ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೈಯೆ ಸೈಯೆ ಸೈಯೆ ಸೈಯೆ ರುಕ್ಮಿಣಿ ಕೈ ಹೊಯಿದು ಇದಕೆ ನಗುವರೊಸೈಯೆ ಸೈಯೆ ಸತ್ಯಭಾಮೆ ಧ್ಯನನೀವೆ ನೀತಿ ಸೈಯೆ ಪ. ಮಂದ ಗಮನೆಯರ ಮಾತು ಒಂದೊಂದು ಬಲರಾಮ ಕೇಳಿ ಬಂದನು ಭಾಳ ನಗುತಲೆ ಬಂದನು ಭಾಳ ನಗುತಲೆಭಾಳೆ ಪುಣ್ಯ ಬಂದೊದಗಿತೆಂದು ಕೈ ಹೊಯಿದು ಸೈಯೆ ಸೈಯೆ 1 ಎಷ್ಟು ಉಪವಾಸ ಮಾಡಿ ಇಷ್ಟು ಸಿದ್ಧಿ ಪಡೆದೆಕಷ್ಟ ಬಟ್ಟಿದ್ದೆ ಬಹುಕಾಲ ಕಷ್ಟ ಬಟ್ಟಿದ್ದೆ ಬಹುಕಾಲ ಭೀಷ್ಮನ ಹೊಟ್ಟಿಯ ಪುಣ್ಯ ಒದಗಿತು ಸೈಯೆ ಸೈಯೆ 2 ಸತ್ಯ ಭಾಮೆಯ ಪುಣ್ಯ ಅತ್ಯಂತ ಒದಗಿತುಹಿತ್ತಲಿನ ತುಳಸಿ ಬಲು ತಾಳಹಿತ್ತಲಿನ ತುಳಸಿ ಬಲು ತಾಳ ಇದರಮ್ಯಾಲೆ ಹೆತ್ತವರ ಪುಣ್ಯ ಒದಗಿತ ಸೈಯೆ ಸೈಯೆ3 ಅರಸರ ಮಕ್ಕಳು ನಿಮಗೆ ಬಿರುಸು ಮಾತುಗಳೆಷ್ಟುಸರಸಾಡೊ ಬಗೆಯ ಅರಿಯದೆ ಸರಸಾಡೊ ಬಗೆಯ ಅರಿಯದೆ ಸಭೆಯೊಳು ಸುರಿಸೋರೆ ಇಂಥ ವಚನವ ಸೈಯೆ ಸೈಯೆ 4 ಸೊಲ್ಲು ಕೇಳರಿಯಳು ಎಲ್ಲ ವಿದ್ಯೆಯಲಿ ಕುಶಲರೆಎಲ್ಲ ವಿದ್ಯೆಯಲೆ ಕುಶಲರೆ ನೀವು ಬಲ್ಲಿರೆ ಇದರ ಬಗೆಯಲ್ಲ ಸೈಯೆ ಸೈಯೆ 5 ಬಿಡದೆ ಕೂಗುವದೆಷ್ಟು ಹೊಡೆಯೊ ಭೇರಿಗಳೆಷ್ಟುಇಂಥನುಡಿಯ ಸುಭದ್ರೆ ಅರಿಯಳುಇಂಥನುಡಿಯ ಸುಭದ್ರೆ ಅರಿಯಳುಸಭೆಯೊಳು ನುಡಿವರೆ ಇಂಥ ವಚನವ ಸೈಯೆ ಸೈಯೆ 6 ಜಾತಿಗಾರರಂತೆ ಮಾತಿಲೆ ಕುಶಲರು ಭೂತಳದೊಳಗೆ ಪ್ರತಿಯಿಲ್ಲಭೂತಳದೊಳಗೆ ಪ್ರತಿಯಿಲ್ಲ ರಾಮೇಶನ ಪ್ರೀತಿಯ ಮಡದಿಯರು ಹೌಂದ ಹೌಂದ ಸೈಯೆ ಸೈಯೆ7
--------------
ಗಲಗಲಿಅವ್ವನವರು