ಒಟ್ಟು 8 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆ ಚಂದಿರವದನೆ ಮಂದಗಮನೆ ಕಂದರ್ಪ ಕೋಟಿ ಲಾವಣ್ಯೆ ಪ ಮಂದನಾಗಿ ಭವಸಿಂಧುವಿಲಿ ಪೊಂದಿದೆ ಬಂದು ನೀ ಕರಪಿಡಿದು ಮುಂದಕೆ ಕರೆಯೆ ಅ.ಪ. ನಾಗವೇಣಿಯೆ ಸುರಶ್ರೇಣಿ ಅಗಣಿತಗುಣಮಣಿಯ ಹೊಗಳುವ ಮತಿ ನೀಡೆ ಕಲ್ಯಾಣಿ ಹಗಲಿರುಳು ನಡೆಯುವ ಬಗೆ ಬಗೆ ಕ್ರಿಯೆಗಳು ನಗಧರನೆ ಮಾಳ್ಪಾನೆಂಬ ಮಿಗೆ ಜ್ಞಾನ ಪಾಲಿಸೆ 1 ಸರಸಿಜೋದ್ಭವ ಮಾತೆ ವಿಖ್ಯಾತೆ ನಿಕರ ಸನ್ನುತೆ ಕಂಕಣಾಭರಣ ಭೂಷಿತೆ ಕರೆ ಕರೆಗೊಳಿಸುವ ಅಹಂ ಮಮತೆ ಶರಧಿಯು ತೆರೆಯಂತೆ ಬರುವುದು ಮರೆಸಿ ನೀ ಪೊರೆಯೆ 2 ಹರಿಗುಣ ಮಣಿಯೆಣಿಸುವ ಧೀರೆ ಪರಿಪರಿ ಅಲಂಕಾರೆ ಸ್ಮರಿಸದವರಿಗೆ ದೂರೆ ಅರಿದೂರ ವಿಜಯ ರಾಮಚಂದಿರವಿಠಲನ ನಿರುತ ಧೇನಿಸುವಂತೆ ಮರೆಯದೆ ಮಾಡೆ ತಾಯೆ 3
--------------
ವಿಜಯ ರಾಮಚಂದ್ರವಿಠಲ
ಏಸುಬಾರಿ ಬೇಡಿದರೆ ಹೇಗಾಯಿತು ಹರೇ ವಾಸುದೇವನೆ ನಿನ್ನ ಧ್ಯಾನಕೆ ಸರಿಬಾರದಿರೆ ಪ ಪರಿ ಘಾಸಿಗೊಳಗಾಗಿ ಬಹು ಕ್ಲೇಶದಿಂದಲಿ ನಿನ್ನ ಆಶಿಸಿದವನಾ ಭೂಸುರ ಧೊರಿಯೆ ಶ್ರೀನಿವಾಸ ವೇಣುಗೋಪಾಲ ಕೂಸಿನಂದದಿ ಎತ್ತಿ ಪೋಷಿಸುವುದು ನಿನಗೆ ಹುಟ್ಟದೊ 1 ಸಂಸಾರ ವೆಂಬಂಥ ಶರಧಿಯೊಳು ಮುಳುಗಿ ಬಹು ಹಿಂಸೆ ಬಡುತಲಿ ಬಹಳ ಹೀನನಾಗಿ ಕಂಸಮರ್ದನನಾದ ಘನಮಹಿಮಗೋವಿಂದ ಸಂಶಯವಿಲ್ಲದೆ ನಿಮ್ಮ ಸ್ಮರಿಸುತಲಿ ಅನುದಿನವೂ 2 ಅಘಹರನೆ ನಗಧರನೆ ಆದಿ ಪರಾಕ್ರಮನೆ ನಿಗಮಗೋಚರನಾದ ಘನ 'ಹೊನ್ನ ವಿಠ್ಠಲ 'ನೆ ಜಗತ್ಕರ್ತನೆ ನಿನ್ನ ಚಿಂತನೆಯೆ ಅನುದಿನವೂ ಕರುಣಹುಟ್ಟದೇನು 3
--------------
ಹೆನ್ನೆರಂಗದಾಸರು
ಕೇಶವನೆಂದು ಕ್ಲೇಶವ ನೀಗಿರಿ ಕೇಶವನೆಂದು ಭವವನ್ನು ಪ ಮಾಧವನೆಂದು ಪಾಪವ ಕಳೆಯಿರಿ ಶ್ರೀಧರನೆಂದು ಶ್ರಮವನ್ನು 1 ರಘುಪತಿಯೆಂದು ಪಾಶವ ಕಡಿಯಿರಿ ನಗಧರನೆಂದು ಭಯವನ್ನು 2 ಶ್ರೀಪತಿಯೆಂದು ಮತ್ಸರ ತ್ಯಜಿಸಿರಿ ಮಾಪತಿಯೆಂದು ಖಲರನ್ನು 3 ವಾಮನನೆಂದು ಕಾಮವ ತ್ಯಜಿಸಿರಿ ರಾಮಯೆಂದು ಸುಳ್ಳನ್ನು 4 ದಾಶರಥೇಯಂದು ಮುಕ್ತಿಯನು 5
--------------
ಕರ್ಕಿ ಕೇಶವದಾಸ
ಖಗಗಮನ ಜಗದ ಜೀವನ ರಘುವಂಶೋದ್ಧಾರಣ ನಗಧರನೆ ನಿಗಮಗೋಚರ ನಾಗಶಯನ ಮುರಮರ್ದನ ಪ ವನಜಸಂಭವವಿನುತ ಮನುಮುನಿವಂದಿತ ಜನಕಜೆಯ ಪ್ರಾಣಪ್ರಿಯ ವನಮಾ ಲನೆ ಭವಮೋಚನ ಜಯವಾಮನ ಸುಖಧಾಮನೆ ಇನಕೋಟಿಪ್ರಭಾಮಯ ವನಜಾಕ್ಷನೆ 1 ಸತಿಯ ಪಾಷಾಣಸ್ಥಿತಿವಿಮೋಚನ ಪತಿತಪಾವನ ಸತ್ಯಭಾಮೆರಮೆಯ ನಾಥ ನುತಕಿಂಕರ ಹಿತಮಂದಿರ ಜಿತದಶಶಿರ ಹತಮುಪ್ಪುರ ನತಿಹಿತ ರತಿ ಪತಿಪಿತ ಕ್ಷಿತಿಧವ 2 ದಾಮೋದರ ಶ್ರೀರಾಮ ಭಕುತಪ್ರೇಮ ನಿಸ್ಸೀಮ ಸ್ವಾಮಿ ನೀಲಮೇಘಶ್ಯಾಮ ಭೂಮಿಜ ವರಸ್ಮರಣೀಕರ ಕಾಮಿತ ವರವೀಯುವ ಸ್ಥಿರವಿಮಲಚರಿತ ಕರುಣಾಕರ 3
--------------
ರಾಮದಾಸರು
ಗುರು ಮೋಹನ ವಿಠಲ ಸಲಹಬೇಕಿವನಾಕರುಣಾ ಪಯೋನಿಧಿಯೆ ಮರುತಾಂತರಾತ್ಮ ಪ ನಿಗಮವೇದ್ಯನೆ ಹರಿಯೆ | ರಘುರಾಮ ದಾಸರೊಳುಮಿಗೆ ಸುಪ್ರೇರಕನಾಗಿ | ಮಗನ ಮದುವೆಯಲೀಅಘಹರವು ತವನಾಮ | ಸದ್ಗುರೂ ಕರುಣೆಯಲಿನಗುನಗುತ ಒದಗಿಸಿದೆ | ನಗಧರನೆ ದೇವಾ 1 ಮೋದ ಪಾದ ಕಾ ನಮಿಪೇ 2 ಹರಿಗುರೂ ಸದ್ಭಕ್ತಿ | ತರತಮದ ಸುಜ್ಞಾನಕರುಣಿಸೀ ಪೊರೆ ಇವನ | ಗುರುವಂತರಾತ್ಮ |ಪರಮ ಗುರು ಕಾರುಣ್ಯ | ದರುಶನವ ಪಡೆದಿಹನುಪರಿಪರಿಯ ಸೌಖ್ಯಗಳ | ಕರುಣಿಸೋ ಹರಿಯೇ 3 ಸೊಲ್ಲು ಲಾಲಿಸುತಾ 4 ದಾವಾಗ್ನಿಯನೆ ನುಂಗಿ | ಗೋವಳರ ಪಾಲಿಸಿದೆಪಾವಮಾನಿಯ ಪ್ರೀಯ | ನೀ ವೊಲಿದು ಇವಗೇಭಾವದಲಿ ತವರೂಪ | ತೋರೆಂದು ಭಿನ್ನವಿಸೆದೇವದೇವನೆ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಜ್ಞಾನಪ್ರದ ನರಸಿಂಹ ವಿಠಲ ನೀ ಸಲಹೊ ಪ ಧೇನು ವತ್ಸದ ಧ್ವನಿಗೆ ತಾನೇವೆ ಬರುವಂತೆ ಅ.ಪ. ಕರ್ಮ ಪೂರ್ವಾರ್ಜಿತವ ನಿರ್ಮಲವ ಗೊಳಿಸುತ್ತಭರ್ಮ ಗರ್ಭನ ಜನಕ ಪೇರ್ಮೆಯಲಿ ಇವನಧರ್ಮ ಮಾರ್ಗದಿ ನಡೆಸು ಸುಜ್ಞಾನ ಮತಿಯಿತ್ತುಕರ್ಮನಾಮಕ ಹರಿಯೆ ಶರಣಜನ ಧೊರೆಯೆ 1 ಹರಿಯು ಸರ್ವೋತ್ತಮನು ಶಿರಿಯು ಆತನರಾಣಿಗುರು ವಾಯು ಸುರರೆಲ್ಲ ಹರಿಭೃತ್ಯರೆಂಬವರಮತಿಯನಿತ್ತವಗೆ ಸಂಸ್ಕøತಿಯ ಕ್ಲೇಶಗಳಪರಿಹರಿಸಿ ಪಾಲಿಪುದು ಪರಮ ಕರುಣಿಕಾ 2 ಪತಿ ಇರುವೆ ಮೂಕ ಪುರುಷರ ನೀನು ವಾಕ್ಪತಿಯ ಮಾಳ್ಪೆನಾಕೇಳ್ಪುದರಿದೇನೊ ಪಂಚ ಮುಖ ಭವವಂದ್ಯತೋಕನಿವ ಶರಣಗಿಹ ವ್ಯಾಕುಲವ ಕಳೆಯೋ 3 ಮಗುವಿನೊಚನವ ಕೇಳಿ ಜಿಗಿವೆ ಕಂಬದಲಿಂದನಗೆ ಮೊಗನೆ ತರಳೆಯಾ ಹಗರಣವ ಕಳೆದೇಖಗವರಧ್ವಜ ನಿನ್ನ ಬಗೆಬಗೆಯ ಲೀಲೆಗಳಮಿಗಿಲಾಗಿ ತೋರಿವಗೆ ನಗಧರನೆ ಹರಿಯೇ 4 ನಿತ್ಯತವ ಸ್ಮøತಿಯಿತ್ತು ಭೃತ್ಯನತಿ ಕಷ್ಟಗಳಕಿತ್ತೊಗೆದು ಮಧ್ವಮತ ತತ್ವ ತಿಳಿಸುತ್ತಾಗುಪ್ತ ಮಹಿಮನೆ ಗುರುಗೋವಿಂದ ವಿಠ್ಠಲನೆಭಕ್ತನುದ್ಧರಿಸೆಂದು ಪ್ರಾರ್ಥಿಸುವೆ ನಿನ್ನಾ 5
--------------
ಗುರುಗೋವಿಂದವಿಠಲರು
ಪಾಲಿಸು ಪನ್ನಗಧರನೆ ಪ ಅಂಧಕ ಮಥನನೆ ಗಂಗಾಧರನೆ ಕುಂದೇಂದು ನಿರ್ಮಲ ಭೂತಿ ಭೂಷಿತನೆ 1 ಶಂಕರ ಭವಭಯ ಶಂಕಾವಿನಾಶ ನ್ಯಂಕುಭಾಸಿತ ಕರಪಂಕಜ ಭೂಷ 2 ಕೈಲಾಸ ವಾಸನೆ ಕಾಲಕಂಧರನೆ ಶೈಲಜಾ ಕುಚತಟ ಕುಂಕುಮ ಭಾಸ3 ಗಂಗಾಜನಕ ಪ್ರಿಯ ಅಂಗಜ ಹರಣ ತುಂಗಭುಜಗ ಚಂದ್ರ ಸಂಗಮಹಿಮ 4 ಲೀಲಾತಾಂಡವ ಗೌರೀ ಲಾಲಿತ ಹೃದಯ ಬಾಲಕ ನುತಿಪ್ರೀತ ಧೇನು ಪುರೀಶಾ 5
--------------
ಬೇಟೆರಾಯ ದೀಕ್ಷಿತರು
ವಂದಿಸುವೆನನವರತ ಇಂದಿರೇಶಾ ಪ ನೊಂದು ಬಳಲಿದೆನಯ್ಯ ಸಲಹೋ ಶ್ರೀಶಾ ಅ.ಪ ಇಂದು ನರಜನುಮದೊಳು ನೊಂದೆನಯ್ಯ ಮುಂದಿನಾ ಜನುಮಗಳ ಸಂದಣಿಗಳೊಳು ನಿನ್ನ ಸುಂದರ ಪಾದಾಂಬುಜವನೆಂದೆಂದು ತೋರೆಂದು1 ನರಜನ್ಮ ಹಿರಿದೆಂದು ಅರಿತವರು ಪೇಳುವರು ನರನಾಗಿ ನಾ ಜನಿಸಿ ಗರುವದಿಂದಾ ಸಿರಿಯಾಸೆಯಿಂದ ಮದ ಪರವೈರ ಲೋಭಗಳ ದುರಿತಗಳನಾರ್ಜಿಸಿದೆ ಪೊರೆಯೊ ದೇವ 2 ಕಡುಪಾಪ ಕೂಪದೊಳಗಡಗಿರ್ಪೆನೈ ಹರಿಯೆ ಅಡಿಗಳಿಗೆ ಎಡೆಯಿಲ್ಲ ನುಡಿವರಿಲ್ಲಾ ಪಿಡಿವುದಕೆ ತೃಣವಿಲ್ಲ ದಡಕೆ ದಾರಿಯು ಇಲ್ಲ ತಡವೇಕೆ ಎನ್ನ ಕೈಪಿಡಿಯೊ ಗೋಪಾಲ 3 ಖಗರಾಜ ಪೊತ್ತಿಹನು ಸುಗತಿದಾಯಕನೆಂದು ಹೊಗುಳುವವು ಶೃತಿ ಶಾಸ್ತ್ರ ನಗಧರನೆ ನಿನ್ನತಾ ನಗಪುತ್ರಿ ನುತಿಸಿಹಳು ನಗಬೇಡವೈ ಪಾದಯುಗಗಳನು ತೋರೆಂದು4 ನಿನ್ನ ನಾಮದ ಭಜನೆ ಎನ್ನ ರಸನೆಯೊಳಿರಲಿ ಮುನ್ನಿಗಿಂತೆಂಟುಮಡಿ ಜನುಮ ಬರಲಿ ಮುನ್ನ ನಾವಾರ್ಜಿಸಿದ ಘನಪಾಪನಶಿಸಲಿ ಚೆನ್ನ ಮಾಂಗಿರಿವಾಸ ನನ್ನ ಹೃದಯದೊಳಿರಲಿ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್