ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

4. ಗೊರೂರು ಹೇಮಾವತೀ ತೀರ ನಿಲಯಾ ನಮೋ ಶ್ರೀಮನೃಸಿಂಹ ಶರಣೆನ್ನು ಬಿಡದೆ ಮನವೇ ಪ ಅರಸು ಮುನಿವಾಗ ಆತ್ಮರು ಮೊಗವ ತೆಗೆವಾಗ ದುರುಳ ಮಾನವರಿಟ್ಟೆಡೆಯಲಿರುವೆಂಬಾಗ ಸುರರು ಮ ತ್ಸರಿಪಾಗ ನರಸಿಂಹ ಶರಣೆನ್ನು ಮನವೇ 1 ಮುಗಿಲಗಲದಾಪತ್ತು ಕವಿವಾಗ ಕ್ರೂರಗೃಹ ಪಗೆಗಳಿಟ್ಟುಣಿಪಾಗ ಅನಲ ಜಲಭಯದಿ ಮಿಗೆ ಮುಳುಗುವಾಗ ರೋಗಗಳು ಪೀಡಿಸುವಾಗ ಮೃಗರಾಜವದನ ಶರಣೆನ್ನು ಬಿಡದೆ ಮನವೇ 2 ಸುಖವ ಪಡುವಾಗ ದು:ಖಕ್ಕೆ ಮನವ ತೆಗೆವಾಗ ಅಖಿಲ ಪಾತಕದ ನೆರೆಕಾಲಲೊದೆವಾಗ ಮಖಮಥನ ಕಮಲಭವಮುಖ ದಿವಿಜವಂದ್ಯಪದ ನಖನೆ ಶ್ರೀ ವೈಕುಂಠಪತಿ ಚನ್ನರಾಯ[ನೆನುಮನವೆ] 3
--------------
ಬೇಲೂರು ವೈಕುಂಠದಾಸರು
ಉಗಾಭೋಗ ವಿಕ್ರಮ ಸಂವತ್ಸರದಲ್ಲಿ ನಿನ್ನ ನಿಜ ದಾಸಕೂಟ ಜನಕೆ ಪ- ರಾಕ್ರಮ ಹೆಚ್ಚಲಿ ಅಚ್ಚುತಾನಂತ ಕೃಷ್ಣ ಶಕ್ರಾನುಜನೆ ನಿನ್ನ ದೂತ ಹನುಮನ ಸೇವೆ ವಕ್ರವಿಲ್ಲದೆ ನಡೆದು ನಿನ್ನ ಕೃಪೆಯಾಗಲಿ ಅಕ್ರೂರವರದ ತಂದೆ ಮುದ್ದುಮೋಹನ್ನರ ವಿಕ್ರಮೌದಾರ್ಯ ದಶ ದಿಕ್ಕುಗಳ ಬೆಳಗಲಿ ಶಕ್ರಾನುಜನೆ ಉದರ ಬಗೆದು ತರಳನ ಕಾಯ್ದ ವಕ್ರನಖನೆ ನಮ್ಮ ನೀತ ಶ್ರೀ ಗುರುಗಳಿಗೆ ವಿಕ್ರಮ ಶಾಂತಿ ಆಯುರಾರೋಗ್ಯ ಭಾಗ್ಯವಿತ್ತು ಚಕ್ರಧರನೆ ನಿನ್ನ ಸೇವೆ ಕೈಕೊಂಡೆಮ್ಮ ಭವ- ಚಕ್ರ ತೊಡಕು ಬಿಡಿಸಿ ದಾಸ ಜನರ ಕಾಯೋ ಉ- ರು ಕ್ರಮದೇವ ಜಗಚ್ಚಕ್ರವರ್ತಿಯೆ ನಮೋ ಶಕ್ತಾದ್ಯಮರ ನುತ ಗೋಪಾಲಕೃಷ್ಣವಿಠಲಾ
--------------
ಅಂಬಾಬಾಯಿ