುಳಿದವನ ಪರಾಗದಿಂದಲಿ ಭಾಗವತರಿಗೆ |ಬಾಗದಲೆ ತಲೆ ಹೋಗುವಾತನ ಅ.ಪಅರುಣೋದಯಲೆದ್ದು ಹರಿಯೆನ್ನದಲೆ ಗೊಡ್ಡು |ಹರಟೆಯಲಿ ಹೊತ್ತು ಏರಿಸಿದವನ ||ಸಿರಿತುಲಸಿಗೆ ನೀರನೆರೆದು ನಿರಂತರ |ಧರಿಸದೆಮೃತ್ತಿಕೆತಿರುಗುತಲಿಪ್ಪನ ||ಗುರುಹಿರಿಯರ ಸೇವೆ ಜರೆದು ನಿರಂತರ |ಪರನಿಂದೆಯ ಮಾಡಿ ನಗುತಿಹನ ||ಪರಹೆಣ್ಣು ಪರಹೊನ್ನು ಕರಗತವಾಗಲೆಂದು |ಪರಲೋಕ ಭಯಬಿಟ್ಟು ತಿರುಗುವನ ||ತರುಣಿ ಮಕ್ಕಳನು ಇರದೆ ಪೋಷಿಸಲೆಂದು |ಪರರ ದ್ರವ್ಯ ಕಳವು ವಂಚನೆ ಮಾಳ್ಪನ2ನಡೆಯಿಲ್ಲ ನುಡಿಯಿಲ್ಲ ಪಡೆಯಲಿಲ್ಲ ಪುಣ್ಯವ |ಬಿಡವು ನಿನ್ನ ಪಾಪಕರ್ಮಗಳೆಂದಿಗು ||ಸಡಲಿದಾಯುಷ್ಯವು ಕಡೆಗೂ ಸ್ಥಿರವೆಂದು |ಕಡುಮೆಚ್ಚಿ ವಿಷಯದೊಳಿಪ್ಪನ ||ಒಡೆಯ ಶ್ರೀಪುರಂದರ ವಿಠ್ಠಲರಾಯನ |ಅಡಿಗಳ ಪಿಡಿಯದೆ ಕಡೆಗೂ ಕೆಟ್ಟವನ 3
--------------
ಪುರಂದರದಾಸರು