ಶ್ರೀ ವ್ಯಾಸರಾಜರು
ಏಸು ಮಹಿಮ ನೋಡೋ | ಶ್ರೀ ವ್ಯಾಸಮುನಿಯು ತಾನೂ ಪ
ದಾಸಜನರ ಹೃದ್ದೊದ್ದೋಷ ಕಳೆದು ಸಂ | ತೋಷ ಕೊಡುವ ದೊರೆ ಅ.ಪ.
ರಾಮಾಚಾರ್ಯರ ಗೃಹದಿ | ಭೂಮಿ ಸೋಕದೆ ಪುಟ್ಟಿಪ್ರೇಮದಿಂದಲಿ ಪುರು | ಷೋತ್ಮ ತೀರ್ಥರ ಗುಹದಿಯಾಮ ಯಾಮಕೆ ಪಾಲು | ಆಮಹಾಮುನಿ ಕೂಡೆಸೀಮೆ ಮೀರಿದ ತೇಜ | ಕೋಮಲ ಕಾಯನು 1
ಪೂರ್ಣ ಬೋಧರ ಪೀಠ | ಬ್ರಹ್ಮಣ್ಯರಿಂಗೊಂಡುಭವಾರ್ಣ ತಾರಿಸುವಂಥ | ನ್ಯಾಯ ಗ್ರಂಥವ ಮಾಡಿಕರ್ಣ ರಹಿತನ ಸುಶಯ್ಯನ ಮಾಡಿಕೊಂಡಅರ್ಣ ಸಂಪ್ರತಿಪಾದ್ಯ | ಕೃಷ್ಣನ್ನ ಮೆರೆಸೀದ 2
ಸುಜನ ಕುಮುದ ಚಂದ್ರ | ನಿಜಭಕ್ತ ಪರಿಪಾಲ ಪರಿವ್ರಾಜಾಕಾಚಾರ್ಯ | ವಿಜಯ ನಗರಿಲಿ ನೆಲೆಸೀಅಜನನಯ್ಯನ ನಾಮ | ಭಜನೆ ಪ್ರಾಕೃತದೊಳುನಿಜಜನ ಕೊರೆಯುತ | ಅಜೇಯನೆನಿಸಿದಂಥ 3
ಮಿಥ್ಯಾಮತವಗೆದ್ದು | ತಥ್ಯಾವು ಜಗವೆಂದುಸ್ತುತ ಶ್ರೀಹರಿಯ ಸರ್ವೋತ್ತುಮನೆನುತಸತ್ಯವು ಪಂಚ ಭೇದ | ನಿತ್ಯವು ತಾರತಮ್ಯಭೃತ್ಯರು ಬ್ರಹ್ಮ ದೇವತೆಗಳೆಂದೊರೆದ 4
ಪುರಂದರ | ದಾಸರೆಂದೆನಿಸೀದ 5
ಅಹಿಪರ್ವತಾಧೀಶ | ಅಹಿತಲ್ಪನ್ನಾಸೇವೆವಿಹಿತದಿ ದ್ವಿಷಡಾಬ್ದ | ಬಹುಗೈದು ಅರಸಿನಕುಹುಯೋಗವಾರಿಸಿ | ಮಹಿಯ ಸುರರಿಗೆಲ್ಲಸಹಸ್ರಾರು ಗ್ರಾಮಗಳ್ | ಜಹಗೀರುಗಳನಿತ್ತ 6
ಛಂದದಿಂದಲಿ ನವ | ವೃಂದಾವನಕೆ ಬಂದುವೃಂದಾವನದಿ ನಿಂದು | ಇಂದೀವರಾಕ್ಷನುನಂದ ಕಂದ ಗುರು ಗೋ | ವಿಂದ ವಿಠಲನ ಹೃನ್‍ಮಂದಿರದಲಿ ನೋಡಿ | ನಂದವ ಪಡುತಿರ್ಪ7