ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದರುಶನವನು ಕೊಡೆಲೊ ದೇವ ಪ ಸರಸಿಜ ಮಿತ್ರನು ಮೂಡೆ ಪ್ರಾರ್ಥಿಸುವೆನು ಅ.ಪ ತುಂಗಾ ಕೃಷ್ಣ ಕಾವೇರಿ ಗಂಗೆ ಯಮುನೆ ಗೋದಾವರಿ ನರ್ಮದಾ ಮಂಗಳ ನದಿಗಳು ಕಾದುಕೊಂಡಿರುವುವು ರಂಗ ನಿನ್ನ ಚರಣಂಗಳ ಸೇವೆಗೆ 1 ಜಗವನುದ್ಧರಿಸಿದ ಸುಂದರ ನಿನ್ನಯ ಮೊಗವನು ನೋಡುತ ಸಂಭ್ರಮದಿ ಬಗೆ ಬಗೆ ಹೈಮವಸ್ತ್ರಗಳನು ಧರಿಸುತ ನಗವೃಂದವು ಕಾದಿರುವುದು ದೇವ 2 ತರುಲತೆಗಳು ಕಾದಿರುವುದು ಪೂಮಳೆ ಗರೆಯಲು ನಿನ್ನಯ ಶಿರದಲ್ಲಿ ಪರಮಹಂಸರುಗಳು ಕರದಲಿ ಜಪಮಣಿ ಧರಿಸಿ ಜಪಿಸುವರೊ ಕರುಣಾ ಪ್ರಸನ್ನನೆ 3
--------------
ವಿದ್ಯಾಪ್ರಸನ್ನತೀರ್ಥರು