ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಐಸಿರಿಯನೇನೆಂದು ಪಾಡಲಿ ಶ್ರೀಹರಿಯ ಮೈಸಿರಿಯ ಪಾದಾದಿ ಕೇಶ ಪರ್ಯಂತ ಪ ಸಿರಿಯ ಕರಾಬ್ಜ ಪರಾಗದಿಂ ರಂಜಿಪ ಸರಸಿಜ ಕುಂಕುಮರಜ ರಮ್ಯವೆಂದೆನಿಪ ನಿರುತ ಯೋಗೀಂದ್ರ ಹೃತ್ಕಮಲವನರಳಿಪ ತರುಣಾತಪದ ಕಾಂತಿಯೆನೆ ಕಂಗೊಳಿಪ ವರಶ್ರುತಿ ಸೀಮಂತ ಸಿಂಧೂರವೆನೆ ತೋರ್ಪ ಫಣಿ ರತುನಾರತಿಯೆನಿಪ ಸುರುಚಿರ ಶೋಣ ಪ್ರವಾಳವ ಸೋಲಿಪ ಅರುಣಾಂಬುರುಹದಂದದಿ ಥಳಥಳಿಪ 1 ಚರಣತಳಂಗಳೊಪ್ಪುವ ತನಿ ಕೆಂಪಿನ ಶರಣ ಚಿಂತಾಮಣಿಯ ನಸುಗೆಂಪಿನ ಧರಣಿಯನೀರಡಿ ಮಾಡಿದ ಪೆಂಪಿನ ಕರುಣದಿ ಕಲ್ಲ ಪೆಣ್ಮಾಡಿದ ಸೊಂಪಿನ ಕರ ಶಂಖ ಪದ್ಮ ರೇಖಾಂಕಿತದಿಂಪಿನ ಕುರುನೃಪಗರ್ವ ನಿರ್ವಾಹಾಪಗುಂಪಿನ ಸುರಮಣೀಮಕುಟ ನಾಯಕದ ಸೊಂಪಿನ ಪರಮಪಾವನ ಪಾದದುಂಗುಟದಲಂಪಿನ 2 ಕಂಜಭವಾಂಡ ಸೋಂಕದ ಮುನ್ನ ಬೆಳಗುವ ಸಂಜನಿಸಿಹ ಗಂಗೆ ಮುದದಲ್ಲಿ ಮುಳುಗುವ ಭುಂಜಿಸಿತಮಸ ಜಗಂಗಳ ಬೆಳಗುವ ಮಂಜೀರ ಕಡಗ ಭಾಪುರಿಗಳಿಂ ಮೊಳಗುವ ಮಂಜುಳಾಂಗದಿ ನಖಪಂಕ್ತಿಗಳ್ ತೊಳಗುವ ರಂಜನೆಯಿಂ ಶ್ರೀಮದಂಘ್ರಿಗಳೆಸೆವ ವಂಚಿತ ಸೌಮ್ಯ ಜಂಘೆಗಳಿಂ ಸೊಗಯಿಸುವ ಕುಂಜರ ರುಚಿಯ ಪೂರ್ಣೇಂದು ರಂಜಿಸುವ 3 ಅಳವಟ್ಟ ಪೀತಾಂಬರದ ಸುಮಧ್ಯದ ಕಳಕಾಂಚಿದಾಮದುನ್ನತ ಕಟಿತಟದ ನಳಿನಾಲವೋದಿತ ನಾಭಿಪಂಕರುಹದ ಇಳೆಯ ಜನಂಗಳಿಗೆನಿಸುವ ವುದರದ ವಿಳಸದಲಂಕೃತ ಬಾಹು ಚತುಷ್ಟದ - ಮಳ ಶಂಕಚಕ್ರ ಸದಬ್ಜ ಸಂಭೃತದ ಪೊಳೆವ ಕೌಸ್ತುಭಮಣಿ ಶ್ರಿವತ್ಸೋದರದ ತುಳಸಿ ಮಂದಾರ ಮಾಲೆಗಳ ಕಂಧರದ 4 ಘನ ಸೌಭಗ ಗಂಡಮಂಡಲಯುಗ್ಮದ ಮಕರಕುಂಡಲ ಕರ್ಣಯುಗ್ಮದ ವನಜ ನೇತ್ರಂಗಳ ಕರುಣಾಕಟಾಕ್ಷದ ವಿನುತ ಮೌಕ್ತಿಕದಿಂದ ಮೆರೆವ ನಾಸಿಕದ ನಸು ಮೋಹನದಿ ಸಮನಿಪ ಚುಬುಕಾಗ್ರದ ತನಿರಸ ತುಳುಕುವ ಚೆಲುವಿನಧರದ (?)ಲಲಿತ ವದನದ ವರದಂತಪಂಙ್ತಯ ಇನಿಗೆದರುವೆಳನಗೆಯ ಸಿರಿಮೊಗದ 5 ಸಿಂಗಾಡಿಯಿಂ ಮಿರುಗುವ ಪುರ್ಬುಗಳ ಸ - ನಾಸಿಕ ಬೆಳ ದಿಂಗಳ ಪೊಂಗಿನ ಕಸ್ತೂರಿ ತಿಲಕ ರ ತ್ನಾಂಗದ ರಂಗಿನ ಮಕುಟ ಮಸ್ತಕದ ನೀ ಲಾಂಗದಳಾಂಗನೆಯರು ಸುರಪುರ ಮಧ್ಯ ನಿಖಿಳ ಜ ಗಂಗಳ ಹಿಂಗದೆ ಪೊರೆವ ಶ್ರೀ ಲಕ್ಷ್ಮೀಶ ಮಂಗಳೋತ್ತುಂಗ ಮೂರುತಿಗೆ ನಮೋ ನಮೋ 6
--------------
ಕವಿ ಲಕ್ಷ್ಮೀಶ
ಮೂರ್ತಿಧ್ಯಾನ ಕಮಲಜ ಹೃತ್ಸರೋವರ ಕಂಜವೆಂಸಾ ಮನುಜ ಹೃದ್ವ್ಯೋಮದಿ ಮಿಂಚಿನಂತೆಸೆವಾ ಧ್ವಜವಜ್ರ ಪದುಮ ಪತಾಕಾಂಕುಶ ವಹ ನಿಜಕಾಂತಿಯಲರುಣಾಬ್ಜದಂತೆಸೆವಾ ಪದತಳದ ಮೇಲೆ ಥಳಥಳಿಸುತಲಿಹ ಪದುಮಭವಾಂಡ ಭೇದನದಕ್ಷವೆನಿಸುವಾ ಸುರವಾಹಿನಿಗೆ ತೌರುಮನೆ ತಾನಹ ದುರುಳ ಶಕಟತನುಚೂರ್ಣೀಕೃತವಹ ಪಾರ್ಥಶರೀರ ರಕ್ಷಣಕರ್ತೃತಾನಹ ಪಾತಕ ಪರಿಹರವಹ ಉಂಗುಟದಿಂ ಭುವನಗಳತಿಗಳ ಹಿಂಗಿಪ ನಖಪಂಕ್ತಿಗಳ ಕಿರಣಗಳಾ ವೀರಮುದ್ರಿಕೆಯ ಮಂಟಿಕೆಯಕಾಂತಿಗಳಾ ವೋರಂತೆ ಪೆರ್ಚಿಹ ಪಾದಾಂಗುಲಿಗಳಾ ತೊಳಪ ಕಡೆಯ ಪೆಂಡೆಯದ ತೊಡವು ಗಳ ವೈಕುಂಠಗಿರಿ ವೇಂಕಟೇಶ ನಿನ್ನಾ | ಚರಣಸೇವೆಯನೇ ಕರುಣಿಸಯ್ಯಾ
--------------
ಬೇಲೂರು ವೈಕುಂಠದಾಸರು