ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಲಕ್ಷ್ಮೀ ಸ್ತುತಿಗಳು ಅಮ್ಮಾ ನೀನೆಮ್ಮ ಮನೆಯಲಿಹುದಮ್ಮಾ ನಿತ್ಯ ಪ ನಮ್ಮಯ್ಯನೊಡನೆ ಸುಭಾಷಿಸುತಲಿ ಸಮ್ಮಾನದಿ ಮುಖದಿಂ ನಲಿದಾಡುತಾ ಅ.ಪ ಮಕ್ಕಳೆಂದೆಮ್ಮ ನಲಿಸುತ ಒಲಿಸುತ ಸಕ್ಕರೆ ಸಮಿಗುಂಮಿಗಲಹ ಮಾತುಗ ಳಕ್ಕರದಾಡುತ ಶುಭಸಂಪದಗಳ ನಕ್ರೂರಾರ್ಚಿತೆ ಕೊಡುತ ಮೋದದಿಂ 1 ನೀನಿರುವ ಮನೆಯು ಶೋಭಿಸುತಿಹುದು ತಾನೇತಾ ಮಂಗಳ ನೆಲೆಸಿಹುದು ಸಾನುರಾಗದಿಂ ಸರ್ವರ ಜನನಿಯೆ ನಾನಿನ್ನಾದರದ ಪ್ರೇಮಸುಪುತ್ರನು 2 ನಿತ್ಯಾರಾಧನೆಗನುಕೂಲಗಳಂ ಸತ್ಯಧರ್ಮಗಳ ಬಿಡದಾಚರಿಪುದ ಸ್ತುತ್ಪತದಿ ಸಮಾರಾಧನ ವೆಸಗುನವ ಅತ್ಯಾನಂದದ ಸೌಭಾಗ್ಯವಿತ್ತು 3 ಸವಿ ಸವಿಭಕ್ಷ್ಯಗಳನುಗೊಳಿಸುತ್ತ ಸುವಿಮಲ ಮಂಗಲ ದ್ರವ್ಯಸುಪುಷ್ಪವ ಸುವಾಸಿನಿಯರಿಗೂ ಸದಭಕ್ತರಿಗುಂ ಸುವರ್ಣಭಾಜನದೀಯುವುದಿತ್ತು 4 ಹಾಲು ಹಣ್ಣು ಮಧು ಮಧುರದ ಮನೆಯಂ ಶ್ರೀಯೋಗಗಾನ ಧ್ಯಾನದ ನೆಲೆಯ ಬಾಲರ ಲೀಲೆಯ ಲಾಲನ ಪಾಲನ ಕಾಲವೆಲ್ಲ ಸೊಗನಗೆ ಮೊಗನೆರೆಯಲಿ 5 ಭೃಗುಸುತೆ ಕ್ಷೀರಸಾಗರಜಾತೆ ಭಗವತಿ ಭಾಗ್ಯದಾತೆ ಅಮೃತ ಮಂಗಳಸುಂದರಿ ಚಂದ್ರಸಹೋದರಿ ಅಗಲದೆ ಹರಿವಕ್ಷಸ್ಥಲಸ್ಥಿತೇ 6 ಸುವರ್ಣವರ್ಣಿ ಕಮಲಸುಚರಣೆ ಭುವಿಸುರ ಪೂಜಿತೆ ಕಲ್ಪಲತೆ ಭವ ಭವಹಾರಿಣೆ ಭಕ್ತೊದ್ಧಾರಿಣೆ ದಿವಿರಾಜವರದೆ 7 ಶ್ರೀಕರ ಸಾತ್ವಿಕ ಸುಲಲಿತರಿಂದ ನಾಕಿಗರೆಂಬೊ ಬಂಧುಗಳೊಡನೆ ಜೋಕೆಯ ಮಕ್ಕಳ ವಿವಾಹಗೈದು ಸಾಕಾರ ಸಂಸಾರ ಸುಖನಿಧಿ ಎನಿಸು 8 ಚಪ್ಪರ ತೋರಣ ಮೇಲ್ಕಟ್ಟುಗಳಿಂ ದೊಪ್ಪುವ ಬಗೆಬಗೆ ರಂಗವಲಿಗಳಿಂ ದಿಪ್ಪಾಸಾಗರ ಮಂಗಳ ವಾದ್ಯಂಗ ಳಪ್ಪ ಸದೃಹವ ಮಾಡುತ ಮಮತೆಯಿಂ9 ಅಪ್ರತಿಮ ರತ್ನಪೀಠವನಿಟ್ಟು ತುಪ್ಪದ ನಂದಾದೀವಿಗೆ ಹಚ್ಚಿ ಅಪ್ರಮೇಯನೋಡನಿಪ್ಪ ನಿನ್ನ ಸುಪ್ರೀತಿಯೊಳಾಂ ಪೂಜಿಪುದೀಯತ 10 ಪರಿಮಳ ತೈಲದಭ್ಯಂಜನದಿಂ ಸುರಭೀತೊಯ ಸ್ನಾವನಗೈದು ಹರಿದ್ರಾಕುಂಕುಮ ರತ್ನ ಕಿರೀಟವು ಸರಪೀತಾಂಬರ ಕಮಲವ ಧರಿಸಿ 11 ನರುಗುಂಪಿನ ಶ್ರೀಗಂಧದ ಲೇಪ ಪರಿಪರಿ ಘಮ ಘಮ ಸುಗಂಧ ಧೂಪ ಪರಮ ಪ್ರಕಾಶದ ಮಂಗಳ ದೀಪ ಸಿರಿಹರಿ ನಿಮ್ಮಯ ದಿವ್ಯ ಸ್ವರೂಪ 12 ಬಗೆ ಬಗೆ ಭಕ್ಷ್ಯವು ಕ್ಷೀರಾಜ್ಯಗಳಂ ಹಗಲಿರುಳುಂ ಫಲತಾಂಬೂಲಗಳಂ ನಿಗಮ ಸ್ತುತಿಕೈಗೊಳ್ಳುತ ಪಿಯೆ ನೀ ನಗಲದೆ ಸವಿಯುತ ಸಂತೋಷದಿಂದ 13 ಜಯ ಜಯ ಕರ್ಪೂರಾರತಿಮಾತೆ ನಯದಿಂ ಕುಸುಮಾಂಜಲಿಯಖ್ಯಾತೆ ದಯೆಯಿಂ ಭಾವಭಯ ಹರಿಸಾಪೂತೆ ಜಯ ಜಯ ಶ್ರೀಕೇಶವ ಸಂಪ್ರೀತೆ 14 ವಿಧಿರಮಾತೇ ಶ್ರೋಣಿತ ಚರಿತೆ ಬುಧಜನಪಾಲೆ ಕೃಪಾಲಪಾಲೆ ಮುದದಿಂ ಪಾಲಿಸು ಬಾಳಿನಲಿಡುತೆ ಹೃದಯನ್ನುತೆ ಜಾಜೀಶ ಸಹಿತೆ 15 ಅಗಣಿತ ಸುಗುಣೆ ಕರುಣಾಭರಣೆ ಜಗದೋದ್ಧಾರೆ ಜಯಜಯತಾರೆ ಯುಗಪದಕೀಗಲೆ ಮುಡಿಯಿಟ್ಟಿರುವೆ ಮಗುವಾದೆನ್ನಂ ಮಡಿಲೊಳಗಿಡು ನೀಂ 16
--------------
ಶಾಮಶರ್ಮರು
ಇಂದಿರಾರಮಣನ ಮಂದಿರದಲ್ಲೆ ನಾ- ರಂದ ತಾ ಬರುತಿರಲು ಕಂಡು ಕೃಷ್ಣನು ಕರೆತಂದು ಮನ್ನಿಸಿ ಬಂದಕಾರಣವೇನೆಂದನು 1 ಕಾರಣವೇನುಂಟು ಕಾರಣಪುರುಷನ ಕಾಣಬೇಕೆಂದೆನುತ ಕಾಮಿಸಿಬಂದೆನೊ ಕೊರಳ ತುಳಸಿ ಮಾಲೆ ನೀಡೊ ನೀ ಎನಗೆಂದನು2 ಏನು ಬೇಡಿದರು ನಾ ಕÉೂಡುವೆನು ನಾರಂದ ಪ್ರಾಣಪದಕ ತುಳಸಿ ನೀಡಲಾರೆನೊ ಮುತ್ತಿನ್ಹಾರವ ಕೊಡುವೆ- ನೆಂದು ಹೇಳುತಿದ್ದನು ಹರಿಯು 3 ನೀಡದಿದ್ದರೆ ನಾನು ಬೇಡಿ ಬಿಡುವನಲ್ಲ ನೋಡಿಕೋಯೆಂದೆನುತ ಆಡಿದ ಮಾತು ತಪ್ಪುವರುಂಟೆ ಶ್ರೀಕೃಷ್ಣ ಹೋಗಿಬರುವೆನೆಂದನು 4 ಸತ್ಯಭಾಮೆಯ ಮನೆ ಹೊಕ್ಕನು ನಾರಂದ ಹೆತ್ತಮ್ಮ ಕೇಳೆನುತ ಸುತ್ತಿಬಂದೆನು ಸುರಲೋಕದ ವಾರ್ತೆಯ ವಿಸ್ತರಿಸ್ಹೇಳುವೆನು 5 ಇಂದ್ರಲೋಕದಲಿ ದೇವೇಂದ್ರ ಶಚಿಯ ಕೂಡ್ಯಾ ನಂದದಿ ಕುಳಿತಿದ್ದನೆ ಅ- ಲ್ಲಿಂದ ಕೈಲಾಸ ಮಾರುದ್ರ ಪಾರ್ವತಿದೇವಿ ಚೆಂದವನ್ವರಣಿಸಲೆ 6 ಸತ್ಯಲೋಕದಿ ಸರಸ್ವತಿ ಕೂಡಿ ಬ್ರಹ್ಮ ಭಾ ಳುತ್ಸವದಿಂದಿದ್ದನೆ ಹಸ್ತಿನಾವತಿಯ ಪಾಂಡವರು ದ್ರೌಪದಿದೇವಿ ಅರ್ಥಿಯ ನೋಡಿ ಬಂದೆ 7 ದ್ವಾರಾವತಿಗೆ ಬಂದೆ ದೇವಿ ನಿಮ್ಮರಸನು ನಾರಿ ರುಕ್ಮಿಣಿ ಸಹಿತ ಭಾಳ ಸಂಭ್ರಮದಿಂದ ಕುಳಿತಿದ್ದ ಕಣ್ಹಬ್ಬವಾಗಿ ನಾ ಬಂದೆನಿಲ್ಲೆ 8 ಕರೆದು ರುಕ್ಮಿಣಿ ಕರದಿಂದೆ ಆಲಂಗಿಸಿ ತೊಡೆಯಮ್ಯಾಲಿಟ್ಟಿದ್ದನೆ ಅರಳುಮಲ್ಲಿಗೆ ತುರುವಿ(ಬೀ) ನಲ್ಲಿಟ್ಟು ನಿನಗಿನ್ನು ಸರಿಯಿಲ್ಲವೆಂತೆಂಬನೆ 9 ಹಾರಪದಕ ಇಬ್ಬರಿಟ್ಟಾಭರಣ ಬ್ಯಾರೆ ಬ್ಯಾರಾಗಿ ತೋರವಲ್ಲೆ ಸೂರ್ಯಚಂದ್ರರು ಕೂಡಿದಂಥ ಮುಖವು ನೋಡಿ ನಾ ಬೆರಗಾಗಿದ್ದೆನೆ 10 ಸತ್ಯಭಾಮೆಯೆ ನಿನ್ನ ಹೆತ್ತ ತಾಯಿತಂದೆ ಮಿರ್ತಾಗಿದ್ದರೆ ನಿನಗೆ ಕೊಟ್ಟರೀ ಕಪಟನಾಟಕ ದಯಹೀನಗಿ- ನ್ನೆಷ್ಟು ನಾ ಸೈರಿಸಲೆ 11 ಒಂದೊಂದು ಗುಣಗಳ ವರಣಿಸಲಿಕ್ಕೆ ಹ ನ್ನೊಂದೊ (ದ್ವ?) ರುಷವು ಸಾಲದೆ ಕಂಡು ಬಂದ್ವಾರ್ತೆಯ ಖರೆಯ ನಾ ಹೇಳುವೆ ಸಂದೇಹ ಮಾಡದಿರೆ 12 ಕೇಳಿ ಸತ್ಯಭಾಮೆ ತಾಳಲಾರದೆ ಮುನಿ ಪಾದದ ಮ್ಯಾಲೆ ಬಿದ್ದು ಹೇಳಿ ಉಪಾಯ ಮುಂದಕೆ ಪೋಗೊ ಶ್ರೀ- ಕೃಷ್ಣ ತಾನೊಲಿದಿರುವಂದದಿ13 ದಾನವಾಂತಕÀನ ನೀ ದಾನವÀ ಮಾಡಲು ದಾವಜನ್ಮಕÀು ನಿನ್ನನು ತಾನಗಲದೆ ಮುಂದೆ ಸೇರಿಕೊಂಡಿರುವೊ ಉಪಾಯ ಹೇಳುವೆನೆಂದನು 14 ರಂಗರಾಯನ ಕರೆತಂದುಕೊಟ್ಟವರಿಗೆ ಹಿಂಗದೆ ಸೌಭಾಗ್ಯವ ಎಂದೆಂದಿಗವರ ರಕ್ಷಿಸುವೋನೆಂದೆನುತಲಿ ಅಂಗನೆಯರನಟ್ಟಿದಳು 15 ದೂತೇರ ಸಹಿತಾಗಿ ಬಂದು ತಾ ಭರದಿಂದೆ ಪ್ರೀತಿಲೆ ಸತ್ಯಭಾಮ ಮಾತುಳಾಂತಕ ನಮ್ಮ ಮನೆಗೆ ಬಾರೆನುತ ಶ್ರೀ- ನಾಥನೆಯೇಳೆಂದಳು16 ಮಡದಿ ರುಕ್ಮಿಣಿ ಭಾಮೆ ಮಂದಿರಕ್ಕೊ ್ಹೀಗುವೆ ಕಡುಕೋಪ ಮಾಡದಿರೆ ತಡೆಯದೆ ನಾಳೆ ಬರುವೆನೆಂದು ಶ್ರೀಕೃಷ್ಣ ಗ- ರುಡನ ಹೆಗಲೇರಿದ 17 ವಾರಕಾಂತೆಯರು ಬಾಜಾರ ಮಧ್ಯದಿ ಸೋಳಸಾವಿರ ಸತಿಯರನೆ ವಾರೆನೋಟದಿ ನೋಡಿ ನಗುತ ಸತ್ಯಭಾಮೆ ಬಾಗಿಲ ಮುಂದಿಳಿದ 18 ಎದುರಿಗೆ ನಿಂತು ತಾ ಚೆದುರೆ ಸತ್ಯಭಾಮೆ ಪದುಮ ಪಾದಕೆ ಎರಗಿ ಮುದದಿಂದ ಮುದ್ದು ಶ್ರೀಕೃಷ್ಣನ ಮುಂಗೈಯ್ಯ ಪಿಡಿದು ತಾ ನಡೆದಳಾಗ 19 ಕೃಷ್ಣರಾಯನೆ ನಿನ್ನ ಕೊಟ್ಟೇನು ದಾ ನವ ಬಿಟ್ಟೆನ್ನ ಅಗಲದಂತೆ ಸತ್ಯಭಾಮೆಯ ನೋಡಿ ನಗುತ ಈ ಕಾರ್ಯ ಅ- ಗತ್ಯಮಾಡೆಂದೆನುತ 20 ಎರೆದು ಪೀತಾಂಬರವುಡಿಸಿ ಮಾಣ Âಕ್ಯದ ಆ- ಭರಣವ ತಂದಿಟ್ಟಳು ತರಿಸಿ ತಾಂಬೂಲ ದಕ್ಷಿಣೆಯನ್ನು ಬ್ರಾಂಬರ ಕÀರೆಸಿದಳಾಕ್ಷಣದಿ 21 ಆಚಾರ್ಯ ನೀವ್ ಬನ್ನಿ ವಾಸುದೇವನ ದಾನ ಈ ಕ್ಷಣದಲ್ಲೆ ಕೊಡುವೆ ನಾಶರಹಿತ ನಮ್ಮ ಮನೆಯೊಳಗಿರಲಿಕ್ಕೆ ಗ್ರಾಚಾರವೇನೆಂದರು 22 ವಿದ್ಯಾರ್ಥಿಗಳು ಬನ್ನಿ ಮುದ್ದು ಶ್ರೀಕೃಷ್ಣನ ವಿಧ್ಯುಕ್ತದಲಿ ಕೊಡುವೆ ಮೂರ್ಜಗದೊಡೆಯ ತಾ ಮಂದಭಾಗ್ಯರ ಮನೇಲಿದ್ದಾನ್ಯಾತಕೆ ಎಂದಾರೆ 23 ಭಟ್ಟರೆ ನೀವ್ ಬನ್ನಿ ಸೃಷ್ಟಿಪತಿಯ ದಾನ ಕೊಟ್ಟು ಬಿಡುವೆನೆಂದಳು ಅಷ್ಟದರಿದ್ರರಿಗಾಲಕ್ಷ್ಮೀವಲ್ಲಭ ದಕ್ಕುವೋನಲ್ಲೆಂದರು 24 ಯತಿಗಳೆ ನೀವ್ ಬನ್ನಿ ಪೃಥಿವಿಗೊಡೆಯ (ನನು) ಹಿತದಿ ದಾನವ ಕೊಡುವೆ ಗತಿಯಿಲ್ಲ ನಮಗೆ ಶ್ರೀಪತಿ ಸಲಹÀಲು ನಿನ್ನ ಪತಿ ಬ್ಯಾಡ ನಮಗೆಂದರು&
--------------
ಹರಪನಹಳ್ಳಿಭೀಮವ್ವ
ಇನ್ನೆಷ್ಟು ಹರಿಮಹಿಮೆ ಬಣ್ಣಿಸ್ಹೇಳಲಿ ನಿನಗೆ ನಿನ್ನೊಳು ನೀ ತಿಳಿದು ಧನ್ಯಾನಾಗೆಲೊ ಮನಸೆ ಪ ತನ್ನನ್ನು ಭಜಿಪರ ತನ್ನಂತೆ ನೋಡುವ ಉನ್ನತ ಕರುಣ್ಯೆಂದು ಚೆನ್ನಾಗಿ ನೆರೆನಂಬಿ 1 ಮೊರೆಯಿಟ್ಟು ಬೇಡುವ ಚರಣದಾಸರನಗಲಿ ಅರೆಗಳಿಗೆಯಿರ ಹರಿ ಚರಣಕ್ಕೆ ಮರೆಬೀಳು 2 ನಂಬಿದ ಭಕುತರ ಚರಣದಾಸರನಗಲಿ ನಂಬಿ ನೀ ನಗಲದೆ ಗುಂಭದಿಂ ಸ್ಮರಿಸೆಲೊ 3 ಮಾನವು ಪೋದರೇನು ಹಾನಿಯೊದಗಿದರೇನು ಪ್ರಾಣಪೋದರು ಹರಿಧ್ಯಾನ ಮರೆಯದಿರು 4 ನಾಶವಿಲ್ಲದೆ ತನ್ನ ದಾಸರ ಕಾಯ್ವನನು ಮೇಷ ಶ್ರೀರಾಮಪಾದ ಧ್ಯಾಸದೊಳಿಡು ಗಟ್ಟಿ 5
--------------
ರಾಮದಾಸರು
ನಾರಸಿಂಹ ನಾರಸಿಂಹ ನಾರಸಿಂಹ ಪ ನಿತ್ಯದಲಿ ಬರುವ ಅಪಮೃತ್ಯುವಿನ ಬಾಧೆಯ ಕೃತ್ತಿ ಒತ್ತಿ ಪರಿಹರಿಸಿ ಭೃತ್ಯನಾದ ಜೀವನ್ನ ತೃಪ್ತಿಪಡಿಸುವ ದೇವ ಭಕ್ತವತ್ಸಲ ನಾರಸಿಂಹ 1 ಅಂದು ಸ್ವಪ್ನದಿ ಬಂದೆ ದ್ವಂದ್ವ ಪಾದಕ್ಕೆರಗಿ ನಿಂದು ನಾ ನಿನ್ನ ಬೇಡೆ ಸಂಧಿಸಿ ಕ್ರೂರ ದೃಷ್ಟಿಯಿಂದ ನೋಡಿ ಮಂದೀಗೆ ಕುಂದು ಮಾಡಬ್ಯಾಡೆಂದೆ 2 ಅಂದಿನಾರಭ್ಯ ಬಲು ಬಂಧನಕೆ ಸಿಲ್ಕಿ ನಾ ಪರಿ ಪೇಳಲಾರೆ ಹಿಂದಿನ ಅಘವೆಣಿಸದೆ ಬಂದು ನಾರಿ ಸಹಿತ ತಂದೆ ಈ ಸುತನ ಕಾಯೋ 3 ತಂದೆ ತಾಯಿಯು ನೀನೆ ಬಂಧು ಬಳಗವು ನೀನೆ ಎಂದು ಎನ್ನಗಲದೆ ಬಂದು ನೆಲಸೆನ್ನಲ್ಲಿ ಅe್ಞÁನ ಕೊಡದಿರು ವಂದಿಸುವೆನು ನಾರಸಿಂಹ 4 ಮುಂದಾದರು ಹೃನ್ಮಂದಿರದಿ ನೆಲೆಗೊಂಡು ಸಂದರ್ಶನವನೀಯೊ ದೇವ ಕಂದರ್ಪಹರ ವಿಜಯ ರಾಮಚಂದ್ರವಿಠಲರೇಯ ವಂದೆ ಭಕ್ತಿಯ ಪಾಲಿಸು 5
--------------
ವಿಜಯ ರಾಮಚಂದ್ರವಿಠಲ
ಪರಮಾನಂದದೊಳಿರುವ ಪರಿಯನರಿ ಗರುವ ಬೇಡ ಹೇ ಮನಸಾ ಪ ಸಿರಿವರ ನಾರಾಯಣ ನಾಮಾಮೃತ ನರಘಳಿಗೆಯು ಮರೆಯದೆ ನೆನೆ ಮನಸಾಅ.ಪ ಇಂದಿರೆಯರಸನ ಸುಂದರ ಚರಣಗ ಳಂದದ ಶ್ರೀ ತುಳಸಿಯ ದಳದಿ ಚಂದದೊಳರ್ಚಿಸಿ ಕುಂದದ ಭಕುತಿಯೊಳಾ ನಂದದೊಳಿರು ಹೇ ಮನಸಾ 1 ಸಿರಿ ರಾಮನ ಮಂಗಳ ಮೂರ್ತಿಯ ಘನ ಕೊರಳೊಳು ಹಾರಗಳರ್ಪಿಸುತ ಪರಿಪರಿ ಪರಿಮಳ ಪುಷ್ಪಗಳಿಂದಲಿ ಕರುಣಾಕರನನರ್ಚಿಸು ಮನಸಾ2 ಸರ್ವಾಂತರ್ಗತ ಜಗದುದರನ ನೀ ನಿರ್ಮಲ ಪೀಠದಿ ಕುಳ್ಳಿರಿಸಿ ಸರ್ವಷಡ್ರಸೋಪೇತ ಸುಭೋಜನ ಸರ್ವಾತ್ಮನಿಗರ್ಪಿಸು ಮನಸಾ 3 ಸುಫಲ ಕ್ಷೀರ ತಾಂಬೂಲಗಳರ್ಪಿಸಿ ಸಫಲಗೊಳಿಸು ಜನ್ಮವ ಮನಸಾ ಅಪಾರಮಹಿಮನ ಗುಣಗಳ ಕೀರ್ತಿಸಿ ಕೃಪಾನಿಧಿಯ ನಮಿಸೆಲೊ ಮನಸಾ 4 ಅಗಣಿತ ಮಹಿಮನಿಗಾರ್ತಿಗಳರ್ಪಿಸಿ ಮಿಗೆ ಭಕ್ತಿಲಿ ನಮಿಸೆಲೊ ಮನಸಾ ಸುಗುಣಮಣಿಯು ರಘುರಾಮವಿಠಲ ನಿ ನ್ನಗಲದೆ ಹೃದಯದಲಿಹ ಮನಸಾ5
--------------
ರಘುರಾಮವಿಠಲದಾಸರು
ಹಾಕುವೆ ಸುಮಾಲಾ ಸುಶೀಲಾ ಜೀವದೊಡೆಯ ಪರದೇವತೆ ನೀನೆಂಬೊ ಭಾವಕುಸುಮ ಭಕ್ತಿ ಸೂತ್ರದಿ ಬಂಧಿಸಿ 1 ಸರಸಿಜನಾಭನೆ ಸುರದೊಡೆಯನೆ ನೀ ವಿರಚಿಸಿದಂಥ ಪರಿಮಳ ಹಾರುವ ಸರುವ ಹಾರವ ತಂದು ಕೊರಳಿಗೆ ಹಾಕುವೆ 2 ಶಾಮಸುಂದರ ನಿಮ್ಮ ನೇಮದಿ ನಡೆವೆ ನಾ ಭಾಮೆಯನಗಲದೆ ಪ್ರೇಮದಿ ಪೊರೆಯೆಂದು 3
--------------
ಶಾಮಸುಂದರ ವಿಠಲ
ಹಾಕುವೆ ಸುಮಾಲಾ ಸುಶೀಲಾ ಸ್ವೀಕರಿಸೈ ಕರುಣಾಕರ ಕಂಠದಿ ಪ ಅರಳಿದ ಮಲ್ಲಿಗೆ ಸುರಸು ಶಾವಂತಿಗೆ ಪರಿಮಳ ಪುಷ್ಪದ ಸರವನು ಶಾವಂತಿಗೆ ಪರಿಮಳ ಪುಷ್ಪದ ಸರವನು ವಿರಚಿಸಿ 1 ಜೀವದೊಡೆಯ ಪರದೇವತೆ ನೀನೆಂಬೊ ಭಾವಕುಸುಮ ಭಕ್ತಿ ಸೂತ್ರದಿ ಬಂಧಿಸಿ 2 ಶಾಮಸುಂದರ ನಿನ್ನ ನೇಮದಿ ನೆನೆವೆನು ಭಾಮೆಯನಗಲದೆ ಪ್ರೇಮದಿ ಪೊರೆ ಎಂದು 3
--------------
ಶಾಮಸುಂದರ ವಿಠಲ