ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಾಣಿ ರಂಗಯ್ಯನ ಕಾಣದೆ ನಿಲ್ಲದು ಮನ ವಾಣಿ ರಮಣನ ಪಿತನ ವೇಣದಿ ಕರೆತಾರಮ್ಮ ಪ. ಜರಿಯ ಸುತನು ತಾನು ಜಗಳಕೆ ಬಾಹೋನೆಂದು ಕರೆಸಿದ ವಿಶ್ವಕರ್ಮನ ಕರೆಸಿದ ವಿಶ್ವಕರ್ಮನ ದ್ವಾರಕಾವಿಪುರನಿರ್ಮಿಸೆಂದ ಕ್ಷಣದಾಗೆ ಜಲದೊಳು1 ತಳಿರು ತೋರಣನಿವಹ ಮೇರುವಿಗೆ ಪೊನ್ನ ಕಳಸ ಮೇರುವಿಗೆ ಪೊನ್ನ ಕಳಸ ಕನ್ನಡಿ ಮನೋಹರವಾಗಿದ್ದು ಸಟಿಯಿಲ್ಲ2 ದ್ವಾರಕಾಪುರದ ಶೃಂಗಾರ ವರ್ಣಿಸಲು ಮೂರು ಕಣ್ಣವಗೆ ವಶವಲ್ಲಮೂರು ಕಣ್ಣವಗೆ ವಶವಲ್ಲ ನಾಲ್ಕು ಮುಖದವಗೆ ಬಲುಮಿಗಿಲು3 ಹದಿನಾರು ಸಾವಿರ ಚದುರೆಯರ ಮಂದಿರ ಮದನನಯ್ಯನ ಮನೆಮಧ್ಯಮದನನಯ್ಯನ ಮನೆಮಧ್ಯ ದ್ವಾರಕೆಅದ್ಬುತವಾಗಿ ಬೆಳಗಿದೆ 4 ಶಿಶುಪಾಲ ದಂತವಕ್ತ್ರ ಮೊದಲಾದ ಮಹಾಅಸುರರನ್ನೆಲ್ಲ ಅಳುಹಿದ ಅಸುರರನ್ನೆಲ್ಲ ಅಳಿದು ದ್ವಾರಕೆಯಲ್ಲಿನಸು ನಗುತಿದ್ದ ನರಹರಿ 5 ಸತ್ಯದಿ ರುಕ್ಮಿಣಿ ಸತ್ಯಭಾಮಾದೇವಿ ವಾರಿಜ ಮುಖಿ ಷಣ್ಮಹಿಷೇರಸಹಿತಾಗಿಷಣ್ಮಹಿಷೇರ ಸಹಿತಾಗಿಕಾರುಣ್ಯಸಿಂಧು ರಾಮೇಶ ಕುಳಿತಿದ್ದ 6 ಶ್ರೀ ರಮಾರಮಣನಾದ ಶ್ರೀ ಕೃಷ್ಣನ ಅರಮನೆಗೆಸುಭಧ್ರೆ ಮುಯ್ಯ ತರುತಾಳೆಸುಭಧ್ರೆ ಮುಯ್ಯ ತರುತಾಳೆÀಹಸ್ತಿನಾವತಿಯ ಭೂಸುರರೆಲ್ಲ ಬರತಾರೆ7
--------------
ಗಲಗಲಿಅವ್ವನವರು
ಚೆಂಡನಾಡುತ ಬಂದ ಪುಂಡ ಕೃಷ್ಣನು ತನ್ನ |ಹಿಂಡುಗೋಪಾಲಕರ ಕೊಂಡು ಯಮುನೆಯ ತಡಿಗೆಪಓರೆ ತುರುಬನೆಕಟ್ಟಿಗೀರುನಾಮವನಿಟ್ಟು |ಹಾರ ಕಂಕಣ ತೋಳಬಂದಿ ಘುಂಗುರ ಘನ-|ಸಾರಕುಂಕುಮ ಕೇಸರಿಗಂಧ ಕೂಡಿಸಿ |ಸೇರಿಸುತ ನಡುವಿಗೆ ಕಾಸಿದಟ್ಟಿಯನುಟ್ಟು |ಹಾರಾಡುತಲಿ ಬಂದ-ತೊಡರಗಾಲ |ತೋರ ಚಿನ್ಮಣಿಗಳಿಂದ. ಮುತ್ತಿನ ಚೆಂಡು |ಧಾರಿಣಿಗೆ ಪುಟಿಸಿ ನಿಂದ-ವಜ್ರದಖಣಿ|ತೋರಿ ಗೆಳೆಯರ ಕೂಡ ಬಂದರಾ ಮನೆಯಿಂದ 1ಕೊಂಡಾಲ ತಿಮ್ಮನು ಚೆಂಡನೆ ಹೊಡೆದನು |ಮಿಂಡೆಯರ ಮೊಲೆಗಾಗಿ ಹಾರಿಹರಿದು ಬೀಳೆ |ಹಿಂಡುನಾರಿಯರೆಲ್ಲ ಸುತ್ತಿಕೊಂಡಿರೆಅವರ|ಮುಂಡೆಗೆ ತಗುಲಿಸಿ ಪುರದ ಬಾಗಿಲ ಬಿಟ್ಟು |ಕಿಂಡಿಯಿಂದಲಿ ಬಂದನು-ನಾರಿಯರ |ಮಂಡೆಗೆ ಚೆಂಡಿಟ್ಟನು-ತೋರಿಸುವರ |ಕಂಡು ತಾ ನಗುತಿದ್ದನು-ಕೌತುಕವೆಂದು |ದಿಂಡೆಯರುಮಡುವಿನೊಳಗೆ ಹಾಕಿ ನಡೆದರು2ಗೆಳೆಯರೆಲ್ಲರು ಕೂಡಿ ಚೆಂಡು ತಾ ಎನಲಾಗಿ |ಗುಳುಗುಳಿಸುವ ವಿಷದ ಯಮುನಾ ತಡಿಯಲಿನಿಂದು|ಬಳಿಯ ವೃಕ್ಷದ ಮೇಲೇರಿ ತಾ ಧುಮುಕಲು |ಕಳಕಳಿಸುವ ಗೋಪಾಲರಳುತಿರೆ |ಇಳಿದ ನೀರೊಳಗಾಗಲು-ನಾಗರಫಣಿ|ತುಳಿದು ಕುಣಿಕುಣಿಯುತಿರಲು-ಬ್ರಹ್ಮನು ಬಂದು |ತಿಳಿದು ಮದ್ದಲೆ ಹೊಯ್ಯಲು-ಇಂದ್ರಾದ್ಯರು |ನಲಿದು ತಾಳವನಿಟ್ಟು ಕೊಂಡಾಡುತಿದ್ದರು 3ಮಗನ ಸುದ್ದಿಯಕೇಳಿಹರಿದು ಬಂದಳುಗೋಪಿ|ನಗರದ ಹೊರಗಾಗಿ ಬಾಯ ನಾದದಿಂದ |ವಿಗಡೆಯರು ಬಿಟ್ಟ ಮಂಡೆಯ ಜುಂಜು ಕೆದರುತ |ತೆಗೆದು ಮಣ್ಣನೆ ತೂರಿ ಕುಳಿತಲ್ಲಿಂದಲೆ ನಮ್ಮ-|ನ್ನಗಲಿ ಹೋಗುವರೆ ಹೀಗೆ-ರಂಗ ನಮ್ಮ |ಮೊಗವ ನೋಡುವುದೆಂದಿಗೆ-ನೋಡಿದ ಕಣ್ಣ |ತೆಗೆದು ಕೀಳುವೆನಿಂದಿಗೆ-ಪಡೆದ ಪೊಟ್ಟೆ |ದಗದಗಿಸಲು ಕೊಟ್ಟು ಮುನಿಯದೆ ಬಾ ಬೇಗ 4ಏನನೆಂಬೆನು ಕೃಷ್ಣ ನಿನ್ನ ಕಾಣದೆ ಪುರದ |ಮಾನಿನಿಯರು ಬೆರಗಾಗಿ ಬೀಳುತ ಕರುವ |ಕಾಣದಿರೆತ್ತಿಗೆ ಕರುವನು ಬಿಡುವರು |ಆ ನಾಸಿಕದ ಮೂಗುತಿ ಕಿವಿಗಿಡುವರು |ಧೇನುಮೇವನೆ ತೊರೆದುವು-ಗೋವುಗಳನ್ಯ-|ರಾಮನೆಗೋಡಿದುವು-ವತ್ಯಗಳೆಲ್ಲ |ಮೌನದಿ ಮೊಲೆ ತೊರೆದುವು ಕೃಷ್ಣಯ್ಯನ |ವೇಣುನಾದದ ಧ್ವನಿ ಕೇಳದೆ ಮೆಚ್ಚವು 5ದ್ವಾರಕಿ ಕೃಷ್ಣ ನೀ ಬಾಯೆಂದು ಕರೆವೆನೊ |ತೋರುವ ಸಮಪಾದ ವಿಠಲನೆಂಬೆನೊ |ಶ್ರೀರಮಣ ವೆಂಕಟನೆಂದು ಒದರುವೆನೊ |ಶ್ರೀರಂಗಶಯನನೆಂದೆನಲ್ಲದೆ ನಿನ್ನ |ಚೋರ-ಜಾರನೆಂದೆನೆ-ಹದ್ದಿನ ಮೇಲೆ |ಏರಿ ತಿರುಗುವನೆಂದೆನೆ-ಬೆಣ್ಣೆಯ ಕದ್ದು |ಸೂರೆ ಮಾಡುವನೆಂದೆನೆ-ಕೃಷ್ಣಯ್ಯ ನೀ |ಬಾರಯ್ಯ ಬಾರದಿದ್ದರೆ ಪ್ರಾಣ ನೀಗುವೆ 6ಕಣ್ಣೆತ್ತಿ ನೋಡಿದನೆಂದೆನೆ ಕಡೆಗೋಲ |ಬೆನ್ನಲಿ ಪಿಡಿದನೆಂದೆನೆ ಹಲ್ಲಳನೂರಿ |ಮಣ್ಣ ಕಚ್ಚಲು ಬಾಯ ತೆರೆಯುವನೆಂದೆನೆ |ಮಣ್ಣ ಬೇಡಲು ನಾ ಕೊಡಲಾರೆನೆಂದೆನೆ |ಎನ್ನ ಕುತ್ತಿಗೆ ಕೊಯ್ವರೆ-ಮಾತೆಯ ಮಾತು |ಮನ್ನಿಸಿ ವನಕೆ ಪೋಪರೆ-ಬಲಭದ್ರ |ಅಣ್ಣನಿಗೆ ಮುಖವ ತೋರೆ-ಕೃಷ್ಣಯ್ಯ ನೀ |ಸಣ್ಣವನೆನ್ನದೆ ಹರಿಯ ಕೊಂಡಾಡಿದೆ 7ಎಂದ ಮಾತನು ಕೇಳುವಾ ಸಮಯ ನಾಗಿಣಿ-|ವೃಂದವೆಲ್ಲವು ತಮ್ಮ ಕಂಠಭೂಷಣರಾಗಿ |ಅಂದದ ಮೇಲುದ ಸುತ್ತಿಕೊಂಡಿರೆ ಅರ-|ವಿಂದನಾಭಾಚ್ಯತ ಕೇಶವಮುರಹರ|ಮಂದರಧರಹರಿಯೆ-ನಿನಗೆ ನಾವು |ಮಂದಾಕಿನಿಯ ಸರಿಯೆ-ಮಾಂಗಲ್ಯದ |ಚೆಂದ ಕಾಯೈ ದೊರೆಯೆ-ಹರಿಯ ಕೃಪೆ-|ಯಿಂದ ಕರೆದು ನಮ್ಮ ಕಾಯಬೇಕೆಂದರು 8ಇಂತಿಂತು ಸ್ತವನವ ಮಾಡೆ ಕಾಳಿಂಗನ |ಕಾಂತೆಯರ ಸ್ತೋತ್ರಕ್ಕೆ ಮೆಚ್ಚಿ ನಾಗನ ಬಿಟ್ಟು |ಕಂತುಕ ಸಹಿತ ಪಂಕಜನಾಳವನೆ ಕೊಂಡು |ಸಂತಸದಲಿ ಇಕ್ಕುತ-ಶೋಕದಿ ನೀವು |ಭ್ರಾಂತಿ ಬಿಡಿರಿ ಎನ್ನುತ-ಬರಿದೆ ಎಲ್ಲ |ಸಂತೆ ಕೂಡಿದೆ ಎನ್ನುತ-ನಾ ಹಸಿದೆನು |ಪಂತಿಭೋಜನ ಕೊಂಡು ನಡೆಯಿರಿ ಮನೆಗೆಂದ 9ಸುರರಿಗೆಸುಧೆಮುಂಚೆ ಉಣಿಸಿದ ಪರಬ್ರಹ್ಮ |ಪರಿಪರಿ ಭೋಜನ ಮಾಳ್ಪ ಕಂಡುವರಾರು? |ಸುರದುಂದುಭಿ ಪೊಡೆದು ಪಾರಿಜಾತದ ಮಳೆ |ಸುರಿಸಿದರಾಕ್ಷಣಕೆ-ಬ್ರಹ್ಮನು ತಾನು |ತೆರಳಿದನಾಶ್ರಮಕೆ-ಪುರಂದರವಿಠಲ |ತಿರುಗಿದ ನಿಜಧಾಮಕೆ-ಕೃಷ್ಣನ ಲೀಲೆ |ಗುರುದಯೆಯಲಿ ನಮ್ಮ ಹರಿಯ ಕೊಂಡಾಡಿದೆ 10
--------------
ಪುರಂದರದಾಸರು
ಜಯಜಯ ಶ್ರೀ ರಾಮ ನಮೋ |ಜಯ ಜಯ ಶ್ರೀ ಕೃಷ್ಣ ನಮೋ ಪ.ಸಿರಿಯರಸನು ಶೃಂಗಾರವ ಮಾಡಿ |ಸಿರಿಗಂಧವನೆ ಹಣೆಗಿಟ್ಟು ||ತರುಣ ತುಳಸಿ ವನಮಾಲೆಯ ಧರಿಸಿ |ಹರಿತುರುಕಾಯಲು ಹೊರಗೆ ಹೊರಟನು1ಹೊತ್ತು ಹೋಯಿತುತುರು ಬಿಡಿಯೆನ್ನುತ |ಸಾತ್ತ್ವತ ನುಡಿದನು ಗೋಪಿಯೊಡನೆ ||ತುತ್ತುರು ತುತ್ತುರು ತುರುತುರುಯೆನ್ನುತ |ಒತ್ತಿ ಸ್ವರಗಳನು ಪೊಂಗೊಳಲೂದುತ 2ವನಿತೆ ಸಟ್ಟುಗದೊಳು ಅಕ್ಕಿಯ ತೊಳಸಿ |ಒನಕೆಯಿಂದಓಗರ ಹದನೋಡಿ ||ಮಿನುಗುವ ಸೀರೆಯ ತಲೆಗೆ ಸುತ್ತಿಕೊಂಡು |ವನಕೆ ಹೋಗಲೆಂದು ಹೊರಗೆ ಹೊರಟಳು 3ಹರಿಸ್ವರವೆನ್ನುತ ಒಬ್ಬಳುಕೇಳಿನೆರೆಮನೆಗೆ ಹೋಗಿ ಕಡ ಕೇಳಿದಳು ||ಒರಳು ಕೊಡುವಿರಾ ಅರಸಿನ ಅರೆದು |ಮರಳಿ ಬೇಗ ತಂದೀವೆನೆನುತಲಿ 4ಹಸುವಿಗೆ ಇಟ್ಟಲು ಹಾಲುಓಗರ |ಬಿಸಿಮಡ್ಡಿಯ ಗಂಡಗೆ ಚಾಚಿ ||ಸೊಸೆಯನು ಅಟ್ಟಿಸಿ ತೊತ್ತನು ಪಾಲಿಸಿಮೊಸರ ಕಾಸಿ ಹೆಪ್ಪ ಹಾಕಿದೊಳೊಬ್ಬಳು 5ಗಿಳಿಗೆ ಹಾಸಿದಳು ಹಾಸು ಮಂಚವನು |ಅಳಿಯನ ಪಂಜರದೊಳಗಿರಿಸಿ ||ತಳಿಗೆಯಲ್ಲಿ ತಮ್ಮನ ಮಲಗಿಸಿ ತೊಟ್ಟಿ - |ಲೊಳಗೆ ಎಡೆಯನು ಮಾಡಿದಳೊಬ್ಬಳು 6ಅಟ್ಟವೆಂದು ಹತ್ತಿ ಅಗಳಿಯ ಮೇಲೇಇಟ್ಟಳು ಸಾದೆಂದು ಸಗಣಿಯನು ||ಕಟ್ಟಬಾಯಿಗೆ ಕಾಡಿಗೆಹಚ್ಚಿ |ಕೃಷ್ಣನ ಸ್ಮರಿಸುತ ಹೊರಗೆ ಹೊರಟಳು 7ಅಂಗನೆ ಚೌರಿಯು ಕಾಲಿಗೆ ತಗುಲಿಸಿ |ಮುಂಗೈಯಲಿ ತಾಳಿಯ ಬಿಗಿದು ||ಸಿಂಗರ ಸರವನು ನಡುವಿಗೆಕಟ್ಟಿ |ರಂಗನ ಸ್ಮರಿಸುತ ಹೊರಟಳೊಬ್ಬಳು 8ಕಟ್ಟಿ ಮುತ್ತಿನೋಲೆ ಮೊಣಕಾಲ್ಗಳಿಗೆ |ಗಟ್ಟಿ ಕಂಕಣವ ಕಿವಿಗಿಟ್ಟು ||ತೊಟ್ಟಿಲೊಳಗೆ ಶಿಶು ಅಳುವುದ ಕಂಡು |ಕಟ್ಟಿದ ನೆಲುವನು ತೂಗಿದಳೊಬ್ಬಳು 9ತರುಣಿಯೊಬ್ಬ ಸಂನ್ಯಾಸಿಯ ಕಂಡು |ನೆರೆಮನೆ ಕೂಸೆಂದೆತ್ತ ಬರಲು ||ಅರಿದಾವ ಗಾಳಿ ಸೋಕಿತೆನುತಲಿ |ಪುರಂದರವಿಠಲನು ನಗುತಿದ್ದನು ಸಖಿ 10
--------------
ಪುರಂದರದಾಸರು
ದಾತೆಇಂದಿರೆಪಾರಿ| ಜಾತ ಮಂದಿರೆ ಲೋಕ |ನಾಥೆ ಸುಖ ಪೂರ್ಣೆ ವಿಖ್ಯಾತೆ ||ಬಿನ್ನವಿಸುವೆನೆ ಯನ್ನಮಾತು ಮನ್ನಿಪುದೇ ವಿಧಿಮಾತೆ ಪಪಾನೀಯಧಿ ಹರಿಗೆ | ಏನು ಕೊಟ್ಟನೊ ನಿನ್ನ |ಕಾಣಿಸವೆ ಕಣ್ಣು ಕುಲವಿಲ್ಲ ||ಗೋತ್ರವಿಲ್ಲ ಹೆತ್ತವರ-ಕ್ಷೋಣಿಯೊಳಗೊಬ್ಬರರಿತಿಲ್ಲ1ಏನು ಮರುಳಾದೆವ್ವ | ಶ್ರೀನಾರಿಯಿಂಥವಗೆ |ಹೀನಳುಚ್ಛಿಷ್ಟ ಫಲಮೆದ್ದ ||ಬಡ ಬ್ರಾಹ್ಮಣೊದ್ದರೆಮಾನವೇ ಇಲ್ಲಿ ನಗುತಿದ್ದ2ಥವ ಚೋರ ಬಹುಜಾರ| ಸವತಿಯರು ಬಲು ಮಂದಿ |ಅವರಿಗಾತ್ಮಜರು ಹತ್ತತ್ತು ||ನಿನ್ನೊಗತನದೊಳಿದ್ದಅವಿವೇಕ ಮೂಲೋಕಕೆ ಗುರುತು3ಅತ್ತೆ ಮಾವಗಳಿಲ್ಲ |ವೃತ್ತಿಕ್ಷೇತ್ರಗಳಿಲ್ಲ |ಹಸಿದರನ್ನಿಲ್ಲ ಮನೆಯಲ್ಲಿ ||ಈ ಗಂಡನೊಡನೆಯೇ-ನರ್ಥಿ ಪಡುತಿಹೆಯೆ ನೀ ಬಲ್ಲೆ 4ಸೇರಿದನುಪತಿನಿನ್ನ | ತೌರು ಮನೆ ನೋಡಲ್ಕೆ |ಧಾರಿಣಿಯೊಳಗೆ ಬಹು ನಿಂದಾ ||ಭಕ್ತಿಯಿಂದವನ ಹ್ಯಾ-ಗಾರಾಧಿಸುವದೋ ಸುರವೃಂದಾ 5ಶಿಶು ಹಿಂಸಕತಿ ಕಠಿಣ | ಹಸನ್ಮುಖನಲ್ಲರ್ಭಕ ಹೆಂ- |ಗಸರಳಿದ ಪುಕ್ಕಾ ಬಹು ಠಕ್ಕಾ ||ಕಲಹಗಂಟೇನು ಸೇ-ವಿಸಿದ್ಯೊ ವ್ರತಗಳನು ಇವ ಸಿಕ್ಕಾ6ಎಲ್ಲೆಲ್ಲಿ ನೋಡಿದರು | ಇಲ್ಲಿ ಪ್ರಾಣೇಶ ವಿ- |ಠಲನಂಥವರೂ ಏನೆಂಬೆ ||ಮುದದಿಂದ ಬಿಡದೆ ಅವ-ನಲ್ಲಿ ಪೊಂದಿರ್ಪೆ ಜಗದಂಬೆ 7
--------------
ಪ್ರಾಣೇಶದಾಸರು