ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಲಮುಖಿಯೆ ಕಮಲಾಲಯೆ ಕಮಲೆಕಮಾಲಾಕ್ಷಿಯೆ ಕೋಮಲೆ ಪ. ಕಮಲನಾಭನ ಪಾದಕಮಲಯುಗಳ ಮಧುಪೆಕಮಲಜ ಜನನಿಯೆ ಕಮಲಮಿತ್ರೆ ಸುಪ್ರಭೆ ಅ.ಪ. ಅರುಣನ ಪೋಲುವ ಚರಣವು ಬಾಲಚಂದಿರನ ಸೋಲಿಪ ನಖವುಬೆರಳಲ್ಲಿ ಪಿಲ್ಲಿ ಕಾಲುಂಗುರ ಮೆಂಟಿಕೆ ಕಿರುಗೆಜ್ಜ್ಯಂದಿಗೆ ಪೆಂಡೆಯುಕರಿಯ ದಂತದಂತೆ ಜಾನುದರ್ಪಣ ಜಂಘೆ ಉಟ್ಟ ದಟ್ಟಿಯು ನೆರಿಗೆಯುಹರಿನಡು ಕಿಂಕಿಣಿ ಭರದಿ ಒಡ್ಯಾಣವು ಉದರ ತ್ರಿವಳಿರೇಖೆ ವರ ಕಂಚುಕಧಾರಿ1 ಉರೆ ವೈಜಯಂತೀ ಮಂದಾರಮೆರೆವ ಚುಬುಕ ಬಿಂಬಾಧರ ಕೂರ್ಮಕದಪು ಕಿರಿದಂತ ರತುನದ ಕರಡಿಗೆ ವದನೆ 2 ಸುರಭಿ ಚಂಪಕನಾಸಿಕ ಮೂಗುತಿ ಶಾಂತ ಪರಮ ಕರುಣ ನೋಟದಹರಿಣನಯನೆ ಪುಬ್ಬುಸ್ಮರನ ಚಾಪದಂತೆ ಕರ್ಣಾಭರಣಲಂಕಾರ ಸಿರಿಕುಂಕುಮ ಕಸ್ತೂರಿ ತಿಲಕದ ಮೇಲೆ ಅರಳೆಲೆ ಬೈತಲೆಯ ಸರ ಕುರುಳುಸುಳಿಯು ಪರಿಪರಿ ರತ್ನ ಖಚಿತದ ವರ ಮಕುಟವು ಕೋಟಿ ತರಣಿಯಂತೊಪ್ಪುವ 3 ತೆತ್ತೀಸಕೋಟಿ ದೇವತೆಗಳು ವಾಣಿ ಭಾರತಿ ಪಾರ್ವತಿ ಮೊದಲಾದಉತ್ತಮಸ್ತ್ರೀಯರು ಛತ್ರಚಾಮರನೆತ್ತಿ ಬೀಸುವಲಂಕಾರಸುತ್ತಗಂಧರ್ವರು ತುಂಬುರ ನಾರದರು ಸ್ವರವೆತ್ತಿ ಪಾಡುವ ಝೇಂಕಾರತತ್ತರಿತರಿಘಟ್ಟ ಝಣುತ ಝಣುತ ಎಂದು ಎತ್ತ ನೋಡಿದರತ್ತ ತಥೈ ಎಂಬೊ ಶಬ್ದ 4 ಅಜ ಫಾಲಾಕ್ಷ ಸುರವಿನುತೆಮೋಕ್ಷದಾಯಕಿ ಲೋಕರಕ್ಷಕಿ ರಮಾದೇವಿ ಇಕ್ಷುಧನ್ವನ ಜನನಿಅಕ್ಷಯಫಲದ ಗೋಪಾಲವಿಠಲನ ಪ್ರತ್ಯಕ್ಷ ತೋರಿಸೆನ್ನಪೇಕ್ಷೆ ಪೂರೈಸೆ ತಾಯೆ 5
--------------
ಗೋಪಾಲದಾಸರು