ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪನ್ನಗ ನಗಾಧೀಶ ಅಗಣಿತ ಗುಣಾನಂದ ಚಿದ್ಘನ ಪರೇಶ ಪ. ಜಗದ ಜೀವರಿಗೆ ಬಗೆ ಬಗೆ ವೇಷವ ತೊಡಿಸಿ ಸೊಗಸಿನಿಂದಲಿ ನೋಡಿ ನಗುತಲಿಹೆಯೊ ತ್ರಿಗುಣಮಾನಿನಿಯೊಡನೆ ಹಗಲಿರುಳು ಕ್ರೀಡಿಸುತ ಮಿಗೆ ಹರುಷದಿಂದಿರುವ ಖಗವರಧ್ವಜ ಹರಿಯೆ 1 ನಾನಾವತಾರದಲಿ ನಂಬಿದ ಸುರಾದಿಗಳಿ- ಗಾನವಾರಿಧಿಯ ಸ್ನಾನ ಮಾಡಿಸುವಿ ದೀನತ್ವದಲಿ ನಿನ್ನ ಧ್ಯಾನವೇ ಗತಿಯೆಂದು ನಾನಿದಿರು ಬಂದೆರಗೆ ಮಾನಿಸದೆ ಮರುಳಾಗಿ 2 ಅಂತರಾತ್ಮಕನಾಗಿ ಚಿಂತನಾದಿಗಳ ಬಲ ವಂತದಲಿ ನೀನೆ ಮಾಡಿಸಿದ ಮೇಲೆನ್ನ ಇಂತು ಬಳಲಿಸುವ ದುರಂತ ಮಹಿಮನೆ ನಿನಗೆ ಕಂತು ಬ್ರಹ್ಮರ ಜನಕ 3 ನಾನು ನನ್ನದು ಎಂಬ ಮಾನವಿತ್ತದರಿಂದ ಈ ನಳಿನಜಾಂಡವದೊಳು ನಾನು ಸಿಲುಕಿಹೆನು ಮಾನಾಭಿಮಾನಿಗಳ ನೀನೀವುದರಿಂದ ದೀನತನ ಕಳದು ಸನ್ಮಾನ ಪಾಲಿಸು ದೇವ 4 ತಂದೆತಾಯಿಗಳು ನಿಜ ಬಂಧುಬಳಗಗಳೆಲ್ಲ ಒಂದೊಂದು ಜನ್ಮದಲಿ ಬ್ಯಾರೆಬ್ಯಾರಹರು ಎಂದೆಂದಿಗೂ ನೀನೆ ತಂದೆ ನಿನ್ನರಸಿ ತಾ- ಯ್ಯೆಂದು ತಿಳಿಹೆನು ಮುಚಕುಂದ ರಕ್ಷಕ ಸ್ವಾಮಿ 5
--------------
ತುಪಾಕಿ ವೆಂಕಟರಮಣಾಚಾರ್ಯ