ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವ್ಯಾಸಾ ಬದರಿ ನಿವಾಸಾ | ಎನ್ನಯ | ಕ್ಲೇಶ ನಾಶನಗೈಸು ಮೌನೀಶಾ | ಸಾಸಿರ ಮಹಿಮನೆ | ದೋಷರಹಿತ ಸುರ ಭೂಸುರ ಪರಿಪಾಲ ಶಾಶ್ವತ ವೇದ ಪ ಸತ್ಯವತಿ ವರಸೂನು ಭವತಿಮಿರ ಭಾನು | ಭೃತ್ಯವರ್ಗದ ಸುರಧೇನು | ಸತ್ಯಮೂರುತಿಯೆ ನೀನು | ಸ್ತುತಿಪೆ ನಾನು || ಹೊತ್ತು ಹೊತ್ತಿಗೆ ಸೂಸುತ್ತಿರಲೆನಗದು | ಅತ್ಯಂತ ಸುಖತರ | ಸುತ್ತವ ಸುಳಿಯೆಂದೆತ್ತಿ ಕಡೆಗೆಯಿಡು | ಎತ್ತ ನೋಡಲು ವ್ಯಾಪುತ ಸದಾಗಮ 1 ಲೋಕ ವಿಲಕ್ಷಣ ಋಷಿ | ಗುಣವಾರಿ ರಾಸಿ | ವೈಕುಂಠ ನಗರನಿವಾಸಿ | ನಾಕಾರಿಗಳ ಕುಲದ್ವೇಷಿ ಚಿತ್ರ ಸನ್ಯಾಸಿ | ಬೇಕೆಂದು ಭಜಿಪೆ ನಿಲಸಿ | ಜೋಕೆ ಮಾಡುವುದ | ನೇಕ ಪರಿಯಿಂದ | ನಿಕರ ತರಿಸದೆ | ಭೂಕಾಂತರು ನೋಡೆ | ಸಾಕಾರ ದೇವ ಕೃಪಾಕರ ಮುನಿ ದಿವಾಕರ ಭಾಸಾ2 ನಿರುತ ಎನ್ನಯ ಅರಿಷ್ಟ | ಮೆರೆವ ಉನ್ನತ ವಿಶಿಷ್ಟ | ಉರಗ ಕಿನ್ನರ ಗಂಧರ್ವರ | ಕರಕಮಲಗಳಿಂದ | ವರಪೂಜೆಗೊಂಬ | ಸಿರಿ ಅರಸನೆ ನಮ್ಮ ವಿಜಯವಿಠ್ಠಲ ಪರಾ | ಶರಸುತ ಬಲು ವಿಸ್ತರ e್ಞÁನಾಂಬುಧೆ || 3
--------------
ವಿಜಯದಾಸ