ವಂದಿಸುವೆನನವರತ ಇಂದಿರೇಶಾ ಪ
ನೊಂದು ಬಳಲಿದೆನಯ್ಯ ಸಲಹೋ ಶ್ರೀಶಾ ಅ.ಪ
ಇಂದು ನರಜನುಮದೊಳು ನೊಂದೆನಯ್ಯ
ಮುಂದಿನಾ ಜನುಮಗಳ ಸಂದಣಿಗಳೊಳು ನಿನ್ನ
ಸುಂದರ ಪಾದಾಂಬುಜವನೆಂದೆಂದು ತೋರೆಂದು1
ನರಜನ್ಮ ಹಿರಿದೆಂದು ಅರಿತವರು ಪೇಳುವರು
ನರನಾಗಿ ನಾ ಜನಿಸಿ ಗರುವದಿಂದಾ
ಸಿರಿಯಾಸೆಯಿಂದ ಮದ ಪರವೈರ ಲೋಭಗಳ
ದುರಿತಗಳನಾರ್ಜಿಸಿದೆ ಪೊರೆಯೊ ದೇವ 2
ಕಡುಪಾಪ ಕೂಪದೊಳಗಡಗಿರ್ಪೆನೈ ಹರಿಯೆ
ಅಡಿಗಳಿಗೆ ಎಡೆಯಿಲ್ಲ ನುಡಿವರಿಲ್ಲಾ
ಪಿಡಿವುದಕೆ ತೃಣವಿಲ್ಲ ದಡಕೆ ದಾರಿಯು ಇಲ್ಲ
ತಡವೇಕೆ ಎನ್ನ ಕೈಪಿಡಿಯೊ ಗೋಪಾಲ 3
ಖಗರಾಜ ಪೊತ್ತಿಹನು
ಸುಗತಿದಾಯಕನೆಂದು ಹೊಗುಳುವವು ಶೃತಿ ಶಾಸ್ತ್ರ
ನಗಧರನೆ ನಿನ್ನತಾ ನಗಪುತ್ರಿ ನುತಿಸಿಹಳು
ನಗಬೇಡವೈ ಪಾದಯುಗಗಳನು ತೋರೆಂದು4
ನಿನ್ನ ನಾಮದ ಭಜನೆ ಎನ್ನ ರಸನೆಯೊಳಿರಲಿ
ಮುನ್ನಿಗಿಂತೆಂಟುಮಡಿ ಜನುಮ ಬರಲಿ
ಮುನ್ನ ನಾವಾರ್ಜಿಸಿದ ಘನಪಾಪನಶಿಸಲಿ
ಚೆನ್ನ ಮಾಂಗಿರಿವಾಸ ನನ್ನ ಹೃದಯದೊಳಿರಲಿ5