ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಪುದು ನಯನಗಳ ನಾಲಿಗೆಯ ನೀನು ಶ್ರೀಲೋಲ ಸಾರ್ವಭೌಮನೇ ಪ ನೀಲಮೇಘಶ್ಯಾಮ ಬೇಲಾಪುರಾಧೀಶ ಶೀಲ ಅಚ್ಚುತದಾಸಗೆ ಸ್ವಾಮಿ ಅ.ಪ ಪರಮಪದನಾಥ ಇಂದಿರೆಯರಸ ಸಕಲ ನಿ ರ್ಜರರು ಪೂಜಿಸುವಂಘ್ರಿಯಾ [ವರ]ನೇಮದಿಂ ಪಾಡೀ ಆಡೀ ದುರಿತಭವ ಶರಧಿಯಾ ಪಿರಿದು ದಾಟುವೆನೆಂದು ಭರದೊಳೈದಿದವಗಾ ಶ್ಚರ್ಯದಾಪತ್ತಡಸಿತ್ತೇ ಸ್ವಾಮಿ 1 ಹಿಂದೆ ಮಾಡಿದ ಕರ್ಮವೆಂಬದಕೆ ಜನನವಾದು ದಿಂದು ಊನನಲ್ಲಾ ಪೊಂದಲೀ ನಗರವನು ಪೋಗಲಾಕ್ಷಣದಿ ವಾಗ್ಬಂಧವತ್ವವೆರೆಡು ಮುಂದಕಡಿಯಿಡಲು ಇಂದಿನದೊಲಚ್ಚುತನ ದಾಸ ನಂದವಳಿದುಬ್ಬಸದೊಳು ಇಂದು ನೀ ಸಲಹಿದಡೆ ಪೂರ್ವಾರ್ಜಿತ ಕರ್ಮ ವೃಂದಗಳು ನಿಂದಿರುವವೆ ಸ್ವಾಮಿ 2 ಮನುಜ ಮಾಡಿದ ಪಾತಕಗಳನು ಎಣಿಸುವಡೆ ಘಣಿರಾಜಗಳವಡುವುದೇ ಗುಣ ತರಂಗಿಣಿಯೆ ದುರ್ಗುಣಗಳೆಣಿಸಲು ಶ ರಣಜನರೊಳೇಂಪುರುಳಿರುವುದೇ ಚಿನುಮಯನೆ ಭಕ್ತವತ್ಸಲನೆ ಅಚ್ಚುತz ಸನವಗುಣಗಳನೀ ಮರೆದು ಗುಣನಿಧಿಯೆ ಚೈತನ್ಯವಿತ್ತುಳುಹೆ ಬೇಗ ನಾ ಧನ್ಯನೆಲೊ ವೈಕುಂಠರಮಣಾ 3
--------------
ಬೇಲೂರು ವೈಕುಂಠದಾಸರು
ಭೀಮಾ ಹೋ ಭಲಾರೆ ನಿಸ್ಸೀಮ ಹೋ ಭಾಪುರೆ ಹನುಮ ಹೋ ಪ. ನಿಜಜಿತಕಾಮ ಹೋ ಕಾರುಣ್ಯಧಾಮ ಹೋ ರಾಮಚಂದ್ರನ ಚರಣಕಮಲಸರಾಮ ಕಾರ್ಯಧುರಂಧರನೆ ಅ.ಪ. ಆಂಜನೇಯ ಸುಕುಮಾರ ಅದ್ಭುತಮಹಿಮ ರಾಮ[ನ] ದೂತನೆ ಅಂಜದುದಧಿಯ ದಾಟಿ ಅಸುರನ[ವ] ನವ ಕಿತ್ತನೆ ಕಂಜಮುಖಿ ಜಾನಕಿಗೆ ಮುದ್ರೆಯನಿತ್ತ ಬಲುಪ್ರಖ್ಯಾತನೆ ಮಾಡಿಸಿದೆ ಕಲಿ 1 ಅವನಿತನುಜೆಯ ಚೂಡಾರತ್ನವ ಅಂಬುಜಾಕ್ಷನಿಗಿತ್ತನೆ ಸಮರಕನುಕೂಲವೆಂದು ರಾಮಗೆ ಸುಗ್ರೀವನ ಕಾಣಿಸಿದನೆ ಕಮಲನಾಭನ ಆಜ್ಞೆಯಿಂದಲಿ ಕಪಿಬಲವ ಕೂಡಿಸಿದನೆ ಬಹುಪರಾಕ್ರಮಿಯಹುದಹುದೊ ಕಲಿ 2 ಅಗಳುಸಾಗರ ಮಧ್ಯದಲ್ಲಿಹ ನಗರವನು ಬಂದು ಮುತ್ತಿದೆ ಬಗೆದು ಕಲ್ಮರಗುಂಡಿನಿಂದಲಿ ವಿಗಡದೈತ್ಯರ ಮಡುಹಿದೆ ಬಗೆಬಗೆ ಮಯಾಜಾಲವನು ಗೆದ್ದು ಭರದೊಳದ್ರಿಯ ತುಡುಕಿದೆ ಜಗತ್ಪತಿಯ ಮೂರ್ಬಲವನೆಲ್ಲವ ಸಂಜೀವನವ ತಂದುಳುಹಿದೆ 3 ಪೃಥ್ವಿಯೊಳಗುದ್ದಂಡ ದೈತ್ಯರ ಸುತ ಸಹೋದರರ ಮಡುಹಿದೆ ಹತವ ಮಾಡಿ ಶ್ರೀರಾಮ ಬಾಣದಿ ಹತ್ತು ತಲೆಗಳ ಕೆಡಹಿದೆ ಪ್ರತಿಶತೇಶ್ವರ ಶ್ರೀರಮಣಿಯನ್ನು ತಂದು ರಾಘವಗೆ ಒಡಗೂಡಿಸಿದೆ ಮಾಡಿಸಿದೆ ಕಲಿ 4 ಕುಂಡಲ ಚಾರು ಯಜÉ್ಞೂೀಪವೀತನೆ ಸೂರ್ಯಚಂದ್ರಮರುಳ್ಳನಖ ವಜ್ರಕಾಯದಲಿ ನಿರ್ಭೀತನೆ ವೀರಕದನಕಠೋರ ರಾಣಿಬೆನ್ನೂರ ಬಯಲಾಂಜನೇಯನೆನೀರಜಾಕ್ಷನ ಹೆಳವನಕಟ್ಟೆರಂಗನ ಪ್ರಿಯದಾಸನೆ ಕಲಿ 5
--------------
ಹೆಳವನಕಟ್ಟೆ ಗಿರಿಯಮ್ಮ
ಭಾರತೀರಮಣ ನಂಬಿದೆ ಪಾದವಾರಿಜಾಕರುಣಾ ವಾರಿಧೆ ಯನ್ನನು |ದೂರ ನೋಡದೆ ನಿನ್ನ ಸಾರೆಗರೆದುಭಯ ನಿವಾರಿಸಿ ಸಲಹೋ ಪನೀಲಲೋಹಿತನ ಪಿತನೇ ಗೋಪಾಲನ ಸುತಾ |ಕಾಳಕೂಟ ಪಾನಿ ವಿಶಾಲಾಂಬಕಾ ಮಾರರಿಂದ ||ವೇಳೆ ವೇಳೆಗಳಲ್ಲಿ ವೋಲಗವ ಕೈಕೊಂಬುವ |ಕಾಳೀವಲ್ಲಭಭೇಶಭಾಸ್ಕರರೋಲು ಸನ್ನಿಭ ||ಈ ಲೌಕಿಕ ನರರಾಲಯ ಕಾಯಿಸದೆ |ವಾಲಯ ಸುಮತಿಯ ಪಾಲಿಪುದೊಲಿದು 1ಜಾನಕೀಪತಿ ಸೇವೆ ಮಾಡಿದೈ ಕಾಣೆನೋಪ್ರತಿ|ಯಾ ನಿನಗಾರಾರಾ ಭುವನದೊಳಗೆ ಗಂಧವಹನೆ ||ಮುದ್ರಿಯ ಕೊಂಡು ಕ್ಷಣದೊಳಗೆ ಜಲಧಿಯನ್ನೆ ಹಾರಿದೆ |ಸೀತೆಗುಂಗುರವನ್ನೆ ತೋರಿದೆ ||ಆ ನಗರವನು ದಹನಗೈಸಿ ಬಹು |ದಾನವರನಳಿದು ದಶಾನನನೊದ್ದೆ 2ಪಾಪದೂರನೆ ವೃಕೋದರ ಶ್ರೀ ದ್ರೌಪದೀಶನೇ |ವಿಪಿನಚರಿಸಿ ಕುರುಪತಿಯ ತರಿದು ||ಕ್ಷಿತಿಪರನ್ನು ಬಿಡಿಸಿದೆಯೈ ಪಾಂಡವರ (ಪರಿ) ಪಾಲಕ |ಕೋಪನಾಶನ ಉದ್ಧರಿಸೆನ್ನ ಚಾಪಭಂಜನ ||ಶ್ರೀಪತಿ ದ್ವಯ ಪದ ಆಪಜ ಭಜಿಸುವ |ನೇ ಪರಮೇಷ್ಠಿಯರೂಪಗುಣಾಢ್ಯ 3ದೇಶಿಕೋತ್ತಮ ಮಾರುತಿ ಇಂದಿರೇಶನ ಪ್ರೇಮ |ಸಂಪಾದಿಸಿಕೊಂಡತಿಶಯ ಭಕುತಿಯಿಂದಲೀ ಸಮೀಚೀನವಾಗಿ ||ತ್ರಿಂಶತಿ ಸಪ್ತ ಸಂಖ್ಯಾ ದರುಶನ ಗ್ರಂಥ ವಿರಚಿಸಿ ದು |ರ್ಭಾಷ್ಯವ ಸಂತರಾ ಸಲಹುವರನಾಭಾಸ ಮಾಡಿದೆ ||ವ್ಯಾಸಭಜಕ ನಿನ್ನ ದಾಸನೆನಿಸಿಕೊಳ್ಳೋ4ಅಂಜನಾಸುತ ಪ್ರಾಣೇಶ ವಿಠಲನೆಂಜಲನೊಯ್ಯುತ |ಭುಂಜಿಸಿದಿಯಲೊನಿರಂಜನಕಪಿ ಪ್ರ- ||ಭಂಜನಕೊಡು ಕೃತಾಂಜಲಿಯಿಂ ಬೇಡುವೆ |ಕಂಜನಾಭನ ಸ್ಮರಣೆ ದಿವಾ ಸಂಜೆಯಲಿಘನ||ಪುಂಜ ಸುಗುಣಮಣಿ ಮಂಜರಿ ಅರ್ಥ ಪ- |ರಂಜಳ ತಿಳಿಸೋ ಧನಂಜಯ ರಕ್ಷ 5
--------------
ಪ್ರಾಣೇಶದಾಸರು