ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೊಸರು ತಂದಿನೊ ರಂಗಾ ಮಾರ್ಗವ ಬಿಡೊ | ಕಿಸರು ಹೊರಲಿ ಬೇಡ ಕೆಲಕೆ ಸಾರೋ ಪ ಪಶುಗಾವಿ ನೀ ಎನ್ನ ಹೆಸರುಗೊಳಲಿಬೇಡ | ಹಸನಾದ ಮುತ್ತಿನ ಸರಗಳು ಹರಿದಾವೊ || ನಿಶೆಯ ವೇಳೆಯು ಅಲ್ಲಾ ನಿನಗೆ ಬುದ್ಧಿಯು ಸಲ್ಲಾ | ವಶಕರವಾಗುವಳೆ ಒಲವು ಇಲ್ಲದೆ 1 ಎದೆಯ ಮುಟ್ಟಲಿ ಬೇಡ ಎಳೆನಗೆ ನಗಲಿಬೇಡ | ಬದಿಬಗಲು ಪಿಡಿದು ನೋಡುವರೆ ಹೀಗೆ || ಕಾಕು ಎಬ್ಬಿಸುವರೆ | ಸದನಕ್ಕೆ ಹೋಗಬೇಕು ಸರಸವೇಕೊ2 ಹಿಂದೆ ಬಂದವರು ಏನೆಂದು ಒಲಿದರೊ ಕಾಣೆ | ಒಂದಿಷ್ಟು ಚೆಂದವಿಲ್ಲ ಚೆಲುವಿಕೆಯಿಲ್ಲಾ || ಕಂದರ್ಪಕೋಟಿ ತೇಜ ವಿಜಯವಿಠ್ಠಲ ಎನ್ನ |ಮಂದಿರಕೆ ಬಾರೊ ನಿನ್ನ ಮನಸು ದಣಿಸುವೆ 3
--------------
ವಿಜಯದಾಸ