ಹಾಲಹಲ ಉಂಡ ನಮ್ಮ ಪಾರ್ವತಿಯ ಗಂಡ ಪ.
ನೀಲಕಂಠನೆಂದೆನಿಸುತ ಸುರರನು ಪಾಲಿಸಿದನು ಕಂಡ್ಯಾ ಅ.ಪ.
ಸುರರು ಅಸುರರು ಕೂಡಿ ಶರಧಿಯ
ಭರದಿ ಮಥನವ ಮಾಡಿ
ಗರಳವು ಉದ್ಭವಿಸಲು ಕಂಗೆಡುತಲಿ
ಹರನನು ಸ್ತುತಿಮಾಡಿ 1
ಮೃತ್ಯುಂಜಯ ಪಾಹಿ | ಸಲಹೊ
ಕೃತ್ತಿ ವಾಸನೆ ಪಾಹಿ
ಮೃತ್ಯುವಾದ ವಿಷ ಭಯವನೆ ಬಿಡಿಸೈ
ಸತ್ಯವಿಕ್ರಮ ಪಾಹಿ 2
ಪರಿಪರಿ ಸ್ತುತಿಗೈಯೆ | ಹರಮನ
ಕರಗುತ ಕೃಪೆ ಗೈಯೆ
ಗಿರಿಜೆ ನೀಡು ಅಪ್ಪಣೆ ವಿಷ ಕುಡಿವೆನು
ಪರಮ ಮಂಗಳ ಕಾಯೆ 3
ತನುಸುಖವ ತೊರೆದು | ಲೋಕವ
ಘನಕೀರ್ತಿಯನು ಪಡೆಯಲು ಹರಿ ಮೆಚ್ಚುವ
ಎನುತ ಗಿರಿಜೆಗೆ ಪೇಳ್ದು 4
ಕರದಿ ಸೆಳೆದು ಕುಡಿದ | ವಿಷವನು
ವಿಧಿ ಕಂದ
ಹರಿಯ ಕೃಪೆಯಿಂದ 5
ನಗಜೇಶನು ಕೇಳ
ಬಿಗಿದು ಕಂಠದಿ ನಿಲ್ಲಿಸಿ ಲೋಕವ
ಪೊರೆದನು ಉರಿಫಾಲ 6
ಪೋಯ್ತು ಕಾಳರಾತ್ರಿ | ಮಂಗಳ
ಆಯಿತು ಶಿವರಾತ್ರಿ
ಶ್ರೀಯರಸ ಗೋಪಾಲಕೃಷ್ಣ
ವಿಠ್ಠಲನ ಪ್ರೀತಿ ಪಾತ್ರ 7