ಕೇಶವನೆಂದು ಕ್ಲೇಶವ ನೀಗಿರಿ
ಕೇಶವನೆಂದು ಭವವನ್ನು ಪ
ಮಾಧವನೆಂದು ಪಾಪವ ಕಳೆಯಿರಿ
ಶ್ರೀಧರನೆಂದು ಶ್ರಮವನ್ನು 1
ರಘುಪತಿಯೆಂದು ಪಾಶವ ಕಡಿಯಿರಿ
ನಗಧರನೆಂದು ಭಯವನ್ನು 2
ಶ್ರೀಪತಿಯೆಂದು ಮತ್ಸರ ತ್ಯಜಿಸಿರಿ
ಮಾಪತಿಯೆಂದು ಖಲರನ್ನು 3
ವಾಮನನೆಂದು ಕಾಮವ ತ್ಯಜಿಸಿರಿ
ರಾಮಯೆಂದು ಸುಳ್ಳನ್ನು 4
ದಾಶರಥೇಯಂದು ಮುಕ್ತಿಯನು 5