ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನಾರವ ಪೇಳೆನ್ನ ಕಣ್ಣ ಮುಚ್ಚುವೆ |ಮೌನಗೊಂಡರಿಯದಂತಿಪ್ಪ ಮಗುವೆ ಪಅತಿ ಚೆಲುವಿಗೆ ರತಿಪತಿಪಿತನೊ-ನೀ |ಶ್ರುತಿಸಕಲಾನ್ವುಯ ಸನ್ನುತನೊ ||ಚತುರ್ದಶ ಭುವನವನಾಳಿದನೋ-ನೀ |ಶತತಪ್ಪುಗಳನೆಣಿಸಿದವನೊ?1ವರಗೋಕುಲಕೊಪ್ಪವ ದೊರೆಯೊ-ನೀ |ಕರಿವೈರಿಯ ಮದಪರಿಹಾರಿಯೊ ||ಗಿರಿಯನುದ್ಧರಿಸಿದ ನಖರುಚಿಯೊ-ನೀ |ಮುರದೈತ್ಯನ ಮಡುಹಿದ ಸಿರಿಯೊ? 2ಮಂಗಳ ಶೋಭನ ಮಣಿಖಣಿಯೊ-ನೀ |ಹಿಂಗದೆ ಸ್ತುತಿಪರ ಗತಿದಾನಿಯೊ-ಗೋ-||ಪಾಂಗನೆಯರ ಪ್ರಾಣದ ಧನಿಯೊ-ನೀ |ಸಿಂಗರ ಸೊಬಗಿನ ಶ್ರೀಪತಿಯೊ 3ಆಪತ್ತಿಗೆ ನೆನೆವರ ಗೋಚರನೊ-ನೀ |ಪಾಪಸಂಹಾರ ಪುರುಷೋತ್ತಮನೊ ||ಚಾಪದಿಂದಸುರರ ಗೆಲಿದವನೊ-ಸಾಂ-|ದೀಪನ ಮಗನ ತಂದಿತ್ತವನೊ? 4ಬೆಸಗೊಂಡಳುಗೋಪಿನಸುನಗುತ-ಆಗ |ಯಶೋದೆಗೆ ಚತುರ್ಭುಜ ತೋರಿಸುತ ||ಅಸುರಾರಿಯ ಕಂಡು ಮುದ್ದಿಸುತ ನೀ ||ಶಿಶುವಲ್ಲ ಪುರಂದರವಿಠಲೆನುತ 5
--------------
ಪುರಂದರದಾಸರು